ತಮಿಳು ನಟ ವಿಶಾಲ್ ರಿಯಲ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತು. ಈ ನಟ ಸಮಾಜ ಸುಧಾರಣೆ ಬಗ್ಗೆ ಕೇವಲ ರೀಲ್ ಮೇಲಷ್ಟೆ ಉದ್ದುದ್ದ ಡೈಲಾಗ್ ಹೊಡೆದು, ಸಂಭಾವನೆ ಪಡೆದು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಫೀಲ್ಡ್ಗಿಳಿದು ನೊಂದವರ ಕಷ್ಟ ಆಲಿಸಿ, ಹಸಿದವರ ಕಣ್ಣಲ್ಲಿ ನಿಜವಾದ ಹೀರೋ ಅನ್ನೋದು ಅವರ ಅಭಿಮಾನಿಗಳ ಮಾತು.
ಅಭಿಮಾನಿಗಳಾಡುವ ಮಾತಿನಂತೆ ನಡೆದುಕೊಳ್ಳುತ್ತಾರೆ ವಿಶಾಲ್. ಈ ಸೂಪರ್ ಸ್ಟಾರ್ ಇದೀಗ ಸಂಕಷ್ಟದಲ್ಲಿರುವ ತಮಿಳುನಾಡು ರೈತರ ನೆರವಿಗೆ ಧಾವಿಸಿದ್ದಾರೆ. ತಮ್ಮ ಅಯೋಗ್ಯ ಚಿತ್ರದ ಪ್ರತಿ ಟಿಕೆಟ್ನ ಮಾರಾಟದಿಂದ ಬರುವ ಹಣದಲ್ಲಿ ಒಂದು ರೂಪಾಯಿ ರೈತರ ಕಲ್ಯಾಣಕ್ಕೆ ನೀಡುತ್ತಿದ್ದಾರೆ. ಈ ಮೂಲಕ ಬರಗಾಲದಿಂದ ತತ್ತರಿಸಿರುವ ರೈತಾಪಿ ವರ್ಗಕ್ಕೆ ರಿಯಲ್ ಹೀರೋ ಆಗಿದ್ದಾರೆ.
ರೈತರ ಕಲ್ಯಾಣಕ್ಕೆ ವಿಶಾಲ್ ಶ್ರಮಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ಚಿತ್ರದ ಮೊದಲ ದಿನದ ಗಳಿಕೆಯನ್ನು ರೈತರಿಗೆ ನೀಡಿ ಮಾನವೀಯತೆ ಮೆರೆದಿದ್ದರು. ಅಷ್ಟೇ ಕೇರಳ ಹಾಗೂ ಚನ್ನೈ ಪ್ರಕೃತಿ ವಿಕೋಪಕ್ಕೆ ತುತ್ತಾದಾಗ, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದರು.