ETV Bharat / sitara

ನಮ್ಮ ಹೆಮ್ಮೆಯ ಕನ್ನಡಿಗನ ಬಗ್ಗೆ ತಮಿಳಿನಲ್ಲಿ ಬರ್ತಿದೆ ಸಿನಿಮಾ! ಯಾರಾ ಕನ್ನಡ ಕುವರ? - ಸೂರರೈ ಪೊಟ್ರು

ತಮಿಳಿನಲ್ಲಿ ತಯಾರಾಗುತ್ತಿರುವ 'ಸೂರರೈ ಪೊಟ್ರು' ಚಿತ್ರ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗ್ತಿದೆ. ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಬೇಕೆನ್ನುವುದು ಕನ್ನಡಾಭಿಮಾನಿಗಳ ಆಸೆಯಾಗಿದ್ದು, ಅದೀಗ ನಿಜವಾಗಿದೆ. ಈ ಸಿನಿಮಾಕ್ಕೆ ‘ಇರುಧಿ ಸುಟ್ರು’ ಮಹಿಳಾ ನಿರ್ದೇಶಕಿ ಸುಧಾ ಕೊಂಗಾರ ನಿರ್ದೇಶನ ಮಾಡಿದ್ದಾರೆ.

suriya film based on life sketch of kannadiga captain gr gopinath
ನಮ್ಮ ಹೆಮ್ಮೆಯ ಕನ್ನಡಿಗನ ಬಗ್ಗೆ ತಮಿಳಿನಲ್ಲಿ ಬರ್ತಿದೆ ಸಿನಿಮಾ
author img

By

Published : Feb 15, 2020, 10:26 AM IST

ಹೆಮ್ಮೆಯ ಕನ್ನಡಿಗರೊಬ್ಬರ ಸಾಧನೆ ಆಧರಿಸಿ ತಮಿಳಿನಲ್ಲಿ ಸಿನಿಮಾ ಬರ್ತಿದೆ. ಆ ಚಿತ್ರವೇ 'ಸೂರರೈ ಪೊಟ್ರು'. ಕನ್ನಡದ ಹೆಮ್ಮೆಯ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನ ಸಿನಿಮಾವಾಗಿ ತೆರೆ ಮೇಲೆ ಬರುತ್ತಿದೆ. ಈ ಸಿನಿಮಾಕ್ಕೆ ತಮಿಳು ಸೂಪರ್​ಸ್ಟಾರ್​​ ಸೂರ್ಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

suriya film based on life sketch of kannadiga captain gr gopinath
ಸೂರ್ಯ

ತಮಿಳಿನಲ್ಲಿ ತಯಾರಾಗುತ್ತಿರುವ 'ಸೂರರೈ ಪೊಟ್ರು' ಚಿತ್ರ ಕನ್ನಡದಲ್ಲೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಬೇಕು ಎನ್ನುವುದು ಕನ್ನಡಾಭಿಮಾನಿಗಳ ಆಸೆಯಾಗಿದ್ದು, ಅದೀಗ ನಿಜವಾಗಿದೆ. ಈ ಸಿನಿಮಾಕ್ಕೆ ‘ಇರುಧಿ ಸುಟ್ರು’ ಮಹಿಳಾ ನಿರ್ದೇಶಕಿ ಸುಧ ಕೊಂಗಾರ ನಿರ್ದೇಶನ ಮಾಡಿದ್ದಾರೆ.

ಕ್ಯಾಪ್ಟನ್ ಜಿ.ಆರ್ ಗೋಪಿನಾಥ್

ಕ್ಯಾಪ್ಟರ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗಿದ್ದರು. ನಂತರ ಏರ್ ಡೆಕ್ಕರ್ ವಿಮಾನಯಾನ ಸಂಸ್ಥೆ ಸ್ಥಾಪಿಸುತ್ತಾರೆ. ಕಡಿಮೆ ಹಣದಲ್ಲಿ ವಿಮಾನಯಾನ ಪ್ರಾರಂಭಿಸುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

ಇನ್ನು ಕುತೂಹಲ ಮೂಡಿಸಿರುವ 'ಸೂರರೈ ಪೊಟ್ರು' ಸಿನಿಮಾ ಇದೇ ತಿಂಗಳು 21ರಂದು ತೆರೆಗೆ ಬರುತ್ತಿದೆ. ಚಿತ್ರದಲ್ಲಿ ಸೂಪರ್ ಸ್ಟಾರ್ ಸೂರ್ಯ ಜೊತೆ ಅಪರ್ಣ ಬಾಲಮುರಳಿ, ಮೋಹನ್ ಬಾಬು, ಪರೇಶ್ ರಾವಲ್, ಊರ್ವಶಿ, ಕರುಣಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.