ಮುಂಬೈ(ಮಹಾರಾಷ್ಟ್ರ): ದೇಶಾದ್ಯಂತ ಸಂಚಲನ ಮೂಡಿಸಿ ಜನಮೆಚ್ಚುಗೆಗೆ ಪಾತ್ರವಾಗುತ್ತಿರುವ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ದೂಳೆಬ್ಬಿಸಿದ್ದು, ಬಿಡುಗಡೆಯಾಗಿ ಕೇವಲ 5 ದಿನಗಳಲ್ಲಿ ₹60 ಕೋಟಿ ಗಳಿಸಿದೆ.
1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸಿದ ಅತ್ಯಂತ ಘೋರ ದೌರ್ಜನ್ಯದ ವಿಷಯಗಳನ್ನಿಟ್ಟುಕೊಂಡು ಚಿತ್ರೀಕರಿಸಿರುವ 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ವಿಶ್ವಾದ್ಯಂತ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
-
#TheKashmirFiles is a TSUNAMI at the #BO… FANTASTIC TRENDING, as footfalls, occupancy, numbers continue to soar… Day 5 higher than *all* previous days… BLOCKBUSTER... Fri 3.55 cr, Sat 8.50 cr, Sun 15.10 cr, Mon 15.05 cr, Tue 18 cr. Total: ₹ 60.20 cr. #India biz. pic.twitter.com/uaDH3ooVsO
— taran adarsh (@taran_adarsh) March 16, 2022 " class="align-text-top noRightClick twitterSection" data="
">#TheKashmirFiles is a TSUNAMI at the #BO… FANTASTIC TRENDING, as footfalls, occupancy, numbers continue to soar… Day 5 higher than *all* previous days… BLOCKBUSTER... Fri 3.55 cr, Sat 8.50 cr, Sun 15.10 cr, Mon 15.05 cr, Tue 18 cr. Total: ₹ 60.20 cr. #India biz. pic.twitter.com/uaDH3ooVsO
— taran adarsh (@taran_adarsh) March 16, 2022#TheKashmirFiles is a TSUNAMI at the #BO… FANTASTIC TRENDING, as footfalls, occupancy, numbers continue to soar… Day 5 higher than *all* previous days… BLOCKBUSTER... Fri 3.55 cr, Sat 8.50 cr, Sun 15.10 cr, Mon 15.05 cr, Tue 18 cr. Total: ₹ 60.20 cr. #India biz. pic.twitter.com/uaDH3ooVsO
— taran adarsh (@taran_adarsh) March 16, 2022
ಕರ್ನಾಟಕ, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ಚಿತ್ರಕ್ಕೆ ಈಗಾಗಲೇ ತೆರಿಗೆ ವಿನಾಯಿತಿಯನ್ನೂ ಘೋಷಣೆ ಮಾಡಿವೆ. ಈ ಮೂಲಕ ಹೆಚ್ಚೆಚ್ಚು ಜನರು ಸಿನಿಮಾ ನೋಡುವಂತೆ ಪ್ರೇರೇಪಿಸಿದೆ.
ಬಿಡುಗಡೆಯಾದ ಮೊದಲ ದಿನ ಕೇವಲ 3.55 ಕೋಟಿ ರೂ. ಗಳಿಕೆ ಮಾಡಿದ್ದ ಈ ಚಿತ್ರ ಎರಡನೇ ದಿನ 8.50 ಕೋಟಿ ರೂ. ಸಂಗ್ರಹಿಸಿದೆ. ಇದಾದ ಬಳಿಕ ಸೋಮವಾರ ಮತ್ತು ಮಂಗಳವಾರ ಕ್ರಮವಾಗಿ ₹15.10 ಕೋಟಿ ಮತ್ತು ₹15.02 ಕೋಟಿ ರೂ. ಗಳಿಸಿದೆ. ನಿನ್ನೆ ಕೂಡ 18 ಕೋಟಿ ರೂ. ಗಳಿಸಿರುವ ಚಿತ್ರ ಈಗಾಗಲೇ ₹50 ಕೋಟಿ ಕ್ಲಬ್ ಸೇರಿದ್ದು, ಮುಂದಿನ ಕೆಲ ದಿನಗಳಲ್ಲಿ ₹100 ಕೋಟಿ ಗಳಿಸುವತ್ತ ಸಾಗುತ್ತಿದೆ.
-
Day 5 [Tuesday] Biz: TOP SCORERS [post pandemic times]...
— taran adarsh (@taran_adarsh) March 16, 2022 " class="align-text-top noRightClick twitterSection" data="
1. #TheKashmirFiles: ₹ 18 cr
2. #Sooryavanshi: ₹ 11.22 cr
3. #GangubaiKathiawadi: ₹ 10.01 cr
4. #83TheFilm: ₹ 6.70 cr#Hindi films. #India biz.
Note:#Tanhaji: ₹ 15.28 cr#Uri: ₹ 9.57 cr
[Pre-#Covid times] pic.twitter.com/VejmaRWGdB
">Day 5 [Tuesday] Biz: TOP SCORERS [post pandemic times]...
— taran adarsh (@taran_adarsh) March 16, 2022
1. #TheKashmirFiles: ₹ 18 cr
2. #Sooryavanshi: ₹ 11.22 cr
3. #GangubaiKathiawadi: ₹ 10.01 cr
4. #83TheFilm: ₹ 6.70 cr#Hindi films. #India biz.
Note:#Tanhaji: ₹ 15.28 cr#Uri: ₹ 9.57 cr
[Pre-#Covid times] pic.twitter.com/VejmaRWGdBDay 5 [Tuesday] Biz: TOP SCORERS [post pandemic times]...
— taran adarsh (@taran_adarsh) March 16, 2022
1. #TheKashmirFiles: ₹ 18 cr
2. #Sooryavanshi: ₹ 11.22 cr
3. #GangubaiKathiawadi: ₹ 10.01 cr
4. #83TheFilm: ₹ 6.70 cr#Hindi films. #India biz.
Note:#Tanhaji: ₹ 15.28 cr#Uri: ₹ 9.57 cr
[Pre-#Covid times] pic.twitter.com/VejmaRWGdB
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಿಂದ ಬಾಲಿವುಡ್ ಮಾಡಿದ ಎಲ್ಲ ಪಾಪ ಕಳೆದಿದೆ: ಕಂಗನಾ ರಣಾವತ್
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪ್ರಕಾಶ್ ಬೆಳವಡಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇನ್ನು ಚಿತ್ರ ವೀಕ್ಷಿಸಿರುವ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರತಿಯೊಬ್ಬರೂ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ.
ಬಾಲಿವುಡ್ನ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿ, ಈ ಸಿನಿಮಾ ತೆರೆ ಕಾಣುವ ಮೂಲಕ ಬಾಲಿವುಡ್ ಮಾಡಿರುವ ಎಲ್ಲ ಪಾಪ ಕಳೆದಂತಾಗಿದೆ. ವಿವೇಕ್ ಅಗ್ನಿಹೋತ್ರಿ ಹಾಗೂ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ. ಇದೇ ವೇಳೆ, ಈ ಚಿತ್ರವನ್ನು ಎಲ್ಲರೂ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.