ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಹೆಸರು ಮಾಡಿರುವ ಸುರಭಿ ಕುಲಕರ್ಣಿ ಕನ್ನಡಕ್ಕೂ ಕಾಲಿಡುತ್ತಿದ್ದಾರೆ. ಅದೂ ಕೂಡಾ ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಕಾಂಬಿನೇಷನ್ ಸಿನಿಮಾ ಮೂಲಕ. ಈ ಜೋಡಿ 2018 ರಲ್ಲಿ ತೆರೆ ಕಂಡ ಹಿಟ್ ಸಿನಿಮಾ 'ಚಮಕ್' ನಲ್ಲಿ ಮೊದಲ ಬಾರಿಗೆ ಕೆಲಸ ಮಾಡಿತ್ತು.
ಸುರಭಿ ಕುಲಕರ್ಣಿ ಮೂಲತ: ದೆಹಲಿ ನಿವಾಸಿ. 2013 ರಲ್ಲಿ ಆ್ಯಕ್ಟಿಂಗ್ ಕರಿಯರ್ ಆರಂಭಿಸಿದ ಈ ಚೆಲುವೆ ಇದೀಗ ಗಣೇಶ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ತಮ್ಮ ಮೊದಲ ಕನ್ನಡ ಸಿನಿಮಾದಲ್ಲಿ ಸುರಭಿ ನಿರೂಪಕಿ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಕೋರ್ಟ್ ಮತ್ತು ರಿಯಾಲಿಟಿ ಶೋ ಸುತ್ತ ನಡೆಯುವ ಕಥೆ ಎನ್ನಲಾಗಿದೆ. ಸಿಂಪಲ್ ಸುನಿ ಸದ್ಯಕ್ಕೆ ಶರಣ್ ಅಭಿನಯದ ‘ಅವತಾರ ಪುರುಷ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದೇ ತಿಂಗಳ 24 ರಂದು ಗಣೇಶ್ ಹಾಗೂ ಸುರಭಿ ಅಭಿನಯದ ಹೊಸ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಈ ಚಿತ್ರಕ್ಕೆ 'ಭರಾಟೆ' ಚಿತ್ರದ ನಿರ್ಮಾಪಕ ಸುಪ್ರೀತ್ ಹಣ ಹೂಡುತ್ತಿದ್ದಾರೆ. ಗಣೇಶ್ಗೆ ಈ ಸಿನಿಮಾವಾದ್ರೂ ಬ್ರೇಕ್ ನೀಡುತ್ತಾ ಕಾದು ನೋಡಬೇಕು.