ETV Bharat / sitara

ಡ್ರಗ್ಸ್ ಕೇಸ್​ನಲ್ಲಿ ಟ್ವಿಸ್ಟ್​​: ಸ್ಯಾಂಡಲ್​ವುಡ್​​ ಸೌತ್ ಬಾಯ್ಸ್ ಗ್ರೂಪ್​​​ ಪತ್ತೆ ಮಾಡಿದ ಸಿಸಿಬಿ! - ಡ್ರಗ್ಸ್ ಕೇಸ್ ಟ್ವಿಸ್ಟ್​​

ನಶೆ ಜಾಲದಲ್ಲಿ ನಂಟಿರೋ ಸ್ಟಾರ್ಸ್ ಹಾಗೂ ಉದ್ಯಮಿಗಳ ಮಕ್ಕಳ ಲಿಸ್ಟ್ ರೆಡಿ ಮಾಡಿರುವ ಸಿಸಿಬಿ, ಬೆಂಗಳೂರು ಸೌತ್ ಬಾಯ್ಸ್ ಅನ್ನೋ ಗ್ರೂಪ್ ಮಾಡಿಕೊಂಡಿರೋ ಸೆಲೆಬ್ರೆಟಿಗಳನ್ನು ಪತ್ತೆ ಮಾಡಿದೆ.

ಡ್ರಗ್ಸ್ ಕೇಸ್ ಟ್ವಿಸ್ಟ್​​ : ಸ್ಯಾಂಡಲ್ವುಡ್ ಸೌತ್ ಬಾಯ್ಸ್ ಗ್ರೂಪ್​​​ ಪತ್ತೆಹಚ್ಚಿದ ಸಿಸಿಬಿ

author img

By

Published : Jan 29, 2021, 4:31 PM IST

ಬೆಂಗಳೂರು: ಸ್ಯಾಂಡಲ್​​​ವುಡ್​​​ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಪೊಲೀಸರು ಒಂದು ಹೆಜ್ಜೆ ಮುಂದಿಟ್ಟಿದ್ದು, ಸ್ಯಾಂಡಲ್​ವುಡ್​​ ಸೌತ್ ಬಾಯ್ಸ್ ಎನ್ನುವ ಗುಂಪನ್ನು ಸಿಸಿಬಿ ಪತ್ತೆ ಮಾಡಿ, ಹಿಟ್ ಲಿಸ್ಟ್ ರೆಡಿ ಮಾಡಿದೆ.

ನಶೆ ಜಾಲದಲ್ಲಿ ನಂಟಿರೋ ಸ್ಟಾರ್ಸ್ ಹಾಗೂ ಉದ್ಯಮಿಗಳ ಮಕ್ಕಳ ಲಿಸ್ಟ್ ರೆಡಿ ಮಾಡಿರುವ ಸಿಸಿಬಿ, ಬೆಂಗಳೂರು ಸೌತ್ ಬಾಯ್ಸ್ ಅನ್ನೋ ಗ್ರೂಪ್ ಮಾಡಿಕೊಂಡಿರೋ ಸೆಲೆಬ್ರೆಟಿಗಳನ್ನು ಪತ್ತೆ ಹಚ್ಚಿದೆ.

ಸೌತ್ ಬಾಯ್ಸ್ ವಾಟ್ಸಪ್​ ಗ್ರೂಪ್​​ನಲ್ಲಿ ಸ್ಯಾಂಡಲ್​ವುಡ್​ನ ಸ್ಟಾರ್ ನಟರು, ಉದ್ಯಮಿಗಳ ಮಕ್ಕಳು ಇದ್ದು, ಕಾಟನ್ ಪೇಟೆ ಎಫ್.ಐ.ಆರ್ ಮಾದರಿಯಲ್ಲಿ ಹೊಸದಾಗಿ ಸುಮೊಟೋ ಕೇಸ್ ದಾಖಲು ಮಾಡಲು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ : ಸಲಾರ್​​ ಶೂಟಿಂಗ್​ ಸ್ಟಾರ್ಟ್.. ಪ್ರಭಾಸ್​​ ಫೋಟೋ ವೈರಲ್​​​..​

