ETV Bharat / sitara

'ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ' ಅಂತ 'ತನಿಖೆ' ಮಾಡ್ತಿದ್ದಾರೆ ನವೀನ್​ ಸಜ್ಜು - ENNE song super hit

ನವೀನ್ ಸಜ್ಜು ಅವರು ಹಾಡಿರುವ ‘ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ....ಗೀತೆ ಸಖತ್​ ವೈರಲ್ ಆಗಿದೆ. ಇದೇ ಹಾಡು ಟಿಕ್ ಟಾಕ್ ನಲ್ಲೂ ಧೂಳೆಬ್ಬಿಸಿದೆ.

THANIKE  film  ENNE  song super hit
‘ತನಿಖೆ’ ಚಿತ್ರ
author img

By

Published : May 5, 2020, 10:01 AM IST

ದೇಶಾದ್ಯಂತ 40 ದಿನಗಳ ನಂತರ ‘ಎಣ್ಣೆ’ ಮಾರಾಟ ಶುರು ಆಗಿರುವ ಸಮಯದಲ್ಲಿ ಕನ್ನಡದ ತನಿಖೆ ಚಿತ್ರದ ಎಣ್ಣೆ ಹಾಡೊಂದು ಫೇಮಸ್​ ಆಗಿದೆ. ಈ ಹಾಡು ಯೂ ಟ್ಯೂಬ್ ನಲ್ಲಿ ಹಿಟ್​ ಆಗಿದೆ. 6 ಲಕ್ಷದ 12 ಸಾವಿರ ಮಂದಿ ಈ ಹಾಡನ್ನು ವೀಕ್ಷಿಸಿದ್ದಾರೆ.

‘ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ....ಗೀತೆ ನವೀನ್ ಸಜ್ಜು ಅವರು ಹಾಡಿರುವುದು ಸಖತ್ ವೈರಲ್ ಆಗಿದೆ. ಇದೇ ಹಾಡು ಟಿಕ್ ಟಾಕ್ ನಲ್ಲೂ ಸಹ ಧೂಳೆಬ್ಬಿಸಿದೆ. ಜೀ ಮ್ಯೂಜಿಕ್ ಅಡಿಯಲ್ಲಿ ಈ ‘ತನಿಖೆ’ ಚಿತ್ರದ ಹಾಡುಗಳು ಬಿಡುಗಡೆ ಆಗಿದೆ.

THANIKE  film  ENNE  song super hit
‘ತನಿಖೆ’ ಚಿತ್ರ

‘ತನಿಖೆ’ ಚಿತ್ರಕ್ಕೆ ಸೆನ್ಸಾರ್​ ಮಂಡಳಿ ಒಪ್ಪಿಗೆ ಸಹ ನೀಡಿದ್ದು, ಮಾರ್ಚ್​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ, ಲಾಕ್​ಡೌನ್​ ಹಿನ್ನೆಲಯಲ್ಲಿ ಜುಲೈ ಅಥವಾ ಆಗಸ್ಟ್​​ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕಲಿ ಗೌಡ ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.

ತನಿಖೆ ಚಿತ್ರ ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಸಿನಿಮಾದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳನ್ನ ಅಲ್ಟಿಮೇಟ್ ಶಿವು ನಿರ್ವಹಿಸಿದ್ದಾರೆ. ಕ್ರಿಸ್ಟೋಫರ್ ಲೀ ಸಂಗೀತ ನಿರ್ದೇಶನದಲ್ಲಿ ಸಂತೋಷ್ ವೆಂಕಿ, ಚಿಂತನ್ ವಿಕಾಸ್, ನವೀನ್ ಸಜ್ಜು , ವಾಣಿ ಹರಿಕೃಷ್ಣ ಹಾಡಿದ್ದಾರೆ.

THANIKE  film  ENNE  song super hit
‘ತನಿಖೆ’ ಚಿತ್ರತಂಡ

‘ತನಿಖೆ’ ಚಿತ್ರದ ಕಥೆ, ಚಿತ್ರಕಥೆ, ಗೀತರಚನೆ ಹಾಗೂ ನಿರ್ದೇಶನ ಕಲಿ ಗೌಡ ಅವರೇ ಮಾಡಿದ್ದಾರೆ. ಶ್ಯಾಮ್ ಸಿಂದನೂರ್ ಛಾಯಾಗ್ರಹಣ, ಸಂಕಲನ ಹಾಗೂ ಡಿ ಐ ಕೆಲಸವನ್ನು ವೇದ್ ನಿರ್ವಹಿಸಿದ್ದಾರೆ.

ತಾರಾಗಣದಲ್ಲಿ ಅನಿಲ್ ಕುಮಾರ್, ಗುಲ್ಶನ್, ಚಂದನ, ಮುನಿರಾಜು, ಸಂತೋಷ್ ಜಯಕುಮಾರ್, ಪ್ರಭಿಕ್ ಮೊಗವೀರ್, ನಿಖಿಲ್, ಕಾಲ್ಕೆರೆ ಗಂಗಾಧರ್, ಅಪ್ಪು ಬಡಿಗರ್, ಗೋಪಿ ಹಾಗೂ ಇತರರು ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.