ETV Bharat / sitara

ಗಣೇಶನ ಹಬ್ಬಕ್ಕೆ ‘ಶುಗರ್​​ ಫ್ಯಾಕ್ಟರಿ’ಯಿಂದ ಲಿರಿಕಲ್ ಹಾಡು - Singer Baba Sehegal

ಡಾರ್ಲಿಂಗ್ ಕೃಷ್ಣ ಶುಗರ್​​ ಫ್ಯಾಕ್ಟರಿ ಚಿತ್ರ ಕುತೂಹಲ ಹೆಚ್ಚಿಸುತ್ತಲಿದೆ. ಇತ್ತೀಚಿಗೆ ಟೀಸರ್​ ಬಿಡುಗಡೆ ಮಾಡಿದ್ದ ಚಿತ್ರತಂಡ ಅಭಿಮಾನಿಗಳಿಗೆ ಸರ್​​​ಪ್ರೈಸ್​ ನೀಡಿತ್ತು. ಇದೀಗ ಗಣೇಶನ ಹಬ್ಬಕ್ಕೆ ಹಾಡೊಂದನ್ನ ರಿಲೀಸ್ ಮಾಡುವ ಪ್ಲಾನಿಂಗ್ ಹಾಕಿಕೊಂಡಿದೆ.

Darling krishna
ಡಾರ್ಲಿಂಗ್ ಕೃಷ್ಣ
author img

By

Published : Sep 1, 2021, 1:12 PM IST

ಶುಗರ್​​ ಫ್ಯಾಕ್ಟರಿ ಟೀಸರ್ ಹಾಗೂ ಪೋಸ್ಟರ್​​​ನಿಂದಲೇ, ಸ್ಯಾಂಡಲ್​​​ವುಡ್​​ನಲ್ಲಿ ಸದ್ದು ಮಾಡುತ್ತಿರೋ ಚಿತ್ರ. ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಇಂಡಿಯನ್ ರ‍್ಯಾಪರ್ ಹಾಗೂ ಸಿಂಗರ್ ಬಾಬಾ ಸೆಹಗಲ್ ಹಾಡೊಂದನ್ನ ಹಾಡಿದ್ದಾರೆ.

ಸದ್ಯ ಈ ಹಾಡು ಸೆಪ್ಟೆಂಬರ್ 10ರ ಗಣೇಶ ಚತುರ್ಥಿಯಂದು ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ ಜೊತೆಗೆ ಮೂರು ಜನ ನಾಯಕಿಯರಾದ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ ರೊಮ್ಯಾನ್ಸ್ ಮಾಡಲಿದ್ದಾರೆ.

ರೊಮ್ಯಾಂಟಿಕ್ ಹಾಡು ಇದಾಗಿದ್ದು, ಈ ಹಾಡಿನಲ್ಲಿ, ಡಾರ್ಲಿಂಗ್ ಕೃಷ್ಣ ಜೊತೆ ಸೋನಾಲ್ ಮಾಂಟೆರೊ ಸಖತ್ ಸ್ಟೆಪ್ಸ್​​ ಹಾಕಿದ್ದಾರೆ. ಹಾಡಿಗೆ ಗೋವಾದಲ್ಲಿ ಡ್ಯಾನ್ಸ್ ಚಿತ್ರೀಕರಣ ಮಾಡಲಾಗಿದೆ. ಬಹದ್ದೂರ್ ಚೇತನ್ ಅವರು ಬರೆದಿರುವ ಈ ಗೀತೆಗೆ ಖ್ಯಾತ ಗಾಯಕ ಬಾಬಾ ಸೆಹಗಲ್ ಧ್ವನಿಯಾಗಿದ್ದಾರೆ. ಕಫಿರ್ ರಫಿ ಸಂಗೀತ ನೀಡಿದ್ದಾರೆ.

Singer Baba Sehegal
ಸಿಂಗರ್ ಬಾಬಾ ಸೆಹಗಲ್

ಗೋವಾದ ಬ್ಯೂಟಿಫುಲ್ ಲೋಕೇಶನ್​​​ಗಲ್ಲಿ 24 ದಿನಗಳ ಕಾಲ ಅದ್ಧೂರಿಯಾಗಿ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಮಾತಿನ‌‌ ಭಾಗದ ಚಿತ್ರೀಕರಣವನ್ನ ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಚಿತ್ರೀಕರಿಸಿದ್ದಾರೆ‌.

ಇದರ ಜೊತೆಗೆ ರಂಗಾಯಣ ರಘು, ಲವ್ ಮಾಕ್ಟೆಲ್ ಅಭಿ ಮುಂತಾದವರು ಈ ಭಾಗದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ದೀಪಕ್ ಅರಸ್ ನಿರ್ದೇಶಿಸುತ್ತಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.