ಸಿನಿಮಾ ನಟರು, ಅವರ ಜೀವನ ಶೈಲಿ, ಕುಟುಂಬ ಎಂದರೆ ಎಲ್ಲರಿಗೂ ಆಸಕ್ತಿ ಇರುತ್ತದೆ. ಅಪರೂಪಕ್ಕೆ ತೆರೆ ಮೇಲೆ ಕಾಣಿಸಿಕೊಳ್ಳುವ ನಟರ ಕುಟುಂಬದವರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಯಾವಾಗಲೂ ಕಾತರದಿಂದ ಕಾಯುತ್ತಿರುತ್ತಾರೆ.
- " class="align-text-top noRightClick twitterSection" data="
">
ಕೆಲವು ದಿನಗಳ ಹಿಂದೆ ಈ ಮುದ್ದು ಹುಡುಗನ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹರಿದಾಡುತ್ತಿದೆ. ಈತ ಯಾರು ಗೊತ್ತಾ..? ಖ್ಯಾತ ಖಳನಟ ಪ್ರಕಾಶ್ ರೈ ಅವರ ಪುತ್ರ ವೇದಾಂತ್. ಪ್ರಕಾಶ್ ರೈ ಅವರ ಎರಡನೇ ಪತ್ನಿ ಪೋನಿ ವರ್ಮಾಗೆ ಜನಿಸಿದ ವೇದಾಂತ್ ಸೆಲಬ್ರಿಟಿ ಕಿಡ್. 1994 ರಲ್ಲಿ ಲಲಿತಾ ಕುಮಾರಿ ಅವರ ಕೈ ಹಿಡಿದಿದ್ದ ಪ್ರಕಾಶ್ ರೈಗೆ ಮೇಘನಾ , ಪೂಜಾ ಹಾಗೂ ಸಿದ್ದು ಎಂಬ ಮೂವರು ಮಕ್ಕಳಿದ್ದಾರೆ. 2009 ರಲ್ಲಿ ಈ ದಂಪತಿ ವಿಚ್ಛೇದನ ಪಡೆದಿದ್ದರಿಂದ ಪ್ರಕಾಶ್ ರೈ 2010 ರಲ್ಲಿ ಬಾಲಿವುಡ್ ಕೊರಿಯೋಗ್ರಫರ್ ಪೋನಿ ವರ್ಮಾ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಹುಟ್ಟಿದ ಮಗುವೇ ವೇದಾಂತ್ ಪ್ರಕಾಶ್ ರಾಜ್. ಮಂಗಳೂರಿನವರಾದ ಪ್ರಕಾಶ್ ರೈ ಕಿರುತೆರೆ ಮೂಲಕ ಬಣ್ಣ ದ ಯಾನ ಆರಂಭಿಸಿದರು. ತಮಿಳು ಚಿತ್ರರಂಗದಲ್ಲಿ ಕೂಡಾ ಅವರಿಗೆ ಅವಕಾಶಗಳು ಅರಸಿ ಬಂತು. ಖ್ಯಾತ ತಮಿಳು ನಿರ್ದೇಶಕ ಕೆ. ಬಾಲಚಂದರ್ ಸೂಚನೆ ಮೇರೆಗೆ ಪ್ರಕಾಶ್ ರಾಜ್ ಎಂದು ಹೆಸರು ಬದಲಿಸಿಕೊಂಡರು. ಕರ್ನಾಟಕದಲ್ಲಿ ಮಾತ್ರ ಅವರು ಇಂದಿಗೂ ಪ್ರಕಾಶ್ ರೈ.
- " class="align-text-top noRightClick twitterSection" data="
">
- View this post on Instagram
Jaane , kaise .. kab kahaan ikraar ho Gaya hum sochte hi reh gaye Aur Pyaar Ho Gaya .... ❤️❤️❤️❤️
">