ETV Bharat / sitara

ಡಾ. ರಾಜ್​​ಕುಮಾರ್ ನಟನೆಯ ಜೊತೆಗೆ ಗಾಯಕರಾದ ರೋಚಕ ಕಥೆ

ಡಾ ರಾಜ್ ಕುಮಾರ್ ಕೇವಲ ನಟರಾಗಿ ಉಳಿಯದೇ ಅದ್ಭುತ ಹಾಡುಗಾರನಾಗಿ ಕನ್ನಡ ಚಿತ್ರರಂಗದಲ್ಲಿ ಅಜರಾಮರರಾಗಿದ್ದಾರೆ. ಹಾಗದರೆ ಅಣ್ಣಾವ್ರು ನಟನೆ ಜೊತೆಗೆ ಗಾಯಕರಾದ ರೋಚಕ ಸ್ಟೋರಿಯನ್ನ ಹೇಳುತ್ತೇವೆ ಕೇಳಿ.

author img

By

Published : Apr 24, 2021, 1:30 PM IST

Updated : Apr 24, 2021, 10:48 PM IST

Story of Dr Rajakumar singer, Story of Dr Rajakumar singer news, Dr Rajakumar singer stroy, Rajakumar Birthday, Rajakumar Birthday news, ಡಾ ರಾಜ್​​ಕುಮಾರ್ ಗಾಯಕರಾದ ಕಥೆ, ಡಾ ರಾಜ್​​ಕುಮಾರ್ ಗಾಯಕರಾದ ಕಥೆ ಸುದ್ದಿ, ರಾಜಕುಮಾರ್​ ಜನ್ಮದಿನ, ರಾಜಕುಮಾರ್​ ಜನ್ಮದಿನ ಸುದ್ದಿ,
ಡಾ ರಾಜ್​​ಕುಮಾರ್ ನಟನಾ ಜೊತೆಗೆ ಗಾಯಕರಾದ ರೋಚಕ ಕಥೆ

ಕನ್ನಡ ಚಿತ್ರರಂಗದ ಧ್ರುವತಾರೆ, ಕನ್ನಡಿಗರ ಕಣ್ಮಣಿ ಎಂದೇ ಇಂದಿಗೂ ಆರೂವರೆ ಕೋಟಿ ಜನರ ಹೃದಯ ಸಿಂಹಾಸನದಲ್ಲಿ ಉಳಿದಿರುವ ಏಕೈಕ ನಟ ಡಾ. ರಾಜ್​​​ಕುಮಾರ್. ಏಪ್ರಿಲ್ 24 ಬಂತು ಅಂದರೆ ಕನ್ನಡಿಗರಿಗೆ ವಿಶೇಷವಾದ ದಿನ. ಯಾಕಂದರೆ ಇಂದು ಡಾ ರಾಜ್ ಕುಮಾರ್ ಹುಟ್ಟಿದ ದಿನ.

ಅಣ್ಣಾವ್ರು ಇಂದು ಬದುಕಿದರೆ 92 ವರ್ಷದ ಹುಟ್ಟು ಹಬ್ಬವನ್ನ ಕೋಟ್ಯಂತರ ಅಭಿಮಾನಿಗಳ ಸಮ್ಮುಖದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ರು. ಇನ್ನು ಎರಡು ವರ್ಷದಿಂದ ದಿವಂಗತ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೆ ಕೊರೊನಾ ಎಂಬ ಹೆಮ್ಮಾರಿ ಕಂಟಕವಾಗಿದೆ.

ಕನ್ನಡ ಚಿತ್ರರಂಗದವನ್ನು ಸುಮಾರು ಐದು ದಶಕಗಳನ್ನ ಆಳಿ, ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ದಂತಕಥೆ. ‘ಆಡು ಮುಟ್ಟದ ಸೊಪ್ಪಿಲ್ಲ’ ಅನ್ನೋ ಗಾದೆ ಮಾತಿನ ಹಾಗೆ ಡಾ. ರಾಜ್​​​ಕುಮಾರ್ ಮಾಡಿರದ ಪಾತ್ರಗಳಿಲ್ಲ. ಅಷ್ಟಕ್ಕೂ ಡಾ. ರಾಜ್​​ಕುಮಾರ್ ಅಭಿನಯದ ಜೊತೆಗೆ ಈ ಹಾಡುಗಾರಿಕೆ ಹೇಗೆ ಬಂತು ಅಂತಾ ಕೇಳಿದ್ರೆ ನಿಜಕ್ಕೂ ಆರು ಕೋಟಿ ಕನ್ನಡಿಗರು ಅಚ್ಚರಿಪಡ್ತಾರೆ.

