ETV Bharat / sitara

ಜೀವನದ ಹೊಸ ಇನ್ನಿಂಗ್ಸ್​​​​ ಆರಂಭಿಸಿದ ಕೆಜಿಎಫ್​​​​ ವಿಲನ್​​​! - sandalwood

ಖ್ಯಾತ ಖಳ ನಟ ಜಾನ್ ಕೊಕೇನ್ ಜೀವನದ ಹೊಸ ಇನ್ನಿಂಗ್ಸ್​ ಆರಂಭಿಸಿದ್ದು, ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.

ಕೆಜಿಎಫ್​​ ವಿಲನ್
author img

By

Published : Apr 16, 2019, 1:28 PM IST

ಬೆಂಗಳೂರು: ಕನ್ನಡದ ಕೆಜಿಎಫ್​ ಸಿನಿಮಾ ಮೂಲಕ ಮೋಡಿ ಮಾಡಿದ್ದ ಖ್ಯಾತ ಖಳನಟ ಜಾನ್ ಕೊಕೇನ್ ಜೀವನದ ಹೊಸ ಇನ್ನಿಂಗ್ಸ್​ ಆರಂಭಿಸಿದ್ದು, ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ.

ಕೇರಳದ ವಿಶು ಹಬ್ಬದ ಸಂಭ್ರಮದಂದೇ ಈ ಜೋಡಿಯ ವಿವಾಹ ಜರುಗಿದ್ದು, ಮದುವೆ ಸಂಭ್ರಮದಲ್ಲಿ ಸಿಂಪಲ್ ಕಾಟನ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದ್ದು, ಜಾನ್ ಕೊಕೇನ್ ಜೇಕಬ್ ವರ್ಗಿಸ್ ನಿರ್ದೇಶನದ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಸಿನಿಮಾ ಮೂಲಕ ಜಾನ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದರು.

ಮೂಲತಃ ಕೇರಳದವರಾದ ಜಾನ್, ಮಾಡೆಲಿಂಗ್ ಕ್ಷೇತ್ರದಲ್ಲೂ ಸಹ ಸಾಕಷ್ಟು ಹೆಸರು ಮಾಡಿದ್ರು. ಅಲ್ಲದೆ ಕನ್ನಡದ ಸ್ಟಾರ್​ ನಟರಾದ ದರ್ಶನ್ ಅಭಿನಯದ ಶೌರ್ಯ, ಶಿವಣ್ಣ ಜೊತೆಗೆ ಮೈಲಾರಿ ಹೀಗೆ ಹಲವು ಸಿನಿಮಾಗಳಲ್ಲಿ ಖಳ ನಟನಾಗಿ ಅಬ್ಬರಿಸಿದ್ದಾರೆ. ಸದ್ಯ ಪುನೀತ್​ ಅಭಿನಯದ ಯುವರತ್ನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಜಾನ್,​ ಸೌತ್​ ಇಂಡಿಯಾದ ಬಹು ಬೇಡಿಕೆಯ ನಟರಾಗಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಜಿಎಫ್​​ ವಿಲನ್..!!!!!

ಖ್ಯಾತ ಖಳನಟ ಜಾನ್ ಕೊಕೇನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯನದ ೨೦೧೮ರ ಸೀಪರ್ ಹಿಟ್ ಸಿನಿಮಾ ಕೆಜಿಎಫ್ ನಲ್ಲಿ ವಿಲನ್ ಆಗಿ ಅಬ್ಬರಿಸಿದ್ದ ಜಾನ್ ಕೊಕೇನ್. ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಕೇರಳದ ವಿಶು ಹಬ್ಬದ ಸಂಭ್ರಮದಂದೇ ಈ ಜೋಡಿಗಳ ವಿವಾಹ ಜರುಗಿದೆ ಹೊಸ ಜೀವನದ ಹೊಸ್ತಿಲಲ್ಲಿರೋ ಈ ಜೋಡಿ, ಮದುವೆ ಸಂಭ್ರಮದಲ್ಲಿ ಸಿಂಪಲ್ ಕಾಟನ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೆ ಚಿತ್ರ್ಂಗದ ಗಣ್ಯರಿಂದ ಜಾನ್-ಪ್ರಿಯಾ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಮೂಲತಃ ಕೇರಳದವರಾದ ಜಾನ್, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ರು. ಜೇಕಬ್ ವರ್ಗಿಸ್ ನಿರ್ದೇಶನದ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಸಿನಿಮಾದ ಮೂಲಕ ಜಾನ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ದರ್ಶನ್ ಅಭಿನಯದ ಶೌರ್ಯ, ಶಿವಣ್ಣ ಜೊತೆಗೆ ಮೈಲಾರಿ, ಸೂರಿ ನಿರ್ದೇಶನದ ಅಣ್ಣಾಬಾಂಡ್ ಹೀಗೆ ಹಲವು ಸಿನಿಮಾಗಳಲ್ಲಿ ಖಳನಟನ ಖದರ್ ತೋರ್ಸಿ ಕನ್ನಡಚಿತ್ರರಂಗದಲ್ಲಿ ಬಹು ಬೇಡಿಕೆಯ ವಿಲನ್ ಆಗಿದ್ದಾರೆ. ಸದ್ಯ ಯುವರತ್ನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಜಾನ್ ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ವಿಲನ್‌ ಜಾನ್ ಸಖತ್ ಬ್ಯುಸಿಯಾಗಿದ್ಧಾರೆ.

ಸತೀಶ ಎಂಬಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.