ಕನ್ನಡದ ಜನಪ್ರಿಯ ನಟಿ ಸುಕೃತಾ ವಾಗ್ಳೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ‘ಜಟ್ಟ’ ಸಿನಿಮಾದಲ್ಲಿ ಬೋಲ್ಡ್ ಆಗಿ ಬೆರಗಾಗಿಸಿದ, ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿ, ಪಕ್ಕದ ತೆಲುಗು ಚಿತ್ರ ರಂಗಕ್ಕೂ ಹೋಗಿ ಬಂದ ಸುಕೃತಾ ಟ್ವಿಟ್ಟರ್ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ತಮ್ಮ ತಲೆ ಕೂದಲನ್ನು ಕತ್ತರಿಸಿಕೊಂಡು ಅದನ್ನು ಕಾನ್ಸರ್ ರೋಗಿಗಳಿಗೆ ಅರ್ಪಣೆ ಮಾಡಿದ್ದಾರೆ.
-
I love my long hair but I chose to go bald and donate my hair to a cancer patient. #covidquarantine pic.twitter.com/d2ORmdkTJH
— SUKRUTHA WAGLE (@WAGLESUKRUTHA) March 30, 2020 " class="align-text-top noRightClick twitterSection" data="
">I love my long hair but I chose to go bald and donate my hair to a cancer patient. #covidquarantine pic.twitter.com/d2ORmdkTJH
— SUKRUTHA WAGLE (@WAGLESUKRUTHA) March 30, 2020I love my long hair but I chose to go bald and donate my hair to a cancer patient. #covidquarantine pic.twitter.com/d2ORmdkTJH
— SUKRUTHA WAGLE (@WAGLESUKRUTHA) March 30, 2020
ಒಬ್ಬ ನಟಿ ಸಿನಿಮಾಕ್ಕೆ ತಲೆ ಬೋಳಿಸಿಕೊಳ್ಳುವುದೇ ಕಷ್ಟ. ಆದರೆ ಈ ನಾಯಕಿ ನಿಜ ಜೀವನದಲ್ಲಿ ತಾವೇ ತಮ್ಮ ಕೂದಲನ್ನು ಕಟ್ ಮಾಡಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ.
ಇತ್ತೀಚಿಗೆ ಕನ್ನಡ ಸಿನಿಮಾ ‘ಮುಂದಿನ ನಿಲ್ದಾಣ’ದಲ್ಲಿ ರಾಧಿಕ ನಾರಾಯಣ್, ‘ಲವ್ ಮಾಖ್ಟೈಲ್’ನಲ್ಲಿ ಮಿಲನ ನಾಗರಾಜ್, ‘ಗಿಫ್ಟ್ ಬಾಕ್ಸ್’ ಸಿನಿಮಾದಲ್ಲಿ ದೀಪ್ತಿ ಮೋಹನ್ ಸಹ ಸಿನಿಮಕ್ಕಾಗಿ ತಲೆಯನ್ನು ನುಣ್ಣಗೆ ಬೋಳಿಸಿಕೊಡವರತೆ ಕಂಡರೂ, ಅಸಲಿಗೆ ಅದು ಬೋಳು ತಲೆ ಕಾಣುವ ಹಾಗೆ ಹಾಕಿದ್ದ ವಿಗ್ ಆಗಿತ್ತು.
ಸುಕೃತ ವಾಗ್ಳೆ 21 ದಿನ ‘ಲಾಕ್ ಡೌನ್’ ಸಮಯದಲ್ಲಿ ನಿನ್ನೆ ಈ ಕೆಲಸ ಮಾಡಿ ಕಾನ್ಸರ್ ರೋಗಿಗಳಿಗೆ ತಮ್ಮ ಉದ್ದದ ತಲೆ ಕೂದಲನ್ನು ಅರ್ಪಿಸಿದ್ದಾರೆ.
2013 ರಲ್ಲಿ ಬಿ ಎಂ ಗಿರಿರಾಜ್ ನಿರ್ದೇಶನದ ‘ಜಟ್ಟಾ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಸುಕೃತ ವಾಗ್ಳೆ, ಬಹುಪರಾಕ್, ಕಿರಗೂರಿನ ಗಯ್ಯಾಳಿಗಳು, ದಯವಿಟ್ಟು ಗಮನಿಸಿ, ಮೇಘ ಅಲಿಯಾಸ್ ಮ್ಯಾಗಿ ಹಾಗೂ ಒಂದು ತೆಲುಗು ಸಿನಿಮಾ ‘ರಾಮ ಚಿಕ್ಕಾನಿ ಸೀತಾ’ದಲ್ಲಿ ಅಭಿನಯಿಸಿದ್ದಾರೆ. ಕಿರು ಚಿತ್ರಗಳು, ರಿಯಲಿ ಶೋಗಳಲ್ಲಿ ಸಹ ಇವರು ಕಾಣಿಸಿಕೊಂಡಿದ್ದಾರೆ.