ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಅಭಿನಯಿಸುವ ಮೂಲಕ ಸೌಥ್ ಸೂಪರ್ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ಅವರು ಜುಲೈ 31ಕ್ಕೆ ಬಣ್ಣದ ಲೋಕದಲ್ಲಿ ಪಾದಾರ್ಪಣೆ ಮಾಡಿ 25 ವರ್ಷ ಪೂರೈಸಿದರು. ಕಿಚ್ಚ, ಅಭಿನಯ ಚಕ್ರವರ್ತಿ, ಹುಚ್ಚ, ಆ್ಯಂಗ್ರಿ ಯಂಗ್ ಮ್ಯಾನ್.. ಹೀಗೆ ಹಲವು ಬಿರುದು ಹೊಂದಿರುವ ಸುದೀಪ್ಗೆ ಕಿಚ್ಚ ಎಂಬುದು ತನ್ನ ಹೆಸರಿನ ದೊಡ್ಡ ಬ್ರಾಂಡ್ ಪರಿಣಮಿಸಿದೆ.
ಕಿಚ್ಚ ಎಂಬ ಬಿರುದು ಬಂದಿದ್ದು 2002ರಲ್ಲಿ ತೆರೆಕಂಡ ಕಿಚ್ಚ ಸಿನಿಮಾ ಮೂಲಕ. ಅಲ್ಲಿಂದ ಸುದೀಪ್ ಹೆಸರಿನ ಮುಂದೆ ಕಿಚ್ಚ ಸೇರಿಕೊಂಡಿತ್ತು. ಅದು ಸುದೀಪ್ ಅಲ್ಲದೆ, ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿದೆ.
ಸುದೀಪ್ ಫೋಟೋವೊಂದನ್ನು ಎಡಿಟ್ ಮಾಡಿ, ಅದರಲ್ಲಿ ಕಿಚ್ಚ ಫಾರೆವರ್ ಎಂದು ಬರೆದಿರುವ ಅಭಿಮಾನಿಯೊಬ್ಬ ಫೋಟೋವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿ ಸುದೀಪ್ಗೆ ಟ್ಯಾಗ್ ಮಾಡಿದ್ದಾರೆ. ಈ ಟ್ಟೀಟ್ ನೋಡಿ ಸಂತಸ ವ್ಯಕ್ತಪಡಿಸಿರುವ ಸುದೀಪ್, ಅದಕ್ಕೆ ಪ್ರತಿಕ್ರಿಯಿಸಿ ತಮ್ಮ ಪದಗಳಲ್ಲಿ ವರ್ಣಿಸಿದ್ದಾರೆ.
-
Yes...This name is my identity ,,tat you all have gifted me,,and I shall carry it forever. All you frnzz loved me as kichcha then,,, and I shall luv you all as kichcha FOREVER.
— Kichcha Sudeepa (@KicchaSudeep) August 1, 2020 " class="align-text-top noRightClick twitterSection" data="
Special thanks to the one who designed and sent this to me.
🤗🤗 much luv. https://t.co/7g8Ge8tQAd
">Yes...This name is my identity ,,tat you all have gifted me,,and I shall carry it forever. All you frnzz loved me as kichcha then,,, and I shall luv you all as kichcha FOREVER.
— Kichcha Sudeepa (@KicchaSudeep) August 1, 2020
Special thanks to the one who designed and sent this to me.
🤗🤗 much luv. https://t.co/7g8Ge8tQAdYes...This name is my identity ,,tat you all have gifted me,,and I shall carry it forever. All you frnzz loved me as kichcha then,,, and I shall luv you all as kichcha FOREVER.
— Kichcha Sudeepa (@KicchaSudeep) August 1, 2020
Special thanks to the one who designed and sent this to me.
🤗🤗 much luv. https://t.co/7g8Ge8tQAd
ಕಿಚ್ಚ ಎನ್ನುವುದು ನನ್ನ ಗುರುತು. ಈ ಗುರುತನ್ನು ನೀವೆಲ್ಲ ನನಗೆ ಕೊಟ್ಟ ಉಡುಗೊರೆ. ಇದನ್ನು ಕೊನೆಯವರೆಗೂ ಕಾಪಾಡಿಕೊಳ್ಳುತ್ತೇನೆ. ನೀವೆಲ್ಲಾ ನನ್ನನ್ನ ಕಿಚ್ಚ ಎಂದು ಪ್ರೀತಿಸುತ್ತಿದ್ದೀರ, ನಾನು ಕಿಚ್ಚನಾಗಿಯೇ ನಿಮ್ಮೊಂದಿಗೆ ಇರುತ್ತೇನೆ ಎಂದು ಅಭಿಮಾನಿಯ ಟ್ಟೀಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೆಯೇ ಪೋಸ್ಟರ್ ಡಿಸೈನ್ಗೆ ಕೃತಜ್ಞತೆ ಹೇಳಿದ್ದಾರೆ. ಈಗ ಅದೇ ಚಿತ್ರವನ್ನು ಪ್ರೊಫೈಲ್ ಆಗಿ ಬದಲಾಯಿಸಿಕೊಂಡಿದ್ದಾರೆ.