ಈ ಫೋಟೋದಲ್ಲಿ ತನ್ನ ಪುಟ್ಟ ಕೈಗಳಿಂದ ಅಪ್ಪನ ಕತ್ತು ಬಳಸಿ ನಗುತ್ತಾ ಫೋಟೋಗೆ ಫೋಸ್ ನೀಡಿರುವ ಈ ಮುದ್ದು ಪುಟಾಣಿ ಈಗ ಸ್ಯಾಂಡಲ್ವುಡ್ಗಿಂತ ಟಾಲಿವುಡ್ನಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ.
- " class="align-text-top noRightClick twitterSection" data="
">
ಶಿವರಾಜ್ಕುಮಾರ್ ಅಭಿನಯದ 'ವಜ್ರಕಾಯ' ಚಿತ್ರದಿಂದ ಕೆರಿಯರ್ ಆರಂಭಿಸಿದ ನಭಾ ನಟೇಶ್ ಬಾಲ್ಯದ ಫೋಟೋ ಇದು. ಚಿಕ್ಕಮಗಳೂರಿನ ಶೃಂಗೇರಿಗೆ ಸೇರಿದ ನಭಾ ನಟೇಶ್ ಎಂಜಿನಿಯರಿಂಗ್ ಪದವೀಧರೆ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಮಾಡುತ್ತಿದ್ದ ನಭಾಗೆ 19ನೇ ವಯಸ್ಸಿನಲ್ಲೇ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಜೊತೆ ನಟಿಸುವ ಅವಕಾಶ ದೊರೆಯಿತು. 'ವಜ್ರಕಾಯ' ಚಿತ್ರದಲ್ಲಿ ನಭಾ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಯಿತು. ಈ ಚಿತ್ರದಲ್ಲಿ 'ಬೆಸ್ಟ್ ಡೆಬ್ಯೂ ಆ್ಯಕ್ಟ್ರಸ್' ವಿಭಾಗದಲ್ಲಿ ಫಿಲಂಫೇರ್ ಪ್ರಶಸ್ತಿ ಕೂಡಾ ನಭಾಗೆ ದೊರೆಯಿತು.
- View this post on Instagram
A still from my movie #VAJRAKAYA#proudPataka#horselove#actorworld#unlimitedfun<3
">
ಕನ್ನಡದಲ್ಲಿ 3 ಚಿತ್ರಗಳಲ್ಲಿ ನಟಿಸಿದ ನಭಾಗೆ ಟಾಲಿವುಡ್ನಿಂದ ಕೂಡಾ ಆಫರ್ ಬಂತು. ರವಿಬಾಬು ನಿರ್ದೇಶನದ 'ಅಧುಗೋ' ಸಿನಿಮಾದಿಂದ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಭಾ ನಂತರ ಸುಧೀರ್ ಬಾಬು ಜೊತೆ 'ನನ್ನು ದೋಚುಕುಂದುವಟೇ' ರಾಮ್ ಪೋತಿನೇನಿ ಜೊತೆ 'ಇಸ್ಮಾರ್ಟ್ ಶಂಕರ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದ ವಾರ ಬಿಡುಗಡೆಯಾದ 'ಇಸ್ಮಾರ್ಟ್ ಶಂಕರ್' ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="
">