ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ 25 ವರ್ಷಗಳನ್ನು ಪೂರೈಯಿಸಿದ್ದು, ಆ ಸಂಭ್ರಮವನ್ನು ಸುದೀಪ್ ಇಂದು ಎಲ್ಲರೊಡನೆ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾ ಜರ್ನಿಯಲ್ಲಿ ಕಂಡ ಏಳುಬೀಳುಗಳು ಹಾಗೂ ಸನ್ಮಾನದ ಬಗ್ಗೆ ಸುದೀಪ್ ದುಬೈನಿಂದ ಝೂಮ್ ಕಾಲ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ತಾವು ಹೇಗೆ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದು, ಹುಚ್ಚ ಸಿನಿಮಾ ಹೇಗೆ ಹೀರೋ ಮಾಡ್ತು, ಅಭಿಮಾನಿಗಳು ಆರಂಭದ ದಿನಗಳಲ್ಲಿ ಹೇಗೆ ಮೆಚ್ಚಿಕೊಂದ್ರು ಎಂಬೆಲ್ಲ ಮಾಹಿತಿಗಳನ್ನು ಸುದೀಪ್ ಹೇಳಿದ್ರು. ಇದೇ ವೇಳೆ ತಾವು ನಿರ್ದೇಶಕರಾಗಿ ಯಾರಿಗೆ ಆ್ಯಕ್ಷನ್ ಕಟ್ ಹೇಳಬೇಕು ಅಂತ ಅಂದುಕೊಂಡಿದ್ರು ಎಂಬುದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಹೌದು, ಸುದೀಪ್ ನಟ ಅಲ್ಲದೆ ನಿರ್ದೇಶಕರೂ ಹೌದು. ಆರಂಭದ ದಿನಗಳಲ್ಲಿ ಉಪೇಂದ್ರ, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್ಗೆ ನಿರ್ದೇಶನ ಮಾಡುವ ಆಸೆ ಹೊತ್ತಿದ್ದರಂತೆ. ಅಲ್ಲದೆ ಅವರುಗಳಿಗೆ ಸಿನಿಮಾ ಕಥೆಗಳನ್ನೂ ಹೇಳಿದ್ದರಂತೆ.