ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ಮುಂದಿನ ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಕಳೆದ ವಾರ ಕಿಶನ್ ಹಾಗೂ ಚಂದನ್ ಆಚಾರ್ ಮನೆಯಿಂದ ಹೊರ ಬಂದಿದ್ದು ಇದೀಗ ದೊಡ್ಮನೆಯೊಳಗೆ ಕುರಿ ಪ್ರತಾಪ್, ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್, ಪ್ರಿಯಾಂಕಾ, ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಉಳಿದಿದ್ದಾರೆ.
ಅಂದ ಹಾಗೇ ಕಿರುತೆರೆ ನಟಿ ಸಪ್ನಾ ದೀಕ್ಷಿತ್ ತಮ್ಮ ನೆಚ್ಚಿನ ಸ್ಪರ್ಧಿ ಹರೀಶ್ ರಾಜ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಮಾತ್ರವಲ್ಲ ಬಿಗ್ ಬಾಸ್ ವಿನ್ನರ್ ಕೂಡಾ ಹರೀಶ್ ಅವರೇ ಆಗುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್ ವಿಜೇತನಾಗಿ ಹೊರಹೊಮ್ಮುವ ಎಲ್ಲಾ ಸಾಮರ್ಥ್ಯಗಳು ಹರೀಶ್ ರಾಜ್ಗೆ ಇದೆ ಎಂದು ಸಪ್ನಾ ದೀಕ್ಷಿತ್ ಹೇಳಿದ್ದಾರೆ.
![swapna deekshit say all the best to harish raj](https://etvbharatimages.akamaized.net/etvbharat/prod-images/kn-bng-01-sapnadikshith-harishraj-photo-ka10018_23012020120404_2301f_1579761244_637.jpg)
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿರುವ ಸ್ವಪ್ನಾ, ನಾನು ಹರೀಶ್ ರಾಜ್ಗೆ ವೋಟ್ ಮಾಡುತ್ತೇನೆ. ಬಿಗ್ ಬಾಸ್ ನೋಡುವ ಎಲ್ಲರೂ ಹರೀಶ್ ರಾಜ್ಗೆ ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ.
- View this post on Instagram
Please vote for #harishraj he's playing very well he deserves to be in finale
">