ETV Bharat / sitara

ನಟಿ ಹರಿಪ್ರಿಯ ಮುಖ್ಯ ಭೂಮಿಕೆಯ 'ಕನ್ನಡ್ ಗೊತ್ತಿಲ್ಲ' ಚಿತ್ರದ ಟೀಸರ್ ಲಾಂಚ್ - ಸ್ಯಾಂಡಲ್​ವುಡ್

ಮಯೂರ್ ರಾಘವೇಂದ್ರ ನಿರ್ದೇಶನದ, ನಟಿ ಹರಿಪ್ರಿಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಕನ್ನಡ್ ಗೊತ್ತಿಲ್ಲ' ಚಿತ್ರದ ಮೊದಲ ಟೀಸರ್ ಅನ್ನು ಇಂದು ಲಾಂಚ್​ ಮಾಡಲಾಗಿದೆ.

'ಕನ್ನಡ್ ಗೊತ್ತಿಲ್ಲ' ಚಿತ್ರದ ಟೀಸರ್ ಲಾಂಚ್
author img

By

Published : Aug 8, 2019, 5:00 PM IST

Updated : Aug 8, 2019, 8:24 PM IST

ಸ್ಯಾಂಡಲ್​ವುಡ್​ನ ಬ್ಯೂಟಿ ಕ್ವೀನ್ ಹರಿಪ್ರಿಯಾ, ಡಾಟರ್ ಆಫ್ ಪಾರ್ವತಮ್ಮ ಚಿತ್ರದ ನಂತರ ಮತ್ತೊಮ್ಮೆ ಕನ್ನಡ್ ಗೊತ್ತಿಲ್ಲ ಚಿತ್ರದಲ್ಲಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಚಿತ್ರತಂಡ ಇಂದು ಚಿತ್ರದ ಮೊದಲ ಟೀಸರ್ ಲಾಂಚ್ ಮಾಡಿತು.

ಮಲ್ಲೇಶ್ವರಂನ ಎಸ್ಆರ್​ವಿ ಥಿಯೇಟರ್​ನಲ್ಲಿ ನಡೆದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಮಿಸಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಕನ್ನಡ್ ಗೊತ್ತಿಲ್ಲ ಚಿತ್ರದ ಟೀಸರ್ ಲಾಂಚ್ ಮಾಡಿದರು. ಅಲ್ಲದೆ ಚಿತ್ರದ ಟೈಟಲ್ ತುಂಬಾ ವಿಶೇಷವಾಗಿದ್ದು, ಟೀಸರ್ ಸಹ ತುಂಬಾ ಖುಷಿಯಾಗಿದೆ. ನಾನು ಕೂಡ ಈ ಚಿತ್ರಕ್ಕಾಗಿ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇನ್ನು ಕನ್ನಡ್ ಗೊತ್ತಿಲ್ಲ ಚಿತ್ರವನ್ನು ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಯೂರ್​ ರಾಘವೇಂದ್ರ, ಕಥೆ- ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ನಿರ್ದೇಶಕ ಮಯೂರ್ ರಾಘವೇಂದ್ರ ಅವರಿಗೆ ಈ ಚಿತ್ರದ ಕಥೆ ಹುಟ್ಟಿದ್ದೇ ಒಂದು ರೋಚಕ. ಅವರು ಒಂದು ಸಾಫ್ಟ್​ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ 15 ಜನರ ಟೀಂನಲ್ಲಿ ಕೆಲಸ ಮಾಡುತ್ತಿದ್ದರಂತೆ. ಆದರೆ 15 ಜನರಲ್ಲಿ ಅವರನ್ನು ಹೊರತುಪಡಿಸಿ, ಬೇರೆ ಯಾರಿಗೂ ಕನ್ನಡ ಬರುತ್ತಿರಲಿಲ್ಲವಂತೆ. ಅಲ್ಲದೆ ಕನ್ನಡದ ಬಗ್ಗೆ ಕೇಳಿದರೆ ಕನ್ನಡ್ ಗೊತ್ತಿಲ್ಲ ಎಂದು ಉತ್ತರ ನೀಡುತ್ತಿದ್ದರಂತೆ. ಇದರಿಂದಲೇ ಈ ಚಿತ್ರಕ್ಕೆ ಕಥೆ ಹುಟ್ಟಿದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿ ಕನ್ನಡ್ ಗೊತ್ತಿಲ್ಲ ಚಿತ್ರ ಮೂಡಿಬಂದಿದೆ. ಅಲ್ಲದೆ ಚಿತ್ರದಲ್ಲಿ ಹರಿಪ್ರಿಯಾ ಅವರು ಲೀಡ್ ರೋಲ್ ಮಾಡಿದ್ದು, ಇದೊಂದು ಮಹಿಳಾ ಪ್ರಧಾನ ಚಿತ್ರ ಎಂದು ತಿಳಿಸಿದರು.

