ETV Bharat / sitara

ಪ್ರೀತಿ, ತ್ಯಾಗದ ನಡುವೆ ಸುತ್ತುವ ಕಥೆಯೇ 'ನೈಟ್​​ಔಟ್​​​​​​​'

author img

By

Published : Apr 14, 2019, 12:33 PM IST

ನೈಟ್​​​​​ಔಟ್​​​

ರಾಕೇಶ್ ಅಡಿಗ ನಿರ್ದೇಶನದ 'ನೈಟ್​​ಔಟ್' ಸಿನಿಮಾ ಶುಕ್ರವಾರ ಬಿಡುಗಡೆಯಾಗಿದೆ. ರಾಕೇಶ್ ಹತ್ತು ವರ್ಷಗಳ ಕಾಲ ನಟನಾಗಿದ್ದುಕೊಂಡು ಇದೀಗ ಈ ಸಿನಿಮಾ ಮುಖಾಂತರ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

ಪ್ರೀತಿ, ಸ್ನೇಹ, ಸಂಬಂಧಕ್ಕೆ ಸರಿಯಾದ ಬೆಲೆ ಸಿಗದಿದ್ದರೆ ಅದು ವಾಶ್ಔಟ್ ಆದ ಜೀವನ ಎಂಬುದನ್ನು ರಾಕೇಶ್ ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ಒಂದು ಸಾದಾರಣ ಕಥೆಗೆ ಆತ್ಮದ ಸ್ಪರ್ಶ ಅಳವಡಿಸಲಾಗಿದೆ. ಚಿತ್ರದ ಕಥಾ ನಾಯಕ ಗೋಪಿ (ಭರತ್) ಆಟೋ ಚಾಲಕ. ಇವನ ಸ್ನೇಹಿತ ಗುಜ್ಜಡ್ (ಅಕ್ಷಯ್)ಗೆ ಶ್ರುತಿ (ಶ್ರುತಿ ಗೋರಾಡಿಯ) ಎಂಬ ಹುಡುಗಿ ಮೇಲೆ ಪ್ರೀತಿಯಾಗುತ್ತದೆ. ಗುಜ್ಜಡ್ ಈ ವಿಷಯವನ್ನು ಗೋಪಿ ಮುಂದೆ ಹೇಳುತ್ತಾನೆ. ಆದರೆ ಗೋಪಿ ಸ್ನೇಹಿತನಿಗೆ ಸಹಾಯ ಮಾಡುವ ನೆಪದಲ್ಲಿ ತಾನೇ ಪ್ರೀತಿ ಬಲೆಗೆ ಬೀಳುತ್ತಾನೆ. ವಿಷಯ ತಿಳಿದ ಗುಜ್ಜಡ್ ತ್ಯಾಗ ಮಾಡುತ್ತಾನೆ.

ಗುಜ್ಜಡ್ ಹೆಸರು ಹೇಳಿಕೊಂಡು ಗೋಪಿ ಶ್ರುತಿ ಬಳಿ ಸಾಕಷ್ಟು ಸುಳ್ಳು ಹೇಳುತ್ತಾನೆ. ಇದನ್ನು ತಿಳಿದ ಶ್ರುತಿ ಗೋಪಿಯಿಂದ ದೂರ ಹೋಗುತ್ತಾಳೆ. ಆದರೆ ಗೋಪಿ ನಿಜವಾಗಿಯೂ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಶ್ರುತಿ ಅವನಿಗೆ ಬದಲಾಗುವಂತೆ ಹೇಳಿ ಒಂದು ವರ್ಷ ಕಾಲಾವಕಾಶ ನೀಡುತ್ತಾಳೆ. ಈ ಒಂದು ವರ್ಷದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು.

ನಾಯಕ ಭರತ್ ಫೈಟ್ ಹಾಗೂ ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಅಕ್ಷಯ್ ಹಾಗೂ ಶ್ರುತಿ ಗೊರಾಡಿಯ ಆ್ಯಕ್ಟಿಂಗ್ ಕೂಡಾ ಓಕೆ. ಸಮೀರ್​​​​​ ಕುಲಕರ್ಣಿ ಸಂಗೀತ ನಾಟ್ ಗುಡ್ ನಾಟ್ ಬ್ಯಾಡ್ ಎನ್ನುವಂತಿದೆ. 'ಬಿದ್ಲು, ಬಿದ್ಲು' ಎಂಬ ಹಾಡು ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತದೆ. ಶಮಂತ್ ಹಾಗೂ ಸಂದೀಪ್ ಸಂಭಾಷಣೆ ಅಲ್ಲಲ್ಲಿ ಇಷ್ಟವಾಗುತ್ತದೆ. ನವೀನ್ ಕೃಷ್ಣ ಹಾಗೂ ಲಕ್ಷ್ಮಿ ನವೀನ್ ನಿರ್ಮಾಣದ ‘ನೈಟ್ ಔಟ್’ ಕೊಂಚ ವಿಭಿನ್ನ ಅನುಭವ ನೀಡುವ ಸಿನಿಮಾ ಎನ್ನಬಹುದು.

