ETV Bharat / sitara

ಪೈಪೋಟಿ ನಡುವೆಯೂ 'ಪೊಗರು' ತೆಲುಗು ಬಿಡುಗಡೆ ಹಕ್ಕು ಪಡೆದ ಟಾಲಿವುಡ್​​​ ನಿರ್ಮಾಪಕ - Nandakishore direction Pogaru

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಜೊತೆಯಾಗಿ ನಟಿಸುತ್ತಿರುವ 'ಪೊಗರು' ಚಿತ್ರದ ತೆಲುಗು ಬಿಡುಗಡೆ ಹಕ್ಕನ್ನು ನಿರ್ಮಾಪಕ ಡಿ. ಪ್ರತಾಪ್ ರಾಜು 3.30 ಕೋಟಿ ರೂಪಾಯಿ ಮೊತ್ತಕ್ಕೆ ಪಡೆದಿದ್ದಾರೆ. ರಿಲೀಸ್ ಹಕ್ಕು ಪಡೆದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರತಾಪ್ ರಾಜು ಆದಷ್ಟು ಬೇಗ ಕಥೆಗೆ ತಕ್ಕಂತೆ ತೆಲುಗಿನಲ್ಲಿ ಟೈಟಲ್ ಇಡಲಾಗುವುದು ಎಂದಿದ್ದಾರೆ.

Pogaru release rights
'ಪೊಗರು'
author img

By

Published : Dec 4, 2020, 12:15 PM IST

Updated : Dec 4, 2020, 12:22 PM IST

ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಪೊಗರು' ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಕೂಡಾ ಬಿಡುಗಡೆಯಾಗುತ್ತಿದೆ. ಬಿ.ಕೆ. ಗಂಗಾಧರ್ ನಿರ್ಮಾಣದ ಈ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಿದ್ದು ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕರಾಬು ಹಾಡಿಗೆ ಕನ್ನಡ ಮಾತ್ರವಲ್ಲ ತೆಲುಗು ಪ್ರೇಕ್ಷಕರು ಕೂಡಾ ಫಿದಾ ಆಗಿದ್ದಾರೆ.

  • " class="align-text-top noRightClick twitterSection" data="">

ಚಂದನ್ ಶೆಟ್ಟಿ ಹಾಡಿರುವ ಕರಾಬು ಹಾಡು ಯೂಟ್ಯೂಬ್​​​​ನಲ್ಲಿ ಅತ್ಯಧಿಕ ವೀಕ್ಷಣೆ ಪಡೆದಿದೆ. ಆದ್ದರಿಂದಲೇ ತೆಲುಗು ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ಉಂಟಾಗಿದೆ. ವಿಶಾಖಪಟ್ಟಣಕ್ಕೆ ಸೇರಿದ ನಿರ್ಮಾಪಕ ಡಿ. ಪ್ರತಾಪ್​​ ರಾಜು ಈ 'ಪೊಗರು' ಚಿತ್ರದ ತೆಲುಗು ಬಿಡುಗಡೆಹಕ್ಕನ್ನು ಪಡೆದಿದ್ದಾರೆ. 3.30 ಕೋಟಿ ರೂಪಾಯಿಗೆ ಹಕ್ಕು ಪಡೆದಿದ್ದು ಸಾಯಿ ಸೂರ್ಯ ಎಂಟರ್​​​​​​ಟೈನ್ಮೆಂಟ್​​​​ ಬ್ಯಾನರ್ ಮೂಲಕ ಸಿನಿಮಾವನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರತಾಪ್ ರಾಜು ''ಕರಾಬು ಹಾಡಿನ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿರುವ ಈ ಚಿತ್ರದ ಬಿಡುಗಡೆ ಹಕ್ಕನ್ನು ನಾನು ಪಡೆದಿದ್ದೇನೆ. ಈ ಸಿನಿಮಾ ಬಿಡುಗಡೆ ಹಕ್ಕನ್ನು ಪಡೆಯಲು ತೆಲುಗು ಚಿತ್ರರಂಗದಲ್ಲಿ ಭಾರೀ ಪೈಪೋಟಿ ಇದೆ. ಆದರೆ ನನಗೆ ಈ ಹಕ್ಕು ದೊರೆತಿರುವುದು ಬಹಳ ಸಂತೋಷವಾಗುತ್ತಿದೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಏಕಕಾಲದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಆದರೆ ತೆಲುಗಿನಲ್ಲಿ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಮಾಡಿಲ್ಲ. ಶೀಘ್ರದಲ್ಲೇ ಕಥೆಗೆ ತಕ್ಕಂತೆ ಒಳ್ಳೆ ಹೆಸರಿಡಲಾಗುವುದು'' ಎಂದು ತಿಳಿಸಿದ್ದಾರೆ.

Pogaru release rights
'ಪೊಗರು'

'ಪೊಗರು' ಸಿನಿಮಾ ಹಾಡುಗಳಿಗೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. WWF ಫೈಟರ್ ಕಾಯ್ ಗ್ರೀನ್, ಮೊರ್ಗನ್ ಅಸ್ತೆ, ಜೋ ಲಿಂಡರ್, ಜಾನ್ ಲೋಕಸ್​​​​​​​ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

Last Updated : Dec 4, 2020, 12:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.