ETV Bharat / sitara

'ಫ್ಯಾಂಟಮ್' ಶೂಟಿಂಗ್ ಸೆಟ್​​​ನಲ್ಲಿ ವಿಕ್ರಾಂತ್ ರೋಣನ ಬೊಂಬಾಟ್ ಕ್ರಿಕೆಟ್ ಆಟ..! - Sudeep cricket game in Phantom set

ಹೈದರಾಬಾದ್​​ನ​ ಅನ್ನಪೂರ್ಣ ಸ್ಟುಡಿಯೋದಲ್ಲಿ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಶೂಟಿಂಗ್ ಬ್ರೇಕ್​​ನಲ್ಲಿ ಸುದೀಪ್, ಚಿತ್ರತಂಡದೊಂದಿಗೆ ಕ್ರಿಕೆಟ್ ಆಡಿ ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಕಿಚ್ಚ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Sudeep played Cricket in Phantom set
ಫ್ಯಾಂಟಮ್ ಸೆಟ್​​ನಲ್ಲಿ ಸುದೀಪ್ ಕ್ರಿಕೆಟ್ ಆಟ
author img

By

Published : Sep 28, 2020, 12:13 PM IST

ಕಿಚ್ಚ ಸುದೀಪ್ ಅಭಿನಯದ 'ಫ್ಯಾಂಟಮ್' ಸಿನಿಮಾ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಇಡೀ ದಕ್ಷಿಣ ಭಾರತದಲ್ಲಿ ಸುದ್ದಿಯಾಗುತ್ತಿರುವ ಸಿನಿಮಾ. ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಸದ್ಯಕ್ಕೆ ಚಿತ್ರತಂಡ ಹೈದರಾಬಾದ್​ ಅನ್ನಪೂರ್ಣ ಸ್ಟುಡಿಯೋದಲ್ಲಿ ಬೀಡುಬಿಟ್ಟಿದೆ.

'ಫ್ಯಾಂಟಮ್' ಸೆಟ್​​​ನಲ್ಲಿ ಕಿಚ್ಚನ ಕ್ರಿಕೆಟ್ ಆಟ

ಪೋಸ್ಟರ್ ಹಾಗೂ ಮೇಕಿಂಗ್​​​ನಿಂದಲೇ ಸದ್ದು ಮಾಡಿರುವ ಈ ಚಿತ್ರದ ಎರಡನೇ ಶೆಡ್ಯೂಲ್ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಬೃಹತ್ ಸೆಟ್​​​​​​​​​ಗಳನ್ನು ಹಾಕಿ ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶಾಲಿನಿ ಆರ್ಟ್ಸ್​ ಬ್ಯಾನರ್ ಅಡಿ ಜಾಕ್ ಮಂಜು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಬಹಳ ಅದ್ಧೂರಿಯಾಗಿ ಮೂಡಿ ಬರುತ್ತಿದೆ ಎಂಬುದು ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಪೋಸ್ಟರ್​​​​ ನೋಡಿದರೆ ತಿಳಿಯುತ್ತದೆ.

Sudeep played Cricket in Phantom set
'ಫ್ಯಾಂಟಮ್' ಚಿತ್ರೀಕರಣದಲ್ಲಿ ಸುದೀಪ್

ಚಿತ್ರೀಕರಣದ ನಡುವೆ ದೊರೆತ ಬ್ರೇಕ್​​ನಲ್ಲಿ ಕಿಚ್ಚ ಸುದೀಪ್, ಚಿತ್ರತಂಡದ ಜೊತೆ ಕ್ರಿಕೆಟ್ ಆಡಿದ್ದಾರೆ. ತಾವು ಸೆಟ್​​​​​ನಲ್ಲಿ ಕ್ರಿಕೆಟ್ ಆಡುತ್ತಿರುವ ಚಿಕ್ಕ ವಿಡಿಯೋವೊಂದನ್ನು ಸುದೀಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದೆಡೆ ಐಪಿಲ್ ಪಂದ್ಯಗಳು ನಡೆಯುತ್ತಿದ್ದರೆ ಕಿಚ್ಚ ಹೈದರಾಬಾದ್​ನಲ್ಲಿ ಚಿತ್ರತಂಡದೊಂದಿಗೆ ಕ್ರಿಕೆಟ್ ಆಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಸುದೀಪ್​​​ ಅವರಿಗೆ ಕ್ರಿಕೆಟ್ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಇದರಿಂದ ತಿಳಿಯುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.