'ಅವನೇ ಶ್ರೀಮನ್ನಾರಾಯಣ' ಸಿನಿಮಾ ಬಳಿಕ ಸಿಂಪಲ್ ಸ್ಟಾರ್ ಜನಪ್ರಿಯತೆಯ ರಕ್ಷಿತ್ ಶೆಟ್ಟಿ ಅಭಿನಯದ ಯಾವ ಸಿನಿಮಾಗಳೂ ರಿಲೀಸ್ ಆಗಿಲ್ಲ. ಕಳೆದೆರಡು ವರ್ಷಗಳಿಂದ ತಯಾರಾಗುತ್ತಿರುವ '777 ಚಾರ್ಲಿ' ಸಿನಿಮಾದ ಜಪ ಮಾಡುತ್ತಿರುವ ರಕ್ಷಿತ್ ಶೆಟ್ಟಿ, ಅಭಿಮಾನಿಗಳಿಗೊಂದು ಸಿಹಿ ಸುದ್ದಿ ನೀಡಿದ್ದಾರೆ.
ಆರು ತಿಂಗಳಿಗೊಮ್ಮೆ ಈ ಚಿತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ಚಂದನವನದಲ್ಲಿ ಆಗಾಗ ಸುದ್ದಿ ಮಾಡುತ್ತಿರುವ ಚಿತ್ರ ತಂಡದಿಂದ ಕೊನೆಗೂ ಹೊಸ ಸುದ್ದಿ ಹೊರಬಿದ್ದಿದೆ. ಸದ್ಯದಲ್ಲೇ 777 ಚಾರ್ಲಿ ಚಿತ್ರದ ಟೀಸರ್ ರಿಲೀಸ್ ಮಾಡಲು ದಿನ ನಿಗದಿ ಮಾಡಲಾಗಿದೆ.
ಹೌದು, ಮುಂದಿನ ತಿಂಗಳು ಜೂನ್ 6 ರಂದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ ಇದೆ. ಬರ್ತ್‌ಡೇ ಪ್ರಯುಕ್ತ ಚಿತ್ರದ ಅಧಿಕೃತ ಟೀಸರ್ ಲೈಫ್ ಆಫ್ ಚಾರ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಜೊತೆಗೆ ಈ ಚಿತ್ರದ ಅಫೀಶಿಯಲ್ ಟೀಸರ್, ಲೈಫ್ ಆಫ್ ಚಾರ್ಲಿ' ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬುದನ್ನೂ ಅವರು ಹೇಳಿದ್ದಾರೆ.
-
Bringing her world to your homes this June 6th. Stay home, stay safe and don't miss the Life of Charlie 🤗
— Rakshit Shetty (@rakshitshetty) May 29, 2021 " class="align-text-top noRightClick twitterSection" data="
ನಮ್ಮ ಚಿತ್ರದ ಅಫೀಷಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಜೂನ್ 6ಕ್ಕೆ ಬಿಡುಗಡೆಯಾಗಲಿದೆ✨#777Charlie #LifeOfCharlie #777CharlieTeaserOnJune6 pic.twitter.com/KBqoUCuHqG
">Bringing her world to your homes this June 6th. Stay home, stay safe and don't miss the Life of Charlie 🤗
— Rakshit Shetty (@rakshitshetty) May 29, 2021
ನಮ್ಮ ಚಿತ್ರದ ಅಫೀಷಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಜೂನ್ 6ಕ್ಕೆ ಬಿಡುಗಡೆಯಾಗಲಿದೆ✨#777Charlie #LifeOfCharlie #777CharlieTeaserOnJune6 pic.twitter.com/KBqoUCuHqGBringing her world to your homes this June 6th. Stay home, stay safe and don't miss the Life of Charlie 🤗
— Rakshit Shetty (@rakshitshetty) May 29, 2021
ನಮ್ಮ ಚಿತ್ರದ ಅಫೀಷಿಯಲ್ ಟೀಸರ್ 'ಲೈಫ್ ಆಫ್ ಚಾರ್ಲಿ' ಜೂನ್ 6ಕ್ಕೆ ಬಿಡುಗಡೆಯಾಗಲಿದೆ✨#777Charlie #LifeOfCharlie #777CharlieTeaserOnJune6 pic.twitter.com/KBqoUCuHqG
ಕಿರಣ್ ರಾಜ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಹಾಗೂ ಡಬ್ಬಿಂಗ್ ಮುಗಿದಿದೆ. ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ಎಂಬ ಮುದ್ದಿನ ಶ್ವಾನದ ಸುತ್ತ ನಡೆಯುವ ಕಥೆಯೇ 777 ಚಾರ್ಲಿ. ಸದ್ಯ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಕೊರೊನಾ ರೋಗ ನಿಯಂತ್ರಣಕ್ಕೆ ಬಂದ ಮೇಲೆ ಸಿನಿಮಾ ತೆರೆಗೆ ತರಲು ಯೋಜನೆ ರೂಪಿಸಿದೆ.
ಈ ಚಿತ್ರವನ್ನು ಸುಮಾರು 150 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸತತವಾಗಿ ಚಿತ್ರೀಕರಿಸಲಾಗಿದೆ. ಕ್ಲೈಮ್ಯಾಕ್ಸ್ ಶೂಟಿಂಗ್ ಅನ್ನು ಕಾಶ್ಮೀರದ ಹಿಮರಾಶಿ ನಡುವೆ ಮಾಡಲಾಗಿದೆ. ಸಂಗೀತ ಶೃಂಗೇರಿ, ಡ್ಯಾನಿಶ್ ಸೇಠ್, ರಾಜ್ ಬಿ. ಶೆಟ್ಟಿ, ಮತ್ತು ಬಾಬಿ ಸಿಂಹ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನೊಬಿನ್ ಪೌಲ್ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರವಿಂದ್ ಕಶ್ಯಪ್ ಕ್ಯಾಮರಾ ವರ್ಕ್ ಇದೆ. ಪ್ರತೀಕ್ ಎಡಿಟಿಂಗ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪರಂವಃ ಸ್ಟುಡಿಯೋ ಬ್ಯಾನರ್ನಲ್ಲಿ ಚಿತ್ರ ಮೂಡಿ ಬರುತ್ತಿದೆ.