ಹೌದು, ಅಣ್ಣಾವ್ರಿಗೆ ಹಾಡುವ ಕಲೆ ನಾಟಕ ಕಂಪನಿಗಳಲ್ಲಿ ಆ್ಯಕ್ಟ್ ಮಾಡಬೇಕಾದ್ರೆ ಇತ್ತು. ಈ ಮಾತಿಗೆ ಪೂರಕವಾಗಿ ಡಾ. ರಾಜ್​​​ ಕುಮಾರ್ ಕುಟುಂಬಕ್ಕೆ ಹಾಗೂ ರಾಜ್​​ಕುಮಾರ್​​ಗೆ ಅತೀ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಹಿರಿಯ ನಿರ್ದೇಶಕ ಭಗವಾನ್ ಅಣ್ಣಾವ್ರ ಸಂಗೀತ ಪ್ರೇಮದ ಬಗ್ಗೆ ಸವಿಸ್ತಾರವಾಗಿ ಈಟಿವಿ ಭಾರತ ದೊಂದಿಗೆ ಹಂಚಿಕೊಂಡಿದ್ದಾರೆ.

ಹಿರಿಯ ನಿರ್ದೇಶಕ ಭಗವಾನ್ ಹೇಳುವ ಹಾಗೆ ಡಾ. ರಾಜ್​​ಕುಮಾರ್​​ಗೆ ಹಾಡುವ ವ್ಯಾಮೋಹವಿತ್ತು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪ್ರಭಾವದಿಂದಾಗಿ‌ ನಟಸಾರ್ವಭೌಮ ಹಾಡುವುದನ್ನು ಕಲಿತುಕೊಂಡರು. ಗುಬ್ಬಿ ನಾಟಕ ಕಂಪನಿಯಲ್ಲಿ ನಟನೆ ಮಾಡುವ ಸಮಯದಲ್ಲೇ ರಾಜ್ ಕುಮಾರ್‌ಗೆ ಹಾಡುವ ಕಲೆ ಇರಬೇಕು ಎನ್ನುವ ಕಾರಣಕ್ಕೆ ಅಣ್ಣಾವ್ರ ತಂದೆ ಪುಟ್ಟಸ್ವಾಮಯ್ಯ ಅವರು, ಪಾರ್ವತಮ್ಮ ರಾಜ್​​ಕುಮಾರ್ ತಂದೆ ಅಪ್ಪಾಜಿ ಗೌಡ ಹತ್ತಿರ ಸಂಗೀತ ಕಲಿಯೋದಕ್ಕೆ ಹಾಕಿದ್ರಂತೆ. ದಿನಕ್ಕೆ ಸತತ ಎರಡು ಗಂಟೆಗಳ ಕಾಲ ರಾಜ್​​​ಕುಮಾರ್ ಸಂಗೀತ ಕಲಿಯಬೇಕಾಗಿತ್ತು. ಅಣ್ಣಾವ್ರು ತಮ್ಮ ತಂದೆಯವರ ಭಯಕ್ಕೆ ಕರ್ನಾಟಿಕ್‌ ಹಾಗೂ ಹಿಂದುಸ್ತಾನಿ ಸಂಗೀತವನ್ನ ಕಲಿತುಕೊಂಡ್ರು ಅನ್ನೋದು ನಿರ್ದೇಶಕ ಭಗವಾನ್ ಮಾತು.