---------- Forwarded message ---------
From: pravi akki <praviakki@gmail.com>
Date: Fri, Apr 12, 2019 at 6:38 PM
Subject: Fwd: NIGHT OUT FILM REVIEW
To: Praveen Akki <praveen.akki@etvbharat.com>

---------- Forwarded message ---------
From: Vasu K.S. Vasu <sasuvas@gmail.com>
Date: Fri, Apr 12, 2019 at 6:18 PM
Subject: NIGHT OUT FILM REVIEW
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>

ನೈಟ್ ಔಟ್ – ಔಟ್ ಆದ ಸ್ನೇಹ, ಪ್ರೀತಿ ಸಂಬಂದ!

ಹತ್ತು ವರ್ಷಗಳ ಕಾಲ ನಟ ಆಗಿದ್ದುಕೊಂಡು ಈಗ ನಿರ್ದೇಶಕ ಪಟ್ಟ ನೈಟ್ ಔಟ್ ಸಿನಿಮಾ ಮುಖಾಂತರ ಏರಿರುವ ರಾಕೇಶ್ ಅಡಿಗ ಒಂದು ಸಹನೀಯ ಸಿನಿಮಾ ನೀಡುವುದರ ಜೊತೆಗೆ ಪ್ರೀತಿ, ಸ್ನೇಹ, ಸಂಬಂದಕ್ಕೆ ಸರಿಯಾದ ಬೆಲೆ ಸಿಕ್ಕದೆ ಇದ್ದರೆ ಅದು ವಾಶ್ ಔಟ್ ಆದ ಜೀವನ ಎಂದು ಹೇಳುತ್ತಾರೆ.

ನೈಟ್ ಔಟ್ ಅಲ್ಲಿ ಒಂದು ಸಾದಾರಣ ಕಥೆಗೆ ಆತ್ಮದ ಸ್ಪರ್ಶ ಅಳವಡಿಸಲಾಗಿದೆ. ಅತ್ತ ರಸ್ತೆ ಅಪಘಾತದಲ್ಲಿ ಪ್ರೇಯಸಿ ಅಸುನೀಗಿದರೆ, ಇತ್ತ ಪ್ರಿಯಕರ ನೇಣಿಗೆ ಶರಣಾಗುತ್ತಾನೆ. ಆದರೆ ಅವನ ಆತ್ಮವೆ ನೈಟ್ ಔಟ್ ಮಾಡುವುದು. ಆಟೋ ಚಾಲನೆ ಅವನ ಸ್ನೇಹಿತ. ಅವನನ್ನು ತನ್ನ ಪ್ರೇಯಸಿ ಇದ್ದ ಕಡೆ ಕರೆದುಕೊಂಡು ಹೋಗು ಎಂದು ಮನವಿ ಸಲ್ಲಿಸುತ್ತಾನೆ. ಈ ಜರ್ನಿಯಲ್ಲಿ ಸ್ನೇಹಿತರ ಮಾತು ಕಥೆ ಸಹ ವಿಚಿತ್ರವಾಗಿ ಇರುತ್ತದೆ.

ಚಿತ್ರದ ಕಥಾ ನಾಯಕ ಗೋಪಿ (ಭರತ್) ಆಟೋ ಚಾಲಕ. ಇವನ ಸ್ನೇಹಿತ ಗುಜ್ಜಡ್ (ಅಕ್ಷಯ್). ಸ್ನೇಹಿತರಿಗೆ ಮುದ್ದಾದ ಚೆಲುವೆ ಶ್ರುತಿ (ಶ್ರುತಿ ಗೋರಾಡಿಯ) ಕಣ್ಣಿಗೆ ಬೀಳುತ್ತಾಳೆ. ಗುಜ್ಜಡ್ ತನಗೆ ಆಗಿರುವ ಪ್ರೀತಿಯನ್ನು ಗೋಪಿ ಮುಂದೆ ವಿವರಿಸುತ್ತಾನೆ. ಆದರೆ ಸ್ನೇಹಿತನಿಗೆ ಸಹಾಯ ಮಾಡುವ ನೆಪದಲ್ಲಿ ತಾನೇ ಪ್ರೀತಿಗೆ ಬೀಳುತ್ತಾನೆ ಗೋಪಿ. ಇದನ್ನು ಸಹಿಸಿಕೊಂಡ ಸ್ನೇಹಿತ ಗುಜ್ಜಡ್ ಕೆಲವು ತ್ಯಾಗಗಗಳನು ಮಾಡಬೇಕಾಗುತ್ತದೆ.

