ETV Bharat / sitara

ಗುಂಡ್ಲುಪೇಟೆಯ ಹಿಮವದ್​​​ ಗೋಪಾಲಸ್ವಾಮಿ ದರ್ಶನ ಪಡೆದ ರಾಜಮೌಳಿ ದಂಪತಿ - Tolly wood director SS Rajamouli

ಖ್ಯಾತ ನಿರ್ದೇಶಕ ಎಸ್​​.ಎಸ್. ರಾಜಮೌಳಿ ಪತ್ನಿ ರಮಾ ಜೊತೆಗೆ ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಜೊತೆಗೆ ಅಲ್ಲಿನ ಸುಂದರ ವಾತಾವರಣವನ್ನು ಸವಿದಿದ್ದಾರೆ.

Himavad gopalaswamy temple
ರಾಜಮೌಳಿ ದಂಪತಿ
author img

By

Published : Sep 16, 2020, 3:20 PM IST

ಗುಂಡ್ಲುಪೇಟೆ (ಚಾಮರಾಜನಗರ): ಟಾಲಿವುಡ್ ಸ್ಟಾರ್ ನಿರ್ದೇಶಕ, ಬಾಹುಬಲಿ ಖ್ಯಾತಿಯ ಎಸ್​​.ಎಸ್​. ರಾಜಮೌಳಿ, ಪತ್ನಿ ರಮಾ ಜೊತೆಗೆ ಇಂದು ಬಂಡಿಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿದ್ದರು.

Himavad gopalaswamy temple
ಪ್ರಕೃತಿ ಸೌಂದರ್ಯ ಸವಿದ ರಾಜಮೌಳಿ ದಂಪತಿ

ನಿನ್ನೆಯೇ ಚಾಮರಾಜನಗರಕ್ಕೆ ಬಂದಿದ್ದ ರಾಜಮೌಳಿ ದಂಪತಿ, ಗುಂಡ್ಲುಪೇಟೆ ತಾಲೂಕಿನ ಕಣಿಯನಪುರದಲ್ಲಿ ಇರುವ ರೆಸಾರ್ಟ್​ವೊಂದರಲ್ಲಿ ಉಳಿದುಕೊಂಡಿದ್ದರು. ಬುಧವಾರ ಬೆಳಗ್ಗೆ ಸಫಾರಿಗೆ ತೆರಳಿ ನಂತರ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು. ರಾಜಮೌಳಿ ಜೊತೆಗೆ ಅರಣ್ಯ ವಲಯಾಧಿಕಾರಿ ನವೀನ್ ಕುಮಾರ್ ತೆರಳಿ ಅವರಿಗೆ ಮಾರ್ಗದರ್ಶನ ಮಾಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಮೌಳಿ, ಇಲ್ಲಿನ ಪ್ರಕೃತಿ ಸೌಂದರ್ಯ ಬಹಳ ಚೆನ್ನಾಗಿದೆ. ತುಂಬಾ ಚೆನ್ನಾಗಿ ಮೇಂಟೇನ್ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಅಭಿಮಾನಿಗಳೊಂದಿಗೆ ಫೋಟೋಗೆ ನಿಂತು ಎಲ್ಲರನ್ನೂ ನಗುತ್ತಾ ಮಾತನಾಡಿಸಿದರು.

Himavad gopalaswamy temple
ರಾಜಮೌಳಿ ಜೊತೆ ಅರಣ್ಯ ಸಿಬ್ಬಂದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.