'ಕನ್ನಡ್ ಗೊತ್ತಿಲ್ಲ' ಚಿತ್ರದ ಟೀಸರ್ ಲಾಂಚ್

ಇನ್ನು ಬೆಂಗಳೂರಿನಲ್ಲಿ ಪರಭಾಷಿಗರು ತುಂಬಿ ತುಳುಕುತ್ತಿದ್ದು, ನಮ್ಮ ಚಿತ್ರದಿಂದ ಒಂದು ರೆವೆಲ್ಯೂಷನ್ ಆಗುತ್ತೆ ಎಂದು ನಟಿ ಹರಿಪ್ರಿಯಾ ಹೇಳಿದರು. ಡಾಟರ್ ಆಫ್ ಪಾರ್ವತಮ್ಮ ಚಿತ್ರದ ನಂತರ ಮತ್ತೆ ನಾನು ಸ್ವಲ್ಪ ದಿನಗಳ ಮಟ್ಟಿಗೆ ಅಂತಹ ಪಾತ್ರಗಳನ್ನು ಮಾಡುವುದು ಬೇಡ ಎಂದು ನಿರ್ಧರಿಸಿದ್ದೆ. ಆದರೆ ಚಿತ್ರದ ಕಥೆ ಕೇಳಿದ ನಂತರ ಸಿನಿಮಾ ಮಾಡೋಣ ಎಂದು ಹೇಳಿದೆ. ಚಿತ್ರದಲ್ಲಿ ನಾನು ಒಬ್ಬ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೇನೆ. ಅಲ್ಲದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಜೀನ್ಸ್ ಪ್ಯಾಂಟ್ ಹಾಕಿ ಮಾಸ್​ ಲುಕ್​ನಲ್ಲಿ ಕಾಣಿಸಿದ್ದೇನೆ ಎಂದು ಹರಿಪ್ರಿಯ ತಮ್ಮ ಪಾತ್ರದ ಬಗ್ಗೆ ಹೇಳಿದರು.

ಇನ್ನು ಚಿತ್ರದಲ್ಲಿ ಮೂರು ಹಾಡುಗಳಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ರೆ, ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಭಡ್ತಿ ಪಡೆದಿದ್ದಾರೆ. ಅಲ್ಲದೆ ಸಂಕಲಕಾರನಾಗಿಯೂ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಕೂಡ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು. ಅಪ್ಪಟ ಕನ್ನಡಿಗ ರೈತ ಕುಮಾರ ಕಂಠೀರವ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Intro:ಸ್ಯಾಂಡಲ್ ವುಡ್ ನ ಬ್ಯೂಟಿ ಕ್ವೀನ್ ಹರಿಪ್ರಿಯಾ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ನಂತರ ಮತ್ತೊಮ್ಮೆ ಕನ್ನಡ್ ಗೊತ್ತಿಲ್ಲ ಚಿತ್ರದಲ್ಲಿ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದು. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಇಂದು ಚಿತ್ರತಂಡ ಚಿತ್ರದ ಮೊದಲ ಟೀಸರ್ ಲಾಂಚ್ ಮಾಡಿತು. ಮಲ್ಲೇಶ್ವರಂನ ಎಸ್ಆರ್ವಿ ಥಿಯೇಟರ್ ನಲ್ಲಿ ನಡೆದ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಗೆಸ್ಟ್ ಆಗಿ ಆಗಮಿಸಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಕನ್ನಡ್ ಗೊತ್ತಿಲ್ಲ ಚಿತ್ರದ ಟೀಸರ್ ಲಾಂಚ್ ಮಾಡಿದರು. ಅಲ್ಲದೆ ಚಿತ್ರದ ಟೈಟಲ್ ತುಂಬಾ ವಿಶೇಷವಾಗಿದ್ದು .ಟೀಸರ್ ಸಹ ತುಂಬ ಖುಷಿಯಾಗಿದೆ. ನಾನು ಕೂಡ ಈ ಚಿತ್ರಕ್ಕಾಗಿ ತುಂಬಾ ಕುತೂಹಲದಿಂದ ಕಾಯುತ್ತಿದ್ದೇನೆ. ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Body:ಇನ್ನು ಕನ್ನಡ್ ಗೊತ್ತಿಲ್ಲ ಚಿತ್ರವನ್ನು ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಯೂರ ರಾಘವೇಂದ್ರ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಇನ್ನು ನಿರ್ದೇಶಕ ಮಯೂರ್ ರಾಘವೇಂದ್ರ ಅವರಿಗೆ ಈ ಚಿತ್ರದ ಕಥೆ ಹುಟ್ಟಿದ್ದೆ ಒಂದು ರೋಚಕವಾಗಿದ್ದು. ಅವರು ಒಂದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವಾಗ 15 ಜನರ ಟೀಂ ನಲ್ಲಿ ಅವರು ವರ್ಕ್ ಮಾಡುತ್ತಿದ್ದರಂತೆ. ಆದರೆ 15 ಜನರಲ್ಲಿ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಕನ್ನಡ ಬರುತ್ತಿರಲಿಲ್ಲವಂತೆ. ಅಲ್ಲದೆ ಕನ್ನಡದ ಬಗ್ಗೆ ಕೇಳಿದರೆ ಕನ್ನಡ್ ಗೊತ್ತಿಲ್ಲ ಎಂದು ಉತ್ತರ ನೀಡುತ್ತಿದ್ದರಂತೆ. ಇದರಿಂದಲೇ ಈ ಚಿತ್ರಕ್ಕೆ ಕಥೆ ಹುಟ್ಟಿದ್ದು ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿ ಕನ್ನಡ್ ಗೊತ್ತಿಲ್ಲ ಚಿತ್ರ ಮೂಡಿಬಂದಿದೆ. ಅಲ್ಲದೆ ಚಿತ್ರದಲ್ಲಿ ಹರಿಪ್ರಿಯಾ ಅವರು ಲೀಡ್ ರೋಲ್ ಮಾಡಿದ್ದು . ಇದೊಂದು ಮಹಿಳಾ ಪ್ರಧಾನ ಚಿತ್ರ ಎಂದು ತಿಳಿಸಿದರು.