ಪ್ರತಿ ಶುಕ್ರವಾರ ಸಂಜೆ ಆಕ್ಟೀವ್ ಆಗ್ತಿದ್ದ ಸೌತ್ ಬಾಯ್ಸ್ ಗ್ರೂಪ್, ವೀಕೆಂಡ್​​ಗಳಲ್ಲಿ ಪಾರ್ಟಿ ಬಗ್ಗೆ ಚಾಟಿಂಗ್ ನಡೆಸುತ್ತಿತ್ತು. ಗ್ರೂಪ್​​ನಲ್ಲಿನ ಸ್ಟಾರ್ಸ್ ಹಾಗೂ ಉದ್ಯಮಿಗಳ ಮಕ್ಕಳು ಡಿಸೈಡ್ ಮಾಡಿದ ಕಡೆ ಪಾರ್ಟಿ ಆಯೋಜನೆ ಆಗುತ್ತಿತ್ತು. ಲಾಕ್​​ಡೌನ್ ಸಮಯದಲ್ಲಿ ಸೌತ್ ಬಾಯ್ಸ್ ಗ್ರೂಪ್ ಅತೀ ಹೆಚ್ಚು ಪಾರ್ಟಿ ಮಾಡಿದೆ ಎಂದು ತಿಳಿದು ಬಂದಿದೆ. ಕಾಟನ್ ಪೇಟೆ ಕೇಸ್ ವಿಚಾರಣೆ ಸಮಯದಲ್ಲಿ ಸೌತ್ ಬಾಯ್ಸ್ ಗ್ರೂಪ್ ವಿಚಾರ ಹೊರಬಿದ್ದಿದೆ.

ಕಾಟನ್ ಪೇಟೆ ಕೇಸ್ ಸಂಬಂಧ ಕೆಲ ಸ್ಟಾರ್ ನಟರ ವಿಚಾರಣೆ ಈಗಾಗಲೇ ಆಗಿದ್ದು, ನಟರ ಜೊತೆ ರಾಜಕಾರಣಿಗಳ ಮಕ್ಕಳ ವಿಚಾರಣೆ ನಡೆಸಿ ಸಿಸಿಬಿ ಪೊಲೀಸರು ಈಗಾಗಲೇ ಮೊಬೈಲ್ ಸೀಜ್ ಮಾಡಿದ್ದಾರೆ. ವಿಚಾರಣೆಗೆ ಬಂದವರ ಮೊಬೈಲ್ ಡೇಟಾ ರಿಟ್ರೈವ್​ ಮಾಡಿದಾಗ ಸೌತ್ ಬಾಯ್ಸ್ ಗ್ರೂಪ್ ಬಗ್ಗೆ ಮಾಹಿತಿ ಈಗ ದೊರೆತಿದೆ. ಸೌತ್ ಬಾಯ್ಸ್ ಗ್ರೂಪ್​​ನಲ್ಲಿನ ಸ್ಟಾರ್ಸ್ ಹಾಗೂ ಶ್ರೀಮಂತರ ಮಕ್ಕಳ ಬಗ್ಗೆ ಈಗಾಗಲೇ ಸಿಸಿಬಿ ಪೊಲೀಸರು ‌ಮಾಹಿತಿ ಕಲೆಹಾಕಿದ್ದಾರೆ.

ಕಾಟನ್ ಪೇಟೆ ಕೇಸ್​​ನಲ್ಲಿ ಅರೆಸ್ಟ್ ಆಗಿರೋ ಡ್ರಗ್ಸ್​​ ಪೆಡ್ಲರ್​​ಗಳಿಂದಲೂ ಸೌತ್ ಬಾಯ್ಸ್ ಸೆಲೆಬ್ರೆಟಿಗಳ ಬಗ್ಗೆ ಮಾಹಿತಿ ಕಲೆಕಲೆಹಾಕಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಿಸಿಬಿ ಪೊಲೀಸರು ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳ ಮಕ್ಕಳನ್ನು ವಿಚಾರಣೆಗೆ ಕರೆದು ಬಂಧಿಸುವ ಸಾಧ್ಯತೆ ಹೆಚ್ಚಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.