ದಾವಣಗೆರೆ : ನಟ ಕಿಚ್ಚ ಸುದೀಪ್ ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ಹುಚ್ಚು ಅಭಿಮಾನಿಯೊಬ್ಬನ ಅತಿರೇಕದ ವಿಡಿಯೋ ವೈರಲ್ ಆಗಿದೆ. ಸುದೀಪ್ ಬಂದ ಹೆಲಿಕ್ಯಾಪ್ಟರ್ ಲ್ಯಾಂಡ್ ಆದ ತಕ್ಷಣವೇ ಓಡಿ ಹೋಗಿ ಕಾಪ್ಟರ್‌ನ ತಬ್ಬಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆದ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ನಟ ಸುದೀಪ್ ನೋಡಲು ಹೆಲಿಪ್ಯಾಡ್ಗೆ ನೂರಾರು ಅಭಿಮಾನಿಗಳನ್ನು ತಡೆಯಲು ಪೋಲಿಸರು ಸುತ್ತಲೂ ಬ್ಯಾರಿಕೇಡ್ ಹಾಕಿದರೂ ಕೂಡ ಜನರನ್ನು ನಿಯಂತ್ರಿಸಲಾಗಲಿಲ್ಲ.
ಇನ್ನು, ಕೆಲವರು ನಟನೊಂದಿಗೆ ಸೆಲ್ಫಿಗೆ ಮುಗಿಬಿದ್ದು, ವೇದಿಕೆಗೆ ನುಗ್ಗಿದ್ದರು. ಇದೇ ವೇಳೆ ಬ್ಯಾರಿಕೇಡ್ ಹಾರಿ ಪೊಲೀಸರ ಕಣ್ಣು ತಪ್ಪಿಸಿ ಓಡಿ ಬಂದ ಯುವಕ ನಟ ಸುದೀಪ್ ಇದ್ದ ಎಲಿಕ್ಯಾಪ್ಟರ್ ತಬ್ಬಿಕೊಂಡಾಗ ಪೊಲೀಸರು ಎಳೆದೊಯ್ದು ಥಳಿಸಿದ್ದಾರೆ. ಈ ರೀತಿ ಹುಚ್ಚು ಅಭಿಮಾನ ಮೆರೆದಿರುವ ಅಭಿಮಾನಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.