ETV Bharat / sitara

ನಾನೀಗ ಅಪ್ಪು ಸಾರ್ ಮನೆಗೆ ಹೋಗುವುದಿಲ್ಲ: ಅಲ್ಲು ಅರ್ಜುನ್​ ಹಾಗೆ ಹೇಳಿದ್ಯಾಕೆ? - ಪುನೀತ್ ರಾಜ್​​ಕುಮಾರ್

ಈಗ ನಾನು ಅವರ ಮನೆಯವರನ್ನ ಭೇಟಿ ಮಾಡಿದರೆ, ಅವರು ಪುಷ್ಪ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು, ಹಾಗೇ ಪುನೀತ್ ಕುಟುಂಬವನ್ನ ಭೇಟಿ ಮಾಡಿದ್ದಾರೆ ಅಂತಾರೆ. ಅದಕ್ಕೆ ನಾನು ನನ್ನ ಪುಷ್ಪ ಸಿನಿಮಾ ಬಿಡುಗಡೆ ಆದ ಮೇಲೆ ನಾನು ಬೆಂಗಳೂರಿಗೆ ಬಂದು ಪುನೀತ್ ರಾಜ್​​ಕುಮಾರ್ ಕುಟುಂಬವನ್ನ ವೈಯಕ್ತಿವಾಗಿ ಭೇಟಿ ಮಾಡುತ್ತೇನೆ ಎಂದು ಅಲ್ಲು ಅರ್ಜುನ್​​ ಹೇಳಿದ್ದಾರೆ.

ಅಲ್ಲು ಅರ್ಜುನ್
ಅಲ್ಲು ಅರ್ಜುನ್
author img

By

Published : Dec 15, 2021, 5:32 PM IST

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪುಷ್ಪ, ಇದೇ ಡಿಸೆಂಬರ್ 17ರಂದು ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಅಲ್ಲು ಅರ್ಜುನ್, ತಮ್ಮ ಪುಷ್ಪ ಸಿನಿಮಾ ಚಿತ್ರತಂಡದೊಂದಿಗೆ ಬೆಂಗಳೂರಿಗೆ ಬಂದಿದ್ದರು.

ನಾನು ಈಗ ಅಪ್ಪು ಸಾರ್ ಮನೆಗೆ ಹೋಗುವುದಿಲ್ಲ

ತಮ್ಮ ಪುಷ್ಪ ಸಿನಿಮಾದ ಹೈಲೆಟ್ಸ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್, ಕೊನೆಯಲ್ಲಿ ಅಣ್ಣನ ಸ್ಥಾನದಲ್ಲಿದ್ದ ಪುನೀತ್ ರಾಜ್​​ಕುಮಾರ್ ಬಗ್ಗೆ ಮಾತನಾಡೋದನ್ನ ಮರೆಯಲಿಲ್ಲ. ಹೌದು ಪವರ್ ಸ್ಟಾರ್ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ಅಲ್ಲದೇ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅಪ್ಪು ನಿಧನರಾಗಿ ಒಂದೂವರೆ ತಿಂಗಳು ಆಗುತ್ತಾ ಇದ್ದರು, ಪುನೀತ್ ರಾಜ್​​​ಕುಮಾರ್ ಅವರನ್ನ ಮರೆಯೋದಕ್ಕೆ ಆಗುತ್ತಿಲ್ಲ.

