ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ತಮಿಳು ನಟ ಶರತ್ ಕುಮಾರ್, ಅಪ್ಪುಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' (Bharat Ratna To Puneeth) ನೀಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಪ್ಪು ನಿಧನದ ಸುದ್ದಿ ಕೇಳಿದಾಗ ದೇವರನ್ನು ಕ್ಷಮಿಸಲು ಆಗಲಿಲ್ಲ. ಪುನೀತ್ ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ಪುನೀತ್ ಈಗಲೂ ಎಂದೆಂದಿಗೂ ನಮ್ಮ ಮನದಲ್ಲಿ ಜೀವಂತ. ಪುನೀತ್ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ನೇತ್ರದಾನದ ಮೂಲಕ ಉತ್ತಮ ಮೆಸೇಜ್ ರವಾನಿಸಿದ್ದಾರೆ ಎಂದು ಹೇಳಿದರು.
ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದಂತೆ ಎಂಬ ಮಾತಿದೆ. ಪುನೀತ್ ಸಹ ಹಾಗೆಯೇ ಸಮಾಜ ಸೇವೆ ಮಾಡಿದ್ದಾರೆ. ನಾನು ಯಾವತ್ತು ಪುನೀತ್ ಶ್ರದ್ಧಾಂಜಲಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಪುನೀತ್ ನನ್ನ ಶ್ರದ್ಧಾಂಜಲಿಗೆ ಬರುತ್ತಾರೆ ಎಂದುಕೊಂಡಿದ್ದೆ ಎಂದು ಭಾವುಕರಾದರು.
ಅಪ್ಪುಗೆ ಅತ್ಯುನ್ನತ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಓದಿ: 'ಹೇಗಾದ್ರೂ ಮಾಡಿ ನನ್ನ ಕಳುಹಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ ಪ್ಲೀಸ್': ರಾಘಣ್ಣನ ಕಣ್ಣೀರು