ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಚಿತ್ರ 'ರಾಬರ್ಟ್' ಸಿನಿಮಾ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು. ನಿನ್ನೆ ಸಿನಿಮಾದಲ್ಲಿ ದರ್ಶನ್ ಲುಕ್ ಹೇಗಿದೆ ಎಂಬ ಮತ್ತೊಂದು ಫೋಟೋ ಕೂಡಾ ರಿವೀಲ್ ಆಗಿದೆ.
-
Thank u so much for the love u have shown on #Roberrt brother.. tatoo of a film name really means a lot...my heartfelt regards to u...🤗🙏 pic.twitter.com/wF4L6rjd7q
— Tharun Sudhir (@TharunSudhir) June 14, 2019 " class="align-text-top noRightClick twitterSection" data="
">Thank u so much for the love u have shown on #Roberrt brother.. tatoo of a film name really means a lot...my heartfelt regards to u...🤗🙏 pic.twitter.com/wF4L6rjd7q
— Tharun Sudhir (@TharunSudhir) June 14, 2019Thank u so much for the love u have shown on #Roberrt brother.. tatoo of a film name really means a lot...my heartfelt regards to u...🤗🙏 pic.twitter.com/wF4L6rjd7q
— Tharun Sudhir (@TharunSudhir) June 14, 2019
ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾವನ್ನು ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಕೂಡಾ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್‌ಗಳು ರಿವೀಲ್ ಆದಾಗಿನಿಂದ ಫ್ಯಾನ್ಗಳು ಭಾರೀ ಥ್ರಿಲ್ ಆಗಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡಾ ಅದೇ ರೀತಿಯ ಫೋಟೋ ಕ್ಲಿಕ್ ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ರಾಬರ್ಟ್ ಬೈಕ್ ಕೂಡಾ ಹೊಸ ಟ್ರೆಂಡ್ ಸೃಷ್ಟಿಸಿದೆ. ಅಭಿಮಾನಿಗಳು ಬೈಕನ್ನು ಅದೇ ರೀತಿ ಡಿಸೈನ್ ಮಾಡಿಸಿಕೊಳ್ಳುತ್ತಿದ್ದಾರೆ.
ಅಷ್ಟೇ ಏಕೆ, ರಾಬರ್ಟ್ ಟ್ಯಾಟೂ ಜ್ವರ ಕೂಡಾ ಹೆಚ್ಚಾಗುತ್ತಿದೆ. ಅಭಿಮಾನಿಗಳು ತಮ್ಮ ಮೈ ಮೇಲೆ 'ರಾಬರ್ಟ್' ಹೆಸರಿನಲ್ಲಿ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಈ ಕ್ರೇಜ್ ಪ್ರತಿದಿನ ಹೆಚ್ಚಾಗುತ್ತಿರುವುದು ಚಿತ್ರ ನಿರ್ದೇಶಕ ತರುಣ್ ಸುಧೀರ್ಗೆ ಖುಷಿಯಾಗಿದೆ. ಅಭಿಮಾನಿಯೊಬ್ಬರು ತಮ್ಮ ತೋಳಿನ ಮೇಲೆ 'ರಾಬರ್ಟ್' ಎಂದು ಹಚ್ಚೆ ಹಾಕಿಸಿಕೊಂಡು ಫೇಸ್ಬುಕ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಅಭಿಮಾನಿಯ ಅಭಿಮಾನಕ್ಕೆ ಫಿದಾ ಆಗಿರುವ ತರುಣ್ ಸುಧೀರ್, ನಮ್ಮ ಚಿತ್ರಕ್ಕಾಗಿ ನೀವು ತೋರಿದ ಪ್ರೀತಿಗೆ ಧನ್ಯವಾದಗಳು ಬ್ರದರ್ ಅಂತಾ ತಮ್ಮ ಟ್ವಿಟರ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.