ಬಾಲಿವುಡ್ನಲ್ಲಿ ತಾಪ್ಸಿ ಪನ್ನು ಅಭಿನಯದ 'ರಶ್ಮಿ ರಾಕೆಟ್' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ಆದ್ರೆ, ಈಗಾಗಲೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, 'ಲೂಪ್ ಲಪೇಟ' ಎಂಬ ಮತ್ತೊಂದು ಚಿತ್ರದ ಶೂಟಿಂಗ್ನಲ್ಲಿ ತಾಪ್ಸಿ ಭಾಗಿಯಾಗಿದ್ದಾರೆ.
ಈ ಬಗ್ಗೆ ಸ್ವತಃ ತಾಪ್ಸಿಯೇ ಮಾಹಿತಿ ಹಂಚಿಕೊಂಡಿದ್ದು, ರಶ್ಮಿ ರಾಕೆಟ್ ಫಸ್ಟ್ ಶೆಡ್ಯೂಲ್ ಮುಕ್ತಾಯವಾಗಿದ್ದು, ಇದೀಗ ಲೂಪ್ ಲಪೇಟ ತಂಡದ ಕಡೆ ಹೋಗುವುದಾಗಿ ಹೇಳಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಓಡುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದು, ರಶ್ಮಿ ರಾಕೆಟ್ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ.
ಇದೀಗ ಲೋಲಾ ಕುಟುಂಬದ ಕಡೆ ಓಡುತ್ತಿದ್ದೇನೆ. ಇದು ಕೂಲ್ ಅಂಡ್ ಚಿಲ್ ಆಗಿದೆ ಎಂದು ಬರೆದಿದ್ದಾರೆ. ಈ ಹಿಂದೆಯೂ ಕೂಡ ರಶ್ಮಿ ರಾಕೆಟ್ ಚಿತ್ರಕ್ಕಾಗಿ ತಾವು ತರಬೇತಿ ಪಡೆಯುತ್ತಿರುವ ಕೆಲ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು.
- " class="align-text-top noRightClick twitterSection" data="
">