ಸಿನಿಮಾ ನಟರು ಕ್ರೀಡಾ ತಾರೆಯರೊಂದಿಗೆ ಡೇಟಿಂಗ್ ಮಾಡುವುದು, ಪ್ರೀತಿಸಿ ಮದುವೆಯಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಬಾಲಿವುಡ್ ನಟಿ ಶರ್ಮಿಳಾ ಠಾಕೂರ್ -ಪಠೌಡಿ, ಅನುಷ್ಕಾ ಶರ್ಮಾ-ವಿರಾಟ್ ಕೊಹ್ಲಿ, ಮಹೇಂದ್ರ ಭೂಪತಿ-ಲಾರಾದತ್ತಾ ಹಾಗೂ ಇನ್ನಿತರ ಜೋಡಿಗಳು ಇದಕ್ಕೆ ಉದಾಹರಣೆ.
![vishnu](https://etvbharatimages.akamaized.net/etvbharat/prod-images/safe_image_0606newsroom_1559830554_538.jpg)
ಇದೀಗ ತಮಿಳುನಟ ವಿಷ್ಣುವಿಶಾಲ್ ಹಾಗೂ ಟೆನ್ನಿಸ್ ಆಟಗಾರ್ತಿ ಜ್ವಾಲಾಗುಟ್ಟಾ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಇತ್ತೀಚೆಗೆ ಜ್ವಾಲಾ ಟೆನ್ನಿಸ್ನಲ್ಲಿ ಕೂಡಾ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ತಮಿಳು ಬಿಗ್ಬಾಸ್ -3 ರಲ್ಲಿ ಜ್ವಾಲಾ ಭಾಗವಹಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿತ್ತಾದರೂ ಜ್ವಾಲಾ ಇದನ್ನು ನಿರಾಕರಿಸಿದ್ದರು. ಇದೀಗ ಅವರು ವಿಷ್ಣು ಜೊತೆ ಡೇಟಿಂಗ್ನಲ್ಲಿದ್ದಾರೆ ಎಂಬ ಕಾರಣಕ್ಕೆ ಚರ್ಚಾ ವಿಷಯವಾಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ವಿಷ್ಣು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜ್ವಾಲಾ ಜೊತೆಗಿನ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
![vishnu](https://etvbharatimages.akamaized.net/etvbharat/prod-images/61844409_2741475819202103_554219839686705152_n_0606newsroom_1559830554_963.jpg)
ಜ್ವಾಲಾ ಗುಟ್ಟಾ 2005 ರಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಈ ಜೋಡಿ 2011 ರಲ್ಲಿ ವಿಚ್ಛೇದನ ಪಡೆದಿತ್ತು. ಇನ್ನು ನಟ ವಿಷ್ಣುವಿಜಯ್ ಕೂಡಾ ಕಳೆದ ವರ್ಷ ನಟ ಕೆ. ನಟರಾಜ್ ಪುತ್ರಿ ರಜಿನಿ ನಟರಾಜ್ ಅವರಿಗೆ ಡೈವೋರ್ಸ್ ನೀಡಿದ್ದರು. ಈ ಕಾರಣ ಜ್ವಾಲಾಗುಟ್ಟಾ ಹಾಗೂ ವಿಷ್ಣುವಿಶಾಲ್ ಡೇಟಿಂಗ್ನಲ್ಲಿದ್ದು ಈ ಸಂಬಂಧ ಇನ್ನೂ ಮುಂದುವರೆಯಬಹುದಾ ಎಂಬ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ. ಆದರೆ, ಇದುವರೆಗೂ ವಿಷ್ಣುವಿಶಾಲ್ ಆಗಲಿ ಜ್ವಾಲಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.