ETV Bharat / sitara

ಆಸ್ಕರ್ ಅಂಗಳಕ್ಕೆ ಕಾಲಿಟ್ಟ ಸೂರ್ಯ ಅಭಿನಯದ 'ಸೂರರೈ ಪೊಟ್ರು' - Sudha kongara direction movie

ಸೂರ್ಯ ಹಾಗೂ ಅಪರ್ಣಾ ಬಾಲಮುರಳಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಸೂರರೈ ಪೊಟ್ರು' ಸಿನಿಮಾ ಆಸ್ಕರ್​​​​​​​​​​​​​​​​​ಗೆ ಸ್ಪರ್ಧಿಸಿದೆ. ಈ ವಿಚಾರವನ್ನು 2 ಡಿ ಎಂಟರ್​​​​ಟೈನ್ಮೆಂಟ್​ ಸಿಇಒ ರಾಜಶೇಖರ್ ಪಾಂಡಿಯನ್ , ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.

Soorarai Pottru enter to Oscar
'ಸೂರರೈ ಪೊಟ್ರು'
author img

By

Published : Jan 28, 2021, 6:55 AM IST

Updated : Jan 28, 2021, 7:01 AM IST

ಕಳೆದ ವರ್ಷ ಒಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಸೂರ್ಯ ಅಭಿನಯದ 'ಸೂರರೈ ಪೊಟ್ರು' ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನಾಧಾರಿತ ಸಿನಿಮಾವನ್ನು ಮೆಚ್ಚಿದ ಅಭಿಮಾನಿಗಳು ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದರು. ಇದೀಗ ಈ ಸಿನಿಮಾ ಆಸ್ಕರ್​​​ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ.

2021 ರಲ್ಲಿ ನಡೆಯಲಿರುವ ಆಸ್ಕರ್ ಸ್ಪರ್ಧೆಯಲ್ಲಿ ಭಾಗವಹಿಸಲು ಈ ಸಿನಿಮಾ ಎಂಟ್ರಿ ನೀಡಿದ್ದು ಸೂರ್ಯ ಸ್ನೇಹಿತ, 2 ಡಿ ಎಂಟರ್​​​​ಟೈನ್ಮೆಂಟ್​ ಸಿಇಒ ರಾಜಶೇಖರ್ ಪಾಂಡಿಯನ್ ಈ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. "ಉತ್ತಮ ನಟ, ಉತ್ತಮ ನಟಿ, ಉತ್ತಮ ನಿರ್ದೇಶಕ, ಉತ್ತಮ ಸಂಗೀತ ನಿರ್ದೇಶನ ಹಾಗೂ ಇನ್ನಿತರ ವಿಭಾಗಗಳಲ್ಲಿ ನಮ್ಮ ಸಿನಿಮಾ ಸ್ಪರ್ಧಿಸುತ್ತಿದೆ. ಸೂರ್ಯ, ಅಪರ್ಣಾ ಬಾಲಮುರಳಿ, ಸುಧಾ ಕೊಂಗರ, ಜಿ.ವಿ ಪ್ರಕಾಶ್ ಕುಮಾರ್ ಈ ಸಿನಿಮಾದ ಆಧಾರಸ್ತಂಭಗಳು. ನಮ್ಮ ಸಿನಿಮಾ ವಿಶ್ವದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಬಹುದೆಂಬ ವಿಶ್ವಾಸವಿದೆ" ಎಂದು ರಾಜಶೇಖರ್ ಪಾಂಡಿಯನ್ ಹೇಳಿಕೊಂಡಿದ್ದಾರೆ.

Soorarai Pottru enter to Oscar
ಅಪರ್ಣಾ ಬಾಲಮುರಳಿ, ಸೂರ್ಯ

ಇದನ್ನೂ ಓದಿ: 'ಆಚಾರ್ಯ' ಟೀಸರ್​​ ಲೀಕ್​ ಮಾಡಲು ರೆಡಿಯಾಗಿದ್ರಂತೆ ಜಿರಂಜೀವಿ!

2 ಡಿ ಎಂಟರ್​​​​ಟೈನ್ಮೆಂಟ್​ , ಶಿಖ್ಯಾ ಎಂಟರ್​​​​ಟೈನ್ಮೆಂಟ್ ಬ್ಯಾನರ್ ಅಡಿ 'ಸೂರರೈ ಪೊಟ್ರು' ಚಿತ್ರವನ್ನು ಸೂರ್ಯ ಹಾಗೂ ಗುಣಿತ್ ಮೊಂಗಾ ನಿರ್ಮಿಸಿದ್ದಾರೆ. ಸುಧಾಕೊಂಗರ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಸೂರ್ಯ, ಅಪರ್ಣಾ ಬಾಲಮುರಳಿ ಜೊತೆಗೆ ಊರ್ವಶಿ, ಕಾಳಿ ವೆಂಕಟ್, ಪರೇಶ್​​ ರಾವಲ್ ಹಾಗೂ ಮೋಹನ್ ಬಾಬು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕೊರೊನಾ ಲಾಕ್​​​​ಡೌನ್​ ಕಾರಣ ಥಿಯೇಟರ್​​​​​ಗಳು ತೆರೆಯದಿದ್ದ ಕಾರಣ ಕಳೆದ ವರ್ಷ ನವೆಂಬರ್ 12 ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು.

Last Updated : Jan 28, 2021, 7:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.