ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಸಿಬಿಐಗೆ ಲಭ್ಯವಾಗುತ್ತಿವೆ. ಇದೀಗ ರಿಯಾ, ಸುಶಾಂತ್ ಹಾಗೂ ಆರ್ಥಿಕ ಸಲಹೆಗಾರ ಮಾತನಾಡುತ್ತಿರುವ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಸುದೀರ್ಘ 35 ನಿಮಿಷಗಳ ಸಂಭಾಷಣೆಯನ್ನು ಒಳಗೊಂಡಿದೆ.
ಈ ಆಡಿಯೋದಲ್ಲಿ ಸುಶಾಂತ್ ಹಣಕಾಸಿನ ಎಲ್ಲಾ ವ್ಯವಹಾರ, ಬಣ್ಣದ ಬದುಕು ತ್ಯಜಿಸುವುದು, ಪರಿಸರಕ್ಕೆ ಹತ್ತಿರವಾಗಿ ಜೀವನ ನಡೆಸುವುದು ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ತಮ್ಮ ಹಣಕಾಸು ಮತ್ತು ಭವಿಷ್ಯದ ಸಂರಕ್ಷಣೆಗಾಗಿ "ಕೆಟ್ಟ ಸನ್ನಿವೇಶ"ದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿಎ, ವಕೀಲ ಮತ್ತು ಅವರ ಗೆಳತಿ ರಿಯಾ ಚಕ್ರವರ್ತಿಯೊಂದಿಗೆ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದಾರೆ. ಇನ್ನು ವೈರಲ್ ಆಡಿಯೊ ಟೇಪ್‌ನಲ್ಲಿ, ನಟ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕಾದರೆ ತನ್ನ ಮಾಸೆರೋಟಿ ಕಾರು ಮತ್ತು ಇತರ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವ ವಿಚಾರವೂ ಕೇಳಿ ಬಂದಿದೆ.
ಇನ್ನು ಸುಶಾಂತ್ ಮತ್ತು ರಿಯಾ, ಮಾನಸಿಕ ಆರೋಗ್ಯ ಸ್ಥಿತಿ, ನಿವೃತ್ತಿ ಯೋಜನೆ, ಅವರ ಕಾರನ್ನು ಮಾರಾಟ ಮಾಡುವ ವಿಚಾರ, ಪರಿಸರಕ್ಕೆ ತೀರಾ ಹತ್ತಿರವಾಗಿ ಬದುಕುವ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನು ಈ ಆಡಿಯೋ ಜನವರಿಯದ್ದು ಎಂದು ಹೇಳಲಾಗುತ್ತಿದೆ. ಸುಶಾಂತ್ ಅವರ ಧ್ವನಿ ಹೆಚ್ಚು ಕೇಳಿಸದಿದ್ದರೂ, ನಟ ತನ್ನ ನಿವೃತ್ತಿ ಯೋಜನೆಯನ್ನು ಚರ್ಚಿಸುತ್ತಿರುವುದನ್ನು ಕೇಳಬಹುದು.
ತಮ್ಮ ನಟನಾ ವೃತ್ತಿ ಜೀವನದ ಬಗ್ಗೆ ಮಾತನಾಡಿರುವ ಸುಶಾಂತ್, "ಇದು ಯಾವುದೇ ಆರ್ಥಿಕ ಲಾಭಕ್ಕಾಗಿ ಅಲ್ಲ, ಆದರೆ ಮಾನಸಿಕವಾಗಿ ಸ್ಥಿಮಿತ ಕಾಪಾಡಿಕೊಳ್ಳಲು. ನಾನು ಯಾರ ಸಮಯವನ್ನೂ ವ್ಯರ್ಥ ಮಾಡಲು ಇಷ್ಟ ಪಡುವುದಿಲ್ಲ. ಒಂದು ದಿನ ನನಗೆ ಏನಾದರು ಮಾಡಬೇಕು ಅನಿಸುತ್ತದೆ. ಅದನ್ನು ನಾನು ಮಾಡಲು ಇಚ್ಛಿಸುತ್ತೇನೆ " ಎಂದಿದ್ದಾರೆ.
ನಿಗದಿತ ಪ್ರಮಾಣದ ಆದಾಯವನ್ನು ಖಚಿತಪಡಿಸಿಕೊಳ್ಳಲು ಸುಶಾಂತ್ ತನ್ನ ಮಾಸೆರೋಟಿ ಕಾರನ್ನು ಮಾರಾಟ ಮಾಡುವ ಬಗ್ಗೆಯೂ ಮಾತನಾಡಿದ್ದಾರೆ. ಆದರೆ ಇದು ನಷ್ಟವನ್ನುಂಟು ಮಾಡುವ ನಿರ್ಧಾರವಾಗಿರುವುದರಿಂದ ಅದರ ಬಗ್ಗೆ ಯೋಚಿಸಬೇಡಿ ಎಂದು ಸಲಹೆಗಾರ ಹೇಳಿದ್ದಾನೆ.
ಇನ್ನು ರಜಪೂತ್ ಅವರವನ್ನು ಮಹಾರಾಷ್ಟ್ರದ ಪಪಾವನ ಸ್ಥಳಕ್ಕೆ ಕಳುಹಿಸಲು ರಿಯಾ ನಿರ್ಧರಿಸುತ್ತಾರೆ. ಆದರೆ ಅವರು "ಅಂತಹ ಕಠೋರ ಏಕಾಂತ ಸ್ಥಳಕ್ಕೆ ಹೋಗಲು ಮನಸ್ಸಿಲ್ಲ" ಎನ್ನುತ್ತಾರೆ.
ಇನ್ನು ಈಗಾಗಲೇ ರಿಯಾಳನ್ನು ಸಿಬಿಐ ವಿಚಾರಣೆ ನಡೆಸಿದ್ದು, ಸುಶಾಂತ್ಗೆ ನೀಡುತ್ತಿದ್ದ ಔಷಧಿ, ಮೆಸೇಜ್ಗಳಲ್ಲಿ ಪ್ರಸ್ತಾಪ ಮಾಡಿದ್ದ ಡ್ರಗ್ಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.