ಪುನೀತ್ ರಾಜ್​​ಕುಮಾರ್ ಮತ್ತು ಅಲ್ಲು ಅರ್ಜುನ್​​

ಇನ್ನು ಪವರ್ ಸ್ಟಾರ್ ಜೊತೆ ಸಹೋದರನಂತೆ ಇದ್ದ ಅಲ್ಲು ಅರ್ಜುನ್, ತಮ್ಮ ಪುಷ್ಪ ಸಿನಿಮಾದ ಪ್ರಮೋಷನ್ ಟೈಮಲ್ಲಿ ಪುನೀತ್ ರಾಜ್​​​ಕುಮಾರ್ ಅವರನ್ನ ನೆನಪಿಸಿಕೊಂಡರು. ಪುನೀತ್ ನಿಧನರಾದ ಸಮಯದಲ್ಲಿ ನಾನು, ಪುಷ್ಪ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಇದ್ದ ಕಾರಣ ನಾನು ಅವರ ಅಂತಿಮ ದರ್ಶನ ಪಡೆಯೋದಿಕ್ಕೆ ಆಗಲಿಲ್ಲ. ಆದರೆ, ಈಗ ನಾನು ಅವರ ಮನೆಯವರನ್ನ ಭೇಟಿ ಮಾಡಿದರೆ, ಅವರು ಪುಷ್ಪ ಸಿನಿಮಾ ಪ್ರಚಾರಕ್ಕೆ ಬೆಂಗಳೂರಿಗೆ ಬಂದಿದ್ದರು. ಹಾಗೇ ಪುನೀತ್ ಕುಟುಂಬವನ್ನ ಭೇಟಿ ಮಾಡಿದ್ದಾರೆ ಅಂತಾರೆ.

ಅದಕ್ಕೆ ನಾನು ನನ್ನ ಪುಷ್ಪ ಸಿನಿಮಾ ಬಿಡುಗಡೆ ಆದ ಮೇಲೆ ನಾನು ಬೆಂಗಳೂರಿಗೆ ಬಂದು ಪುನೀತ್ ರಾಜ್​​ಕುಮಾರ್ ಕುಟುಂಬವನ್ನ ವೈಯಕ್ತಿವಾಗಿ ಭೇಟಿ ಮಾಡುತ್ತೇನೆ. ಯಾಕಂದ್ರೆ ನನ್ನ ಜೀವನದಲ್ಲಿ ಅಪ್ಪು ವಿಶಿಷ್ಠ ವ್ಯಕ್ತಿ. ಅದು ನನ್ನ ಜವಬ್ದಾರಿ ಅಂತಾ ಅಲ್ಲು ಅರ್ಜುನ್ ಹೇಳಿದರು. ಇನ್ನು ಅಪ್ಪು ಕುಟುಂಬಕ್ಕೆ ಆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಅಲ್ಲು ಅರ್ಜುನ್ ಪುನೀತ್ ಅವರನ್ನ ಸ್ಮರಿಸಿದರು.

ಇನ್ನು ಪುನೀತ್​ ಹಾಗೂ ಅಲ್ಲು ಅರ್ಜುನ್​​​ ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದರು. ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದಾಗಲೆಲ್ಲಾ ಪುನೀತ್ ಮನೆಗೆ ಭೇಟಿ ನೀಡುತ್ತಿದ್ದರು. ಹಾಗೆಯೇ ಪುನೀತ್ ಹೈದಾರಬಾದ್​ಗೆ ಹೋದಾಗ ಅಲ್ಲು ಅರ್ಜುನ್ ಭೇಟಿ ಮಾಡದೆ ಬರುತ್ತಿರಲಿಲ್ಲ. ಇಷ್ಟು ಆತ್ಮೀಯರಾಗಿದ್ದ ಅಲ್ಲು ಅರ್ಜುನ್ ಹಾಗೂ ಪುನೀತ್ ಸಾಕಷ್ಟು ಬಾರಿ ಒಟ್ಟಿಗೆ ಔತಣಕೂಟದಲ್ಲಿ ಭಾಗಿಯಾಗುತ್ತಿದ್ದರು. ಅಷ್ಟರ ಮಟ್ಟಿಗ ಪುನೀತ್ ರಾಜ್ ಕುಮಾರ್ ಹಾಗು ಅಲ್ಲು ಅರ್ಜುನ್ ಜೊತೆ ಸ್ನೇಹ ಬಾಂಧವ್ಯ ಇತ್ತು.

ಇದನ್ನೂ ಓದಿ : ಕರೀನಾ ಕಪೂರ್ ಖಾನ್ ಅವ್ರ 'ಪೂ' ಪಾತ್ರವನ್ನು ರಿ ಕ್ರಿಯೇಟ್​ ಮಾಡಿದ ಜಾನ್ವಿ ಕಪೂರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.