ಮನೋಜ್ಞ ಅಭಿನಯದಿಂದ ಕನ್ನಡಿಗರ ಮನ ಗೆದ್ದಿದ್ದ ಅಣ್ಣಾವ್ರು ಸಂಗೀತ ಕಲಿತುಕೊಂಡ ಮೇಲೆ ಮೊದಲು ಹಾಡಿದ್ದು 1956ರಲ್ಲಿ ಬಂದ ಓಹಿಲೇಶ್ವರ ಚಿತ್ರದಲ್ಲಿ. ‘ಶರಣು ಶಂಭೋ’ ಎಂಬ ಗೀತೆಯೊಂದನ್ನು ಹಾಡಿದ್ರು. ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ ‘ತುಂಬಿತು ಮನವ ತಂದಿತು ಸುಖವ’ ಎಂಬ ಯುಗಳ ಗೀತೆಯನ್ನ ಅಣ್ಣಾವ್ರು ಹಾಡಿದ್ದರು.

ಡಾ.ರಾಜ್​​​ಕುಮಾರ್ ಸಿನಿಮಾಗಳಿಗೆ ಆಲ್ ಟೈಮ್ ಗಾಯಕರಾಗಿ ಪಿ. ಬಿ. ಶ್ರೀನಿವಾಸ್ ಹಾಡುಗಳನ್ನು ಹಾಡುತ್ತಿದ್ರು. ಕಾರಣ ಅಣ್ಣಾವ್ರು ಹಾಗೂ ಪಿ.ಬಿ.ಶ್ರೀನಿವಾಸ್ ಧ್ವನಿ ಒಂದೇ ರೀತಿ ಇದ್ದ ಕಾರಣ ಹೆಚ್ಚಾಗಿ ರಾಜ್​​ಕುಮಾರ್ ಚಿತ್ರಗಳಲ್ಲಿ ಪಿ.ಬಿ.ಶ್ರೀನಿವಾಸ್ ಆಲ್ ಟೈಮ್ ಗಾಯಕರಾಗಿದ್ರು. ಇಂತಹ ಸಂದರ್ಭದಲ್ಲಿ 1974ರಲ್ಲಿ ತೆರೆ ಕಂಡ ಸಂಪತ್ತಿಗೆ ಸವಾಲ್, ಈ ಚಿತ್ರಕ್ಕೆ ಪಿ.ಬಿ.ಶ್ರೀನಿವಾಸ್ ಹಾಡಬೇಕಾಗಿತ್ತು. ಆದರೆ ಆ ಟೈಮ್‌ನಲ್ಲಿ ಪಿ.ಬಿ.ಶ್ರೀನಿವಾಸ್ ಸಿಂಗಾಪುರ್​​​ನಲ್ಲಿದ್ದ ಕಾರಣ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಸದ್ಯಕ್ಕೆ ಟ್ರ್ಯಾಕ್‌ ಆಡಿಯೋಕ್ಕಾಗಿ ರಾಜ್​​ಕುಮಾರ್ ಅವ್ರನ್ನ ಹಾಡೋದಕ್ಕೆ ಹೇಳಿದ್ರು.

ಅಣ್ಣಾವ್ರ ಹಾಡಿನ ಶೈಲಿ ನೋಡಿ ಪಿ.ಬಿ.ಶ್ರೀನಿವಾಸ್ ವಾಯ್ಸ್ ಬೇಡ ನಿಮ್ಮ ವಾಯ್ಸ್ ಇರಲಿ ಅಂತಾ ಹೇಳಿ ಫೈನಲ್ ಮಾಡಿದ್ರು. ಅದುವೆ ರಾಜ್​​​ಕುಮಾರ್ ಹಾಡಿದ ಮೊದಲ ಹಾಡು ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಎಂಬ ಹಾಡು. ಈ ಹಾಡು ಎಮ್ಮೆ ಹಾಡೆಂದೇ ಪ್ರಸಿದ್ಧಿಯಾದ ಕಾರಣ ಅಂದಿನಿಂದ ಡಾ. ರಾಜ್​​ಕುಮಾರ್ ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಈ ಹಾಡು ಸೂಪರ್ ಹಿಟ್ ಆದ ನಂತ್ರ 1975ರಲ್ಲಿ ಬಂದ ಮಯೂರ ಚಿತ್ರದಲ್ಲಿ ‘ನಾನಿರುವುದೇ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆ’ ಅಣ್ಣಾವ್ರ ಸಂಗೀತ ವ್ಯಾಮೋಹಕ್ಕೆ ಸಾಕ್ಷಿಯಾಯಿತು.

