ETV Bharat / sitara

'ಕೋಟಿಗೊಬ್ಬ-3' ಬಿಡುಗಡೆಗೆ ವಿಳಂಬ: ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳ ಗಲಾಟೆ - ಕಿಚ್ಚ ಸುದೀಪ್

ಬಹುನಿರೀಕ್ಷಿತ 'ಕೋಟಿಗೊಬ್ಬ-3' ಸಿನಿಮಾ ಪ್ರದರ್ಶನ ಸ್ಥಗಿತವಾದ ಹಾಗೂ ಚಿತ್ರ ಬಿಡುಗಡೆಗೆ ವಿಳಂಬವಾದ ಕಾರಣ ಕಿಚ್ಚ ಸುದೀಪ್ ಅಭಿಮಾನಿಗಳು ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ವಿಜಯಪುರದಲ್ಲಿ ಕಿಚ್ಚ ಅಭಿಮಾನಿಗಳ ಗಲಾಟೆ
ವಿಜಯಪುರದಲ್ಲಿ ಕಿಚ್ಚ ಅಭಿಮಾನಿಗಳ ಗಲಾಟೆ
author img

By

Published : Oct 14, 2021, 2:37 PM IST

ವಿಜಯಪುರ: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ-3' ರಾಜ್ಯಾದ್ಯಂತ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಬಿಡುಗಡೆಗೆ ಅಡ್ಡಿಯುಂಟಾಗಿದೆ. ಚಿತ್ರ ಬಿಡುಗಡೆ ವಿಳಂಬ ಹಿನ್ನೆಲೆ ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳು ಗಲಾಟೆ ಮಾಡಿದ್ದಾರೆ.

ವಿಜಯಪುರದಲ್ಲಿ ಕಿಚ್ಚನ ಅಭಿಮಾನಿಗಳ ಗಲಾಟೆ

ಇದನ್ನೂ ಓದಿ: ಇಂದು 'ಕೋಟಿಗೊಬ್ಬ 3' ರಿಲೀಸ್ ಆಗೋದು ಅನುಮಾನ: ಕಿಚ್ಚನ ಅಭಿಮಾನಿಗಳಿಗೆ ನಿರಾಸೆ

ನಗರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಸಿನಿಮಾ ಪ್ರದರ್ಶನವಾಗಬೇಕಾಗಿತ್ತು.‌ ಸುದೀಪ್​ ಅಭಿನಯದ ಚಿತ್ರ ನೋಡಲಿಕ್ಕಾಗಿ ಅಭಿಮಾನಿಗಳು ಬ್ಲ್ಯಾಕ್​ನಲ್ಲೂ ಟಿಕೆಟ್​​ ಖರೀದಿಸಿದ್ದರು.ಆದರೆ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದ್ದು, ಬಿಡುಗಡೆ ವಿಳಂಬವಾಗುತ್ತಿದೆ ಎಂದು ಅಭಿಮಾನಿಗಳು ಚಿತ್ರಮಂದಿರ ಮೇಲೆ ಕಲ್ಲು ತೂರಾಟ ನಡೆಸಿ, ಗ್ಲಾಸ್ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ಕೋಟಿಗೊಬ್ಬ 3' ಚಿತ್ರ ಪ್ರದರ್ಶಿಸುವಂತೆ ಕೊಳ್ಳೇಗಾಲ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ

ಇದು ವಿಜಯಪುರದ ಚಿತ್ರಣ ಮಾತ್ರವಲ್ಲ, ರಾಜ್ಯಾದ್ಯಂತ ಸುದೀಪ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಹಲವೆಡೆ ಚಿತ್ರ ಪ್ರದರ್ಶಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.