ಸ್ಯಾಂಡಲ್ ವುಡ್ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಕುರಿತು ಭಾವನಾತ್ಮಕ ಕವನವೊಂದನ್ನ ಬರೆದಿದ್ದಾರೆ. ಸಾನ್ವಿಗೆ ಜನ್ಮದಿನವಾದ್ದರಿಂದ ಈ ಸುಂದರ ಕವಿತೆ ಬರೆದಿದ್ದಾರೆ.
ಮೊನ್ನೆ ಇದ್ದ ಹಾಗಿದೆ
ಹೇಗಪ್ಪಾ ನಂಬೋದು
ನನ್ನ ಮಗಳೀಗ
ಹದಿನಾರು ವರುಷ
ನೀ ಇಟ್ಟ ಅಂಬೆಗಾಲ
ಮುದ್ದಾದ ಮೊದಲುಗಳು
ಕೂಡಿಟ್ಟಿರುವೆ ನಾ
ಒಂದೊಂದು ನಿಮಿಷ
ಎದೆಯೆತ್ತರ ಬೆಳೆದಿರೋ
ಕನಸು ನೀನುನಿನ್ನಿಂದಲೇ ಕಲಿಯುವ
ಕೂಸು ನಾನು ಆಸೆಬುರುಕ ಅಪ್ಪ ನಾನು
ಮತ್ತೆ ಮಗುವಾಗು ನೀನು
ಹೀಗೆ ಮಗಳ ಹುಟ್ಟುಹಬ್ಬದ ಅಂಗವಾಗಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ ಮಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದು, ಸುದೀಪ್, ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಇರುವ ಫೋಟೋವನ್ನು ಕಾಮನ್ ಡಿಪಿ ಆಗಿ ಬಳಸಿ ಶುಭಕೋರುತ್ತಿದ್ದಾರೆ.
2001 ಅಕ್ಟೋಬರ್ 18ರಂದು ಸುದೀಪ್ ಪ್ರಿಯಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮದುವೆಯಾದ ಮೂರು ವರ್ಷದ ಈ ಮಗು ಜನನವಾಗಿತ್ತು. ಅಂದರೆ, 2004 ಮೇ 20ರಂದು ಸಾನ್ವಿ ಜನಿಸಿದ್ದಳು.