ಚೆನ್ನೈ: ಸ್ಯಾಂಡಲ್ವುಡ್, ಕಾಲಿವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟನಾ ಕೌಶಲ್ಯ ತೋರಿರುವ ನಟಿ ನಿಕ್ಕಿ ಗಲ್ರಾನಿಯ ಚೆನ್ನೈ ನಿವಾಸದಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಿಂದಲೇ ಕಳ್ಳತನ ನಡೆದಿರುವುದಾಗಿ ಪ್ರಕರಣ ದಾಖಲಾಗಿದೆ.
ಜನವರಿ 11ರಂದು ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದು, ತನ್ನ ಮನೆಯ ಕೆಲಸಗಾರ ಧನುಷ್ ಎಂಬಾತ 1.25 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದಾನೆ ಎಂದು ದೂರು ನೀಡಿದ್ದಾರೆ. ಚೆನ್ನೈನ ರೋಯಪೇಟ್ ಪ್ರದೇಶದಲ್ಲಿ ನಿಕ್ಕಿ ನಿವಾಸವಿದೆ.
ಈ ಮೊದಲು ಧನುಷ್ನನ್ನು ಕಳ್ಳತನದ ಆರೋಪದ ಮೇಲೆ ನಿಕ್ಕಿ ಗಲ್ರಾನಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದಾರೆ. ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದುತಲೈ ಚಿರುತೈಗಲ್ ಕಚ್ಚಿ ಅಥವಾ ವಿಸಿಕೆ ಪಕ್ಷ ದೂರು ನೀಡಿತ್ತು.
ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದ್ದು, ಸಿಸಿಟಿವಿಯನ್ನು ಪರಿಶೀಲನೆ ನಡೆಸಿದಾಗ ಧನುಷ್ ಕಳ್ಳತನ ಮಾಡಿರುವುದು ಗೊತ್ತಾಗಿತ್ತು. ಇದಾದ ನಂತರ ತಿರ್ಪೂರ್ನಲ್ಲಿದ್ದ ಧನುಷ್ನನ್ನು ಬಂಧಿಸಿ, ಅವನಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬೆನ್ನಲ್ಲೇ ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದಾರೆ.
ನಟಿ ನಿಕ್ಕಿ ಗಲ್ರಾನಿ ಅವರು ಮೊಟ್ಟ ಶಿವ ಕೆಟ್ಟ ಶಿವ, ಎಮರಾಲ್ಡ್ ಕಾಯಿನ್, ಡಾರ್ಲಿಂಗ್ ಮುಂತಾದ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಿರ್ದೇಶಕ ಶಶಿಕುಮಾರ್ ಅವರ ರಾಜವಂಶಂ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: 'ಇಕ್ಕಟ್' ನಂತರ ಕಪ್ಪು ಸುಂದರಿಯಾದ ಬಿಗ್ ಬಾಸ್ನ ಭೂಮಿ ಶೆಟ್ಟಿ