ETV Bharat / sitara

'ಕಸ್ತೂರಿ ಮಹಲ್'​​​ನಿಂದ ರಚಿತಾ ರಾಮ್​​​​​ ಹೊರಬಂದಿದ್ದರ ಕಾರಣ ರಿವೀಲ್​​​​ - Dinesh Babu 50th movie Kasturi Mahal

ದಿನೇಶ್ ಬಾಬು ಅವರ ಮೇಲೆ ಕೋಪಗೊಂಡು ರಚಿತಾ ರಾಮ್ 'ಕಸ್ತೂರಿ ಮಹಲ್ ' ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ರಚಿತಾ ಸ್ಕ್ರಿಪ್ಟ್​​​ನಲ್ಲಿ ಬದಲಾವಣೆ ಸೂಚಿಸಿದ್ದು ದಿನೇಶ್ ಬಾಬು ಇದಕ್ಕೆ ಒಪ್ಪಿಲ್ಲ. ಈ ಕಾರಣಕ್ಕೆ ಅವರ ಮೇಲೆ ಕೋಪಗೊಂಡು ರಚಿತಾ ಚಿತ್ರದಿಂದ ಹೊರನಡೆದಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

Kasturi Mahal
ರಚಿತಾ ರಾಮ್​​​​​
author img

By

Published : Nov 18, 2020, 8:27 AM IST

ಹಿರಿಯ ನಿರ್ದೇಶಕ ದಿನೇಶ್​ ಬಾಬು ಅವರ 50ನೇ ಸಿನಿಮಾ 'ಕಸ್ತೂರಿ ಮಹಲ್'​ ಚಿತ್ರವನ್ನು ಒಪ್ಪಿಕೊಂಡಿದ್ದ ರಚಿತಾ ರಾಮ್, ಆ ಚಿತ್ರದ ಮುಹೂರ್ತದ ನಂತರ ಸಿನಿಮಾದಿಂದ ಹೊರಬಂದಿದ್ದರು. ನಂತರ ಆ ಜಾಗಕ್ಕೆ ಶಾನ್ವಿ ಶ್ರೀವಾತ್ಸವ್ ಅವರನ್ನು ಕರೆತರಲಾಯ್ತು. ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್​ ಲುಕ್ ಕೂಡಾ ರಿವೀಲ್ ಆಗಿದೆ.

ಅಷ್ಟಕ್ಕೂ ರಚಿತಾ ಈ ಚಿತ್ರದಿಂದ ಹೊರ ಹೋಗಿದ್ದು ಏಕೆ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ರಚಿತಾ ಅವರಿಗೆ ಸಮಸ್ಯೆ ಇದ್ದದ್ದು ನಿರ್ದೇಶಕ ದಿನೇಶ್ ಬಾಬು ಜೊತೆಗೆ ಎನ್ನಲಾಗಿದೆ. ಆದ್ದರಿಂದ ಸಿನಿಮಾದಲ್ಲಿ ಮುಂದುವರೆಯದೆ ಆ ಚಿತ್ರದಿಂದ ಹೊರ ಬಂದಿದ್ದಾರೆ. ಆದರೆ ನಿರ್ಮಾಪಕ ರವೀಶ್ ಜೊತೆ ಯಾವುದೇ ಸಮಸ್ಯೆ ಇಲ್ಲ ಎಂದು ರಚಿತಾ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ ರಚಿತಾ ರವೀಶ್ ಅವರೇ ನಿರ್ಮಿಸುತ್ತಿರುವ 'ಪಂಕಜ ಕಸ್ತೂರಿ' ಚಿತ್ರದ ರೀಮೇಕ್​​ನಲ್ಲಿ ನಟಿಸುತ್ತಿದ್ದಾರೆ.

ಪಂಕಜ ಕಸ್ತೂರಿ, ತಮಿಳಿನ 'ಕೋಲಮಾವು ಕೋಕಿಲ' ಚಿತ್ರದ ರೀಮೇಕ್. ಈ ಚಿತ್ರವನ್ನು ಕೂಡಾ ರವೀಶ್ ನಿರ್ಮಿಸುತ್ತಿದ್ದು ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದೆ. ಮುಂದಿನ ತಿಂಗಳಿಂದ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ. ರವೀಶ್ ಹೆಸರಿರುವ ಪೋಸ್ಟರ್ ಕೂಡಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಈ ಎರಡೂ ಚಿತ್ರಗಳಲ್ಲಿ 'ಕಸ್ತೂರಿ' ಎಂಬ ಹೆಸರು ಇರುವುದು ವಿಶೇಷ.

'ಕಸ್ತೂರಿ ಮಹಲ್' ಚಿತ್ರದ ಸ್ಕ್ರಿಪ್ಟ್​​​​​ನಲ್ಲಿ ರಚಿತಾ ಒಂದಿಷ್ಟು ಬದಲಾವಣೆಗಳನ್ನು ಸೂಚಿಸಿದ್ದರಂತೆ. ಆದರೆ, ಇದಕ್ಕೆ ನಿರ್ದೇಶಕ ದಿನೇಶ್ ಬಾಬು ಸುತಾರಾಂ ಒಪ್ಪಿಲ್ಲ. ಹೇಳಿ ಕೇಳಿ ಅವರು ಹಿರಿಯ ನಿರ್ದೇಶಕರು. ಕಲಾವಿದರು ಕಥೆ-ಚಿತ್ರಕಥೆಯಲ್ಲಿ ಅನಗತ್ಯವಾಗಿ ತಲೆತೂರಿಸುವುದನ್ನು ಒಪ್ಪದ ದಿನೇಶ್ ಬಾಬು, ರಚಿತಾ ಹೇಳಿದ ಬದಲಾವಣೆಗಳಿಗೆ ಒಪ್ಪಿಲ್ಲ. ಇದರಿಂದ ಸಹಜವಾಗಿಯೇ ರಚಿತಾಗೆ ಸಿಟ್ಟು ಬಂದಿದ್ದು, ಅದೇ ಕಾರಣದಿಂದ ಅವರು ಚಿತ್ರತಂಡದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.ಆ ಚಿತ್ರದಿಂದ ಹೊರ ಬಂದರೂ ಅದೇ ನಿರ್ಮಾಪಕರ ಮತ್ತೊಂದು ಚಿತ್ರದಲ್ಲಿ ರಚಿತಾ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.