ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೊದಲ ಪುತ್ರಿ ಐರಾಗೆ ಇದೀಗ 11 ತಿಂಗಳು. ಕಳೆದ ತಿಂಗಳು ಯಶ್ ದಂಪತಿ ತಮ್ಮ ಪುತ್ರಿಯನ್ನು ಅಂಬಿ ಮನೆಗೆ ಕರೆದೊಯ್ದಿದ್ದರು.
ರಾಧಿಕಾ ಪಂಡಿತ್ ಗರ್ಭಿಣಿಯಾಗಿದ್ದಾಗ ರೆಬಲ್ ಸ್ಟಾರ್ ಅಂಬರೀಶ್, ಐರಾಗಾಗಿ ತೊಟ್ಟಿಲೊಂದನ್ನು ಆರ್ಡರ್ ಮಾಡಿದ್ದರು. ಆದರೆ ಯಶ್ ಮಗುವನ್ನು ನೋಡುವ ಮುನ್ನವೇ ಅವರು ನಮ್ಮೆಲ್ಲರನ್ನು ಅಗಲಿದ್ದರು. ಇನ್ನು ಮಗು ಹುಟ್ಟಿದಾಗಿನಿಂದ ಸುಮಲತಾ ಮಗುವನ್ನು ನೋಡಿರಲಿಲ್ಲ. ಆದರೆ ಕಳೆದ ತಿಂಗಳು ಐರಾಳನ್ನು ತಮ್ಮ ಮನೆಯಲ್ಲೇ ಸುಮಲತಾ ನೋಡಿದ್ದು ಅವಳೊಂದಿಗೆ ಸುಮಾರು 3 ಗಂಟೆಗಳ ಕಾಲ ಸಮಯ ಕಳೆದಿದ್ದರು.
ಈ ಬಗ್ಗೆ ಅಂಬರೀಶ್ 11ನೇ ತಿಂಗಳ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದ ಸುಮಲತಾ ಅಂಬರೀಶ್, 'ಐರಾಳನ್ನು ನೋಡಿದ್ದು ಬಹಳ ಖುಷಿಯಾಯ್ತು. ಅವಳು ನೋಡಲು ಗೊಂಬೆಯಂತೇ ಇದ್ದಾಳೆ. ತುಂಬಾ ದಿನದಿಂದ ಯಶ್ ಆಕೆಯನ್ನು ನನಗೆ ತೋರಿಸಿರಲಿಲ್ಲ. ಒಂದು ದಿನ ನಾನೇ ಫೋನ್ ಮಾಡಿ ಸ್ಕೂಲ್ಗೆ ಹೋಗುವ ಸಮಯದಲ್ಲಿ ಅವಳನ್ನು ನನಗೆ ತೋರಿಸ್ತಿಯಾ ಅಂತ ಬೈದಿದ್ದೆ. ಆದ ಕಾರಣ ವಿಜಯ ದಶಮಿಯಂದು ಯಶ್, ರಾಧಿಕಾ ದಂಪತಿ ಮಗಳನ್ನು ನಮ್ಮ ಮನೆಗೆ ಕರೆತಂದರು ಎಂದು ಸುಮಲತಾ ಸಂತೋಷ ವ್ಯಕ್ತಪಡಿಸಿದರು.