ಸಿನಿಮಾಗಳಿಂದ ದೂರವೇ ಉಳಿದಿದ್ದ ಪವನ್ ಕಲ್ಯಾಣ್ ತಾನು ಮತ್ತೆ ನಟಿಸುತ್ತೇನೆ ಎಂದು ಹೇಳಿದಾಗಿನಿಂದ ಅವರ ಕಾಲ್ಶೀಟ್ ಪಡೆಯಲು ನಿರ್ಮಾಪಕರು ಕಾದು ಕುಳಿತಿದ್ದಾರೆ. 'ವಕೀಲ್ ಸಾಬ್' ಚಿತ್ರದಲ್ಲಿ ಬ್ಯುಸಿ ಇರುವ ಪವನ್ ಕಲ್ಯಾಣ್ ಅದರೊಂದಿಗೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಶಿವರಾತ್ರಿ ಹಬ್ಬದಂದು ಪವನ್ ಕಲ್ಯಾಣ್ ನಟಿಸುತ್ತಿರುವ 'ಹರಿಹರ ವೀರ ಮಲ್ಲು' ಹೊಸ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು ಪವನ್ ಕಲ್ಯಾಣ್ ಹೊಸ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕಾಲದ ಕಥೆ ಆಧರಿಸಿರುವ ಈ ಐತಿಹಾಸಿಕ ಸಿನಿಮಾದಲ್ಲಿ ಬಾಲಿವುಡ್ ನಟ ಅರ್ಜುನ್ ರಾಮ್ಪಾಲ್ ಔರಂಗಜೇಬ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಔರಂಗಜೇಬ್ ತಂಗಿ ಪಾತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಪೈರಸಿ ಕೇಂದ್ರವಾಗ್ತಿದ್ಯಾ ಬೆಂಗಳೂರು...ಇದರ ಬಗ್ಗೆ ಕಾರ್ತಿಕ್ ಗೌಡ ಹೇಳೋದೇನು...?
ಚಿತ್ರದಲ್ಲಿ ಪವನ್ ಕಲ್ಯಾಣ್ ವಜ್ರ ಕದಿಯುವ ದರೋಡೆಕೋರನಾಗಿ ನಟಿಸುತ್ತಿದ್ದು, ಪವನ್ ನಾಯಕಿಯಾಗಿ ನಿಧಿ ಅಗರ್ವಾಲ್ ನಟಿಸುತ್ತಿದ್ದಾರಂತೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಚಿತ್ರದ ಹಾಡುಗಳಿಗೆ ಕೀರವಾಣಿ ಸಂಗೀತ ನಿರ್ದೇಶಿಸುತ್ತಿದ್ದಾರೆ. ಮೆಗಾ ಸೂರ್ಯ ಪ್ರೊಡಕ್ಷನ್ ಬ್ಯಾನರ್ ಅಡಿ ಎಎಂ ರತ್ನಂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕ್ರಿಷ್ ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ.