ETV Bharat / sitara

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯಾದ ಸುನೀಲ್ ಪುರಾಣಿಕ್

author img

By

Published : Jan 2, 2020, 4:54 PM IST

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ, ನಿರ್ದೇಶಕ ಸುನೀಲ್ ಪುರಾಣಿಕ್​​ ಅವರನ್ನು  ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

Sunil Appoints Karnataka Film Academy chairman
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯಾದ ಸುನೀಲ್ ಪುರಾಣಿಕ್

ಕನ್ನಡ ಚಿತ್ರರಂಗಕ್ಕೆ ಅತೀ ಮುಖ್ಯವಾಗಿ ಇರುವ ಅಕಾಡೆಮಿ ಅಂದ್ರೆ ಅದು ಕರ್ನಾಟಕ ಚಲನಚಿತ್ರ ಅಕಾಡೆಮಿ. ಕೆಲ ತಿಂಗಳ ಹಿಂದೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿದ್ರು. ಇವರು ಅಧ್ಯಕ್ಷಸ್ಥಾನದಿಂದ ತೆರೆವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ, ನಿರ್ದೇಶಕ ಸುನೀಲ್ ಪುರಾಣಿಕ್​​ ಅವರನ್ನು ಅಧ್ಯಕ್ಷರಾಗಿ ನೇಮಿಸಿದೆ.

ಅಧಿಕಾರ ಸ್ವೀಕರಿಸಿದ ಮೇಲೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಕೊಠಡಿಯಲ್ಲಿ ಹೋಮ ಪೂಜೆ ಮಾಡಲಾಯಿತು. ಪುರೋಹಿತರ ಸೂಚನೆ ಮೇರೆಗೆ ಸುನೀಲ್ ಪುರಾಣಿಕ್ ಕುಟುಂಬ ಸಮೇತ ಅಧ್ಯಕ್ಷ ಸ್ಥಾನಕ್ಕೆ ಪೂಜೆ ಸಲ್ಲಿಸಿ, ತಾವು ಕುಳಿತುಕೊಳ್ಳವ ಸೀಟಿಗೆ ಹೂವಿನ ಕಂಕಣ ಕಟ್ಟಿ ಪೂಜೆ ಮಾಡಿದ್ರು. ನಂತರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಹಿ ಹಾಕಿದ್ರು.

ನೂತನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಿಗೆ, ನಿರ್ದೇಶಕ ದಯಾಳ್ ಪದ್ಮಾನಾಭನ್, ನಾಗಣ್ಣ, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ನಿರ್ದೇಶಕ ಸಂಘದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಶುಭಾಶಯ ಹೇಳಿದರು.

ಇನ್ನು ಸುನೀಲ್ ಪುರಾಣಿಕ್ 50ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೂ ಕೆಲವು ಸಿನಿಮಾಗಳಲ್ಲಿಯೂ ಸುನೀಲ್ ಪುರಾಣಿಕ್ ನಟಿಸಿದ್ದಾರೆ.

Intro:Body:ಸುನೀಲ್ ಪುರಾಣಿಕ್ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿ!!

ಕನ್ನಡ ಚಿತ್ರರಂಗಕ್ಕೆ ಅತೀ ಮುಖ್ಯ ಅಕಾಡೆಮಿ ಅಂದ್ರೆ ಅದು ಕರ್ನಾಟಕ ಚಲನಚಿತ್ರ ಅಕಾಡೆಮಿ..ಕೆಲ ತಿಂಗಳ ಹಿಂದೆ ಅಧ್ಯಕ್ಷರಾಗಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿದ್ರು..ಇವರು ತೆರೆವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ ನಿರ್ದೇಶಕ ಸುನೀಲ್ ಪುರಾಣಿಕ್, ನಂದಿನೆ ಲೇಔಟ್ ನಲ್ಲಿರುವ ಕಛೇರಿಯಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುಂಚೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಕೊಠಡಿಯಲ್ಲಿ ಹೋಮ ಪೂಜೆ ಮಾಡಲಾಯಿತ್ತು..ಪುರೋಹಿತರ ಸೂಚನೆ ಮೇರಗೆ ಸುನೀಲ್ ಪುರಾಣಿಕ್ ಫ್ಯಾಮಿಲಿ ಸಮೇತ ಅಧ್ಯಕ್ಷ ಸ್ಥಾನಕ್ಕೆ ಪೂಜೆ ಸಲ್ಲಿಸುವ ಮೂಲಕ ತಾವು ಕುಳಿತು ಕೊಳ್ಳಲು ಸೀಟಿಗೆ ಹೂವಿನ ಕಂಕಣ ಕಟ್ಟುವ ಪೂಜೆ ಮಾಡಿದ್ರು..ನಂತರ ಸರ್ಕಾರದ ವತಿಯ ರಿಜಿಸ್ಟರ್ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಹಿ ಹಾಕಿದ್ರು..ಈ ನೂತನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಿಗೆ, ನಿರ್ದೇಶಕ ದಯಾಳ್ ಪದ್ಮಾನಾಭನ್, ನಾಗಣ್ಣ, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್,ಹಾಗು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಮತ್ತು ನಿರ್ದೇಶಕ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಹಾಗು ನಿರ್ದೇಶಕರು ಮತ್ತು ಮಾಜಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಕನ್ನಡ ಚಿತ್ರರಂಗದ ಸ್ನೇಹಿತರು ನೂತನ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಿಗೆ ಶುಭಾಶಯ ಹೇಳಿದರು.ಇನ್ನು ಸುನೀಲ್ ಪುರಾಣಿಕ್,50ಕ್ಕೂ ಹೆಚ್ಚು ಧಾರಾವಾಹಿಗಳಿಗೆ ನಿರ್ದೇಶನ ಮಾಡಿರುವ ಹೆಚ್ಚುಗಾರಿಕೆ ಸುನೀಲ್ ಅವರದ್ದು. ಅವುಗಳಲ್ಲಿ ವಾರದ ಮತ್ತು ದೈನಂದಿನ ಧಾರಾವಾಹಿಗಳೂ ಸೇರಿವೆ. ಸಿನಿಮಾಗಳಲ್ಲಿಯೂ ಸುನೀಲ್ ಪುರಾಣಿಕ್ ನಟಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.