ETV Bharat / sitara

ಲಾಕ್ ​​ಡೌನ್ ಸಮಯದಲ್ಲಿ ಹೊಸ ಚಿತ್ರಕ್ಕೆ ಪಂಚಿಂಗ್ ಡೈಲಾಗ್​​​​​​​​​​​​​ ಬರೆದ ಸೂಪರ್ ಸ್ಟಾರ್​​​ - Rajinikanth 168 movie Annaatthe

ರಜನಿಕಾಂತ್ ಅಭಿನಯದ ಹೊಸ ಚಿತ್ರ 'ಅಣ್ಣಾತೆ' ಸಿನಿಮಾ ಕೊರೊನಾ ಸಮಸ್ಯೆಯಿಂದ ಶೂಟಿಂಗ್ ಸ್ಥಗಿತಗೊಳಿಸಿದೆ. ಈ ಸಮಯದಲ್ಲಿ ರಜನಿಕಾಂತ್ ಸುಮ್ಮನೆ ಕೂರದೆ ಚಿತ್ರಕ್ಕೆ ಕೆಲವೊಂದು ಪಂಚಿಂಗ್ ಡೈಲಾಗ್​​ಗಳನ್ನು ಬರೆದಿದ್ದಾರೆ. ನಿರ್ದೇಶಕ ಶಿವ ಕೂಡಾ ಈ ಡೈಲಾಗ್​​ಗಳನ್ನು ಮೆಚ್ಚಿ ಚಿತ್ರದಲ್ಲಿ ಅಳವಡಿಸಿಕೊಳ್ಳಲು ಒಪ್ಪಿದ್ದಾರೆ.

Super star wrote punching dialogues
ಅಣ್ಣಾತೆ ಚಿತ್ರಕ್ಕೆ ಡೈಲಾಗ್ ಬರೆದ ರಜನಿಕಾಂತ್
author img

By

Published : Sep 25, 2020, 10:21 AM IST

ಸೂಪರ್ ಸ್ಟಾರ್ ರಜನಿಕಾಂತ್​​​​​​​ ಅವರಿಗೆ ತಮಿಳುನಾಡು ಮಾತ್ರವಲ್ಲ, ದೇಶ-ವಿದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ತಮ್ಮ ಆ್ಯಕ್ಟಿಂಗ್ ಹೊರತುಪಡಿಸಿ ಸರಳ ವ್ಯಕ್ತಿತ್ವದಿಂದಲೂ ಅವರು ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದೀಗ ಅವರು ತಮ್ಮ ಚಿತ್ರದ ನಿರ್ದೇಶಕರು ಮೆಚ್ಚುವ ಮತ್ತೊಂದು ಕೆಲಸ ಮಾಡಿದ್ದಾರೆ. ಅದು ಏನಂತೀರಾ..?

ತಮ್ಮ ಹೊಸ ಸಿನಿಮಾಗೆ ರಜನಿಕಾಂತ್ ತಾವೇ ಸ್ವಲ್ಪ ಭಾಗ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ಹೊಸ ಚಿತ್ರ 'ಅಣ್ಣಾತೆ' ಕೊರೊನಾ ಸಮಸ್ಯೆ ಇಲ್ಲದಿದ್ದರೆ ಏಪ್ರಿಲ್​​ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್​​​​ಡೌನ್​​​​​​​​​​​​​​​​​​​​​​ನಿಂದ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ. ಲಾಕ್​ ಡೌನ್ ಸಮಯದಲ್ಲಿ ರಜನಿಕಾಂತ್​ ಕೆಲವೊಂದು ಪಂಚಿಂಗ್ ಡೈಲಾಗ್​​​​ಗಳನ್ನು ಬರೆದು ಇದನ್ನು ಬಳಸಬಹುದಾ ಎಂದು ನಿರ್ದೇಶಕ ಶಿವ ಬಳಿ ಕೇಳಿದ್ದಾರೆ. ಶಿವ ಕೂಡಾ ಅದನ್ನು ನೋಡಿ ಈ ಸಂಭಾಷಣೆ ಪರ್ಫೆಕ್ಟ್ ಅಗಿದೆ ಇದನ್ನು ಚಿತ್ರದಲ್ಲಿ ಬಳಸಿಕೊಳ್ಳೋಣ ಎಂದು ಹೇಳಿದ್ದಾರೆ. ಇದಕ್ಕೆ ರಜನಿಕಾಂತ್ ಕೂಡಾ ಖುಷಿ ಆಗಿದ್ದಾರೆ.

'ಅಣ್ಣಾತೆ' ಚಿತ್ರೀಕರಣ ಬಹಳಷ್ಟು ಬಾಕಿ ಇದೆ. ಸದ್ಯಕ್ಕೆ ಇನ್ನೂ ಕೊರೊನಾ ಸಮಸ್ಯೆ ಕಡಿಮೆಯಾಗದ ಕಾರಣ ನಿಧಾನವಾಗಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಕೂಡಾ ಚಿತ್ರೀಕರಣ ಮಾಡಲು ಯಾವ ಸಮಯ ಸೂಕ್ತ ಎನಿಸುವುದೋ ಆಗಲೇ ಆರಂಭಿಸಿ ಎಂದು ರಜನಿಕಾಂತ್ ಹಾಗೂ ತಂಡಕ್ಕೆ ಹೇಳಿದೆ ಎನ್ನಲಾಗಿದೆ.

'ಅಣ್ಣಾತೆ' ಚಿತ್ರಕ್ಕೆ ವೇಟ್ರಿ ಛಾಯಾಗ್ರಹಣ, ಡಿ ಇಮಾನ್ ಸಂಗೀತ ಒದಗಿಸುತ್ತಿದ್ದಾರೆ. ರಜನಿಕಾಂತ್ ಜೊತೆ ಮೊದಲ ಬಾರಿಗೆ 'ಮಹಾ ನಟಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಇವರೊಂದಿಗೆ ನಯನತಾರಾ, ಸೂರಿ, ಖುಷ್ಬು, ಮೀನ, ಪ್ರಕಾಶ್ ರಾಜ್, ಜಾಕಿ ಶ್ರಾಫ್ ಹಾಗೂ ಇತರರು ನಟಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.