ಗುಜ್ಜಡ್ ಹೆಸರನ್ನು ಉಪ್ಯೋಗಿಸಿಕೊಂಡು ಗೋಪಿ ಅನೇಕ ಸುಳ್ಳುಗಳನ್ನು ಶ್ರುತಿ ಬಳಿ ಹೇಳಿರುತ್ತಾನೆ. ಆದರೆ ಅದೆಲ್ಲವೂ ಶ್ರುತಿ ತಿಳಿದಾಗ ಗೋಪಿ ಜೀವನದಿಂದ ದೂರ ಹೋಗುತ್ತಾಳೆ. ನಾನು ಅನುಸರಿಸಿರುವ ರೀತಿ ತಪ್ಪಿರಬಹುದು ಆದರೆ ನನ್ನ ಪ್ರೀತಿ ತಪ್ಪಲ್ಲ, ಸುಳ್ಳಲ್ಲ ಎಂದು ಗೋಪಿ ಹೇಳಿಕೊಂಡ ಮೇಲೆ ಶ್ರುತಿ ಅವನಿಗೆ ಒಂದು ವರ್ಷ ಕಾಲಾವಕಾಶ ಕೊಟ್ಟು ಸರಿಯಾದ ಮನುಷ್ಯನಾಗಿ ನನ್ನ ಮುಂದೆ ಬಂದು ನಿಲ್ಲು. ಆಮೇಲೆ ನಿನ್ನ ಪ್ರೀತಿಯನ್ನು ಸ್ವೀಕರಿಸಿವುವೆ ಎನ್ನುತ್ತಾಳೆ. ಆದರೆ ಈ ಒಂದು ವರ್ಷದಲ್ಲಿ ಆಗುವುದೇ ಬೇರೆ ವಿಚಾರ.

ಭರತ್ ಹೊಸ ಎಂಟ್ರಿ ಒಂದು ಫೈಟ್ ಹಾಗೂ ಕೆಲವು ಭಾವನಾತ್ಮಕ ಸನ್ನಿವೇಶಗಳಲ್ಲಿ ಸೈ ಎನ್ನಿಸಿಕೊಂಡಿದ್ದಾರೆ. ಅಕ್ಷಯ್ ಸ್ನೇಹಿತನಾಗಿ ತನ್ನ ಮಾತಿನಿಂದ ಹಾಗೂ ಸಂದಿಗ್ದ ಸ್ಥಿತಿಯಿಂದ ಗಮನ ಸೆಳೆಯುತ್ತಾರೆ. ನಾಯಕಿ ಶ್ರುತಿ ಗೊರಡಿಯ ಪಾರ್ಕ್ ಸನ್ನಿವೇಶದಲ್ಲಿ ತನ್ನ ಅಭಿನಯ ಸಾಮರ್ಥ್ಯವನ್ನು ತೋರಿದ್ದಾರೆ. ಮಿಕ್ಕಂತೆ ಮುದ್ದಾದ ಚೆಲುವೆ ಪರದೆಯ ಮೇಲೆ ಮನಮೋಹಕ.

ಸಮೀರ ಕುಲಕರ್ಣಿ ಅವರ ಸಂಗೀತದಲ್ಲಿ ಬಿದ್ಲು, ಬಿದ್ಲು...ಹಾಡು ಪಡ್ಡೆ ಹುಡುಗರಿಗೆ ಇಷ್ಟ ಆಗುತ್ತದೆ. ಛಾಯಾಗ್ರಹಣ ಕೆಲವು ಭಾಗ ರಾತ್ರಿ ಹೊತ್ತಲ್ಲಿ ಸೆರೆ ಹಿಡಿಯಲಾಗಿದೆ. ಶಮಂತ್ ಹಾಗೂ ಸಂದೀಪ್ ಅವರ ಸಂಭಾಷಣೆ ಅಲ್ಲಲ್ಲಿ ಇಷ್ಟವಾಗುತ್ತದೆ.

ನೈಟ್ ಔಟ್ ಕೊಂಚ ವಿಭಿನ್ನ ಅನುಭವ ನೀಡುವ ಸಿನಿಮಾ.

ಚಿತ್ರ – ನೈಟ್ ಔಟ್, ನಿರ್ಮಾಪಕ – ನವೀನ್ ಕೃಷ್ಣ ಹಾಗೂ ಲಕ್ಷ್ಮಿ ನವೀನ್, ನಿರ್ದೇಶನ – ರಾಕೇಶ್ ಅಡಿಗ, ಸಂಗೀತ – ಸಮೀರ ಕುಲಕರ್ಣಿ, ಛಾಯಾಗ್ರಹಣ – ಅರುಣ್ ಅಲೆಕ್ಸಾಂಡರ್. ತಾರಾಗಣ – ಭರತ್, ಅಕ್ಷಯ್ ಪವರ್, ಶ್ರುತಿ ಗೊರಡಿಯ ಹಾಗೂ ಇತರರು. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.