ETV Bharat / sitara

ರಗಡ್​ ಲುಕ್​ನಲ್ಲಿ 'ಗೌಳಿ' ಯಾಗಿ ಬಂದ ಶ್ರೀನಗರ ಕಿಟ್ಟಿ - ಶ್ರೀನಗರ ಕಿಟ್ಟಿ ಹೊಸ ಸಿನಿಮಾ

'ಗೌಳಿ' ಚಿತ್ರವನ್ನು ಸೂರ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಘು ಸಿಂಗಂ ಎನ್ನುವವರು ತಮ್ಮ ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದು, ಮಿಕ್ಕಂತೆ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

sri nagar kitty gowli movie updates
ಶ್ರೀನಗರ ಕಿಟ್ಟಿ
author img

By

Published : Mar 27, 2021, 12:52 PM IST

ಶ್ರೀನಗರ ಕಿಟ್ಟಿ ಹೀರೋ ಆಗಿ ನಟಿಸಿ ಮೂರು ವರ್ಷಗಳ ಮೇಲಾಗಿದೆ. 'ಸಿಲಿಕಾನ್​ ಸಿಟಿ' ಚಿತ್ರದಲ್ಲಿ ಕಡೆಯದಾಗಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಿಟ್ಟಿ, ಆ ನಂತರ ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದರು. ಈಗ ಮೂರು ವರ್ಷಗಳ ನಂತರ 'ಗೌಳಿ' ಎಂಬ ಚಿತ್ರದಲ್ಲಿ ಹೀರೋ ಆಗಿ ರೀ ಎಂಟ್ರಿ ಕೊಡುತ್ತಿದ್ದಾರೆ.

'ಗೌಳಿ' ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಅಧಿಕೃತವಾಗಿ ಪ್ರಾರಂಭವಾಗಲಿದೆ. ಶುಕ್ರವಾರ ಚಿತ್ರದ ಪೋಸ್ಟರ್​ವೊಂದು ಬಿಡುಗಡೆಯಾಗಿದ್ದು, ಹಲವರ ಹುಬ್ಬೇರಿಸಿದೆ. ಸಖತ್​ ರಗಡ್​ ಲುಕ್​ನಲ್ಲಿ ಕಿಟ್ಟಿ ಕಾಣಿಸಿಕೊಂಡಿದ್ದು, ಈ ಚಿತ್ರದ ಬಗ್ಗೆ ಕುತೂಹಲ ಕೆರಳಿಸಿದೆ. 'ಅವತಾರ ಪುರುಷ' ಮತ್ತು 'ವೀರಂ' ಚಿತ್ರಗಳಿಗಾಗಿ ಕಿಟ್ಟಿ ಉದ್ದಗಡ್ಡ ಬಿಟ್ಟಿದ್ದು, 'ಗೌಳಿ' ಚಿತ್ರದಲ್ಲೂ ಅದೇ ಲುಕ್​ನಲ್ಲಿ ಮುಂದುವರೆಯಲಿದ್ದಾರೆ.

'ಗೌಳಿ' ಚಿತ್ರವನ್ನು ಸೂರ ಎನ್ನುವವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ರಘು ಸಿಂಗಂ ಎನ್ನುವವರು ತಮ್ಮ ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸುತ್ತಿದ್ದು, ಮಿಕ್ಕಂತೆ ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

ಕಿಟ್ಟಿ ಈಗಾಗಲೇ 'ಗರುಡ', 'ಅವತಾರ್​ ಪುರುಷ' ಮತ್ತು 'ವೀರಂ' ಚಿತ್ರಗಳಲ್ಲಿ ನಟಿಸಿದ್ದು, ಈ ಚಿತ್ರಗಳು ಇದೇ ವರ್ಷ ಬಿಡುಗಡೆಯಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.