ಗಾನಗಂಧರ್ವ ಡಾ.ರಾಜ್‍ಕುಮಾರ್ ಅವರು ಎಪ್ಪತ್ತು - ಎಂಬತ್ತರ ದಶಕದಲ್ಲಿ ಹಾಡಿರುವ ಹಾಡುಗಳು ಈಗಲೂ ಸೂಪರ್ ಹಿಟ್. ಅಬ್ಬರವಿಲ್ಲದ ಸಂಗೀತ, ಸುಮಧುರ ಕಂಠ, ಶುದ್ಧವಾದ ಸಾಹಿತ್ಯದ ಆ ಮಧುರ ಗೀತೆಗಳನ್ನು ಕೇಳುತ್ತಿದ್ದರೆ ಮೈ ಮರೆಯುತ್ತೀರಾ. ರಾಜ್​ಕುಮಾರ್ ಅಭಿನಯದ ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು.

ಅಶ್ವಮೇಧ, ಓಂ, ಕಸ್ತೂರಿ ನಿವಾಸ, ನಾನಿನ್ನ ಮರೆಯಲಾರೆ, ಗಿರಿಕನ್ಯೆ, ಬಂಗಾರದ ಮನುಷ್ಯ, ಶಂಕರ್ ಗುರು, ಬಹದ್ದೂರ್ ಗಂಡು, ಹೊಸ ಬೆಳಕು, ಶೃತಿ ಸೇರಿದಾಗ, ಚಿಗುರಿದ ಕನಸು, ಅಭಿ ಚಿತ್ರದ ವಿಧಿ ಬರಹ ಎಂಥ ಘೋರ, ಆಕಸ್ಮಿಕ ಚಿತ್ರದ ‘ಹುಟ್ಟಿದರೆ ಕನ್ನಡನಾಡಲ್ಲೇ ಹುಟ್ಟಬೇಕು’ ಹೀಗೆ 150ಕ್ಕೂ ಹೆಚ್ಚು ಸಿನಿಮಾಗಳಿಗೆ ಡಾ. ರಾಜ್​​ಕುಮಾರ್ ಹಾಡಿದ್ದಾರೆ.

ಇನ್ನು ಸಿನಿಮಾಗಳಿಗೆ ಡಾ.ರಾಜ್​ಕುಮಾರ್ ಹಾಡೋದಕ್ಕೆ ತೆಗೆದುಕೊಳ್ಳುತ್ತಿದ್ದ ಸಂಭಾವನೆಯನ್ನ ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ನೀಡುತ್ತಿದ್ರು. ಸಿನಿಮಾಗಳ ಹಾಡುಗಳ ಜೊತೆಗೆ ಸಾವಿರಕ್ಕೂ ಹೆಚ್ಚು ಭಕ್ತಿಗೀತೆ, ಭಾವಗೀತೆಗಳು ಡಾ. ರಾಜ್​​​ಕುಮಾರ್ ಕಂಠ ಸಿರಿಯಲ್ಲಿ ಮೂಡಿ ಬಂದಿವೆ.

ಈ ಭಕ್ತಿ ಗೀತೆಗಳು ಹಾಗೂ ಭಾವ ಗೀತೆಗಳನ್ನ ಡಾ. ರಾಜ್​​ಕುಮಾರ್ ಪಡೆಯುವ ಸಂಭಾವನೆಯನ್ನು, ಕಷ್ಟದಲ್ಲಿರುವ ಕಲಾವಿದರಿಗೆ, ಸಿನಿಮಾ ತಂತ್ರಜ್ಞರಿಗೆ ನೀಡುತ್ತಿದ್ದರು ಎಂದು ಹಿರಿಯ ನಿರ್ದೇಶಕ ಭಗವಾನ್ ಹೇಳುತ್ತಾರೆ.‌

ಒಟ್ಟಾರೆ ಡಾ. ರಾಜ್​​ಕುಮಾರ್ ಅಭಿನಯಕ್ಕಿಂತ ಹೆಚ್ಚು ಹಾಡೋದ್ರಲ್ಲಿ ತುಂಬಾ ಸಂತೋಷ ಪಡುತ್ತಿದ್ರು ಅನ್ನೋದು ಅಚ್ಚರಿ ವಿಷಯವಾಗಿದೆ.

Last Updated : Apr 24, 2021, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.