Conclusion:ಇನ್ನು ಬೆಂಗಳೂರಿನಲ್ಲಿ ಪರಭಾಷಿಗರ ತುಂಬಿತುಳುಕುತ್ತಿದ್ದ. ನಮ್ಮ ಚಿತ್ರದಿಂದ ಒಂದು ರೆವಲ್ಯೂಷನ್ ಹಾಗುತ್ತೆ ಎಂದು ನಟಿ ಹರಿಪ್ರಿಯಾ ಹೇಳಿದರು. ಡಾಟರ್ ಆಫ್ ಪಾರ್ವತಮ್ಮ ಚಿತ್ರದ ನಂತರ ಮತ್ತೆ ನಾನು ಸ್ವಲ್ಪ ದಿನಗಳ ಮಟ್ಟಿಗೆ ಅಂತಹ ಪಾತ್ರಗಳನ್ನು ಮಾಡುವುದು ಬೇಡ ಎಂದು ನಿರ್ಧರಿಸಿದ್ದೆ. ಆದರೆ ಚಿತ್ರದ ಕಥೆ ಕೇಳಿದ ನಂತರ ಸಿನಿಮಾ ಮಾಡೋಣ ಎಂದು ಹೇಳಿದೆ. ಚಿತ್ರದಲ್ಲಿ ನಾನು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದೆನೆ. ಅಲ್ಲದೆ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಜೀನ್ಸ್ ಪ್ಯಾಂಟ್ ಹಾಕಿ ತಂಬಾ ಲುಕ್ ನಲ್ಲಿ ಕಾಣಿಸಿದೆ. ಆದರೆ ಈ ಚಿತ್ರದಲ್ಲಿ ಸೀರಿಯುಟ್ಟು ಗಂಡು ಹಿಡಿದಿದ್ದೇನೆ ಎಂದು ಹರಿಪ್ರಿಯ ತಮ್ಮ ಪಾತ್ರದ ಬಗ್ಗೆ ಹೇಳಿದರು. ಇನ್ನು ಚಿತ್ರದಲ್ಲಿ ಮೂರು ಹಾಡುಗಳಿದ್ದು ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ರೆ. ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಬಡ್ತಿ ಪಡೆದಿದ್ದಾರೆ ಅಲ್ಲದೆ ಸಂಕಲಕಾರ ನಾಗಿಯೂ ಈ ಚಿತ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟಿ ಸುಧಾರಾಣಿ ಕೂಡ ಒಂದು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು. ಅಪ್ಪಟ ಕನ್ನಡಿಗ ರೈತ ಕುಮಾರ ಕಂಠೀರವ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Last Updated : Aug 8, 2019, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.