ETV Bharat / sitara

ಮಿಲ್ಕಿ ಬ್ಯೂಟಿಯನ್ನೂ ಬಿಡಲಿಲ್ಲ ಕೊರೊನಾ... ಹೈದ್ರಾಬಾದ್​ ಆಸ್ಪತ್ರೆಗೆ ದಾಖಲಾದ ತಮನ್ನಾ

ಮಿಲ್ಕಿ ಬ್ಯೂಟಿ ತಮನ್ನಾಗೂ ಕೊರೊನಾ ಸೋಂಕು ತಗುಲಿದೆ. ಅವರು ಸದ್ಯ ಹೈದರಾಬಾದ್​​ನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Tamannaah Bhatia tests COVID-19 positive
ಮಿಲ್ಕಿ ಬ್ಯೂಟಿಯನ್ನೂ ಬಿಡಲಿಲ್ಲ ಪುಂಡ ಕೊರೊನಾ
author img

By

Published : Oct 4, 2020, 5:29 PM IST

ಹೈದರಾಬಾದ್​: ಕೆಜಿಎಫ್​​​​ನಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂಬ ಹಾಡಿಗೆ ಹೆಜ್ಜೆ ಹಾಕಿದ್ದ ಮಿಲ್ಕಿ ಬ್ಯೂಟಿ ತಮನ್ನಾಗೂ ಕೊರೊನಾ ಸೋಂಕು ತಗುಲಿದೆ. ಅವರು ಸದ್ಯ ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ತಮನ್ನಾ ತಂದೆ ತಾಯಿ ಹಾಗೂ ಅವರ ಜೊತೆ ಸಂಪರ್ಕದಲ್ಲಿದ್ದವರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದು, ಅವರೆಲ್ಲರನ್ನೂ ಪರೀಕ್ಷೆ ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ತಮನ್ನಾ ತಂದೆ ತಾಯಿಗೆ ಕೊರೊನಾ ಪಾಸಿಟಿವ್​ ಬಂದಿತ್ತು. ನಂತ್ರ ಅವರು ಚೇತರಿಕೆ ಕಂಡಿದ್ದರು.

ಆದರೆ ಈಗ ತಮನ್ನಾ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೆ ಅವರು ಪರೀಕ್ಷೆಗೆ ಒಳಗಾಗಿದ್ದರು. ಇದೀಗ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು. ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ತಮ್ಮ ಅಚ್ಚು ಮೆಚ್ಚಿನ ನಟಿ ತಮನ್ನಾಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಷಯ ತಿಳಿದುಕೊಂಡ ಆಕೆಯ ಅಭಿಮಾನಿಗಳು ಅಘಾತಕ್ಕೀಡಾಗಿದ್ದು, ಶೀಘ್ರ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.