ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ನ್ಯಾಯ ಸಿಗುವಂತೆ ದೇಶಾದ್ಯಂತ ಈಗಗಲೇ ಕೆಲವು ಪ್ರತಿಭಟನೆಗಳು ನಡೆದಿವೆ.
ಇದೀಗ ದೆಹಲಿಯ ಜಂತರ್ ಮಂತರ್ನಲ್ಲಿ ಸುಶಾಂತ್ ಸ್ನೇಹಿತ ಹಿಮಾರ್ಕರ್, ಸುಶಾಂತ್ ಮಾಜಿ ಮ್ಯಾನೇಜರ್ ಅಂಕಿತ್ ಆಚಾರ್ಯ ಸೇರಿದಂತೆ ಸುಶಾಂತ್ ಸಿಂಗ್ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ.
ಇವರು ಶುಕ್ರವಾರ ಉಪವಾಸ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸುಶಾಂತ್ ಸಾವಿಗೆ ಆದಷ್ಟು ಬೇಗ ನ್ಯಾಯ ಒದಗಿಸಿ ಎಂದು ಮನವಿ ಮಾಡಿದ್ದಾರೆ.