ಹಾಡುಗಳಿಂದ ಗಮನ ಸೆಳೆದಿದ್ದ 'ಅಂದವಾದ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಎಲ್ಲಾ ಆ್ಯಂಗಲ್ನಿಂದಲೂ ಇಂಪ್ರೆಸಿವ್ ಆಗಿದೆ. ಸಂಪೂರ್ಣ ಪ್ರೇಮಕಥೆ ಇರುವ ಈ ಸಿನಿಮಾ ಮೇಕಿಂಗ್ ಸ್ಟೈಲ್, ಸಂಗೀತ ಎಲ್ಲವೂ 'ಮುಂಗಾರು ಮಳೆ' ಹಾಗೂ 'ಗಾಳಿಪಟ ' ಸಿನಿಮಾವನ್ನು ನೆನಪಿಸುತ್ತಿದೆ.
- " class="align-text-top noRightClick twitterSection" data="">
'ಎಲ್ಲರೂ ತಮ್ಮ ಲವರ್ಗೆ ತಾಜ್ಮಹಲ್ ತೋರಿಸಬೇಕು ಅಂದ್ಕೋತಾರೆ. ಆದರೆ ನಾನು ಆ ತಾಜ್ಮಹಲ್ಗೆ ನನ್ನ ಹುಡುಗಿಯನ್ನು ತೋರಿಸಬೇಕೆಂದು ಅಂದ್ಕೊಂಡೆ' ಎಂಬ ಡೈಲಾಗ್ ಬಹಳ ಚೆನ್ನಾಗಿದೆ. ಕರ್ನಾಟಕದ ಹಚ್ಚಹಸಿರಿನ ತಾಣಗಳಲ್ಲಿ ಚಿತ್ರಿಸಿರುವ 'ಅಂದವಾದ' ಚಿತ್ರಕಥೆ ಸಂಪೂರ್ಣ ಸಾಗುವುದು ಮಳೆ, ಮಂಜು ಮತ್ತು ಹಸಿರಿನ ಹಿನ್ನೆಲೆಯಲ್ಲಿ. ಇಡೀ ಸಿನಿಮಾ ಕಣ್ಣಿಗೆ ತಂಪು ನೀಡುವುದರ ಜೊತೆಗೆ, ಮನಸ್ಸಿಗೆ ಮುದ ಕೊಡುವಂತಿದೆ. ನವ ಪ್ರತಿಭೆ ಜೈ ನಾಯಕ ನಟನಾಗಿ ನಟಿಸಿರುವ ಈ ಚಿತ್ರದಲ್ಲಿ ಅನುಷಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಧುಶ್ರೀ ಗೋಲ್ಡನ್ ಫ್ರೇಮ್ ಈ ಚಿತ್ರವನ್ನು ನಿರ್ಮಿಸಿದೆ. ಚಲ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿಕ್ರಮ್ ವರ್ಮನ್ ಸಂಗೀತ ಸಂಯೋಜನೆಯ 'ಅಂದವಾದ' ಚಿತ್ರದ ಹಾಡುಗಳು ಕೂಡಾ ಮೆಲೋಡಿಯಸ್ ಆಗಿದೆ. ಟೀಸರ್ನಲ್ಲಿ ಕೇಳಿಸುವ ಒಂದು ಮ್ಯೂಸಿಕ್ ತುಣುಕು ಬಹಳ ಆಕರ್ಷಕವಾಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.