ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ಸುಜೈ, ಈ ಪಾತ್ರದಿಂದ ನಿಜ ಜೀವನದಲ್ಲೂ ಕಷ್ಟ ಪಟ್ಟಿದ್ದಾರಂತೆ. ಕಣ್ಣಿನ ಕಪ್ಪು ಗುಡ್ಡೆಗಳನ್ನು ಪಕ್ಕಕ್ಕೆ ಸರಿಸಿ ಅಭಿನಯ ಮಾಡಬೇಕಿತ್ತಂತೆ. ಈ ಸಂದರ್ಭದಲ್ಲಿ ಸುಜೈಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.
ನನ್ನ ಪ್ರೀತಿಯ ರಾಮು ಸಿನಿಮಾ ಮಾಡುವಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸಿದ್ದರಂತೆ. ಆ ಸಿನಿಮಾದಲ್ಲಿ ದರ್ಶನ ತನ್ನ ಕಣ್ಣುಗಳ ಕಪ್ಪು ಭಾಗವನ್ನು ಮೇಲಕ್ಕೆ ಮಾಡಿಕೊಂಡು ಅಭಿನಯಿಸಿದ್ದರು. ಈ ಸಮಯದಲ್ಲಿ ದರ್ಶನ್ಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.
ಈ ರೀತಿಯ ನಟನೆಯಿಂದ ಸುಜೈಗೆ ಕಣ್ಣಿನ ಸಮಸ್ಯೆ ಕಂಡುಬಂದಿದ್ದು, ಕೆಲವು ಬಾರಿ ಕಾರು ಚಲಾಯಿಸುವಾಗಲೂ ಸಮಸ್ಯೆ ಕಾಡಿತ್ತಂತೆ. ಆನಂತರ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಅದಕ್ಕೆ ಬೇಕಾದ ಔಷಧಿ ಪಡೆದು ಕೆಲವು ದಿವಸಗಳ ನಂತರ ಮಾಮೂಲು ಸ್ಥಿತಿಗೆ ಬಂದರಂತೆ.