ETV Bharat / sitara

ವಿ.ಮನೋಹರ್ ಕಂಠದಲ್ಲಿ ಮೂಡಿಬಂದ ಗುರು ರಾಯರ ಆರಾಧನೆ ವಿಶೇಷ ಹಾಡು - Music director Vmanohar songs

ಸದ್ಯ ಈ ಹಾಡು ಜನಪ್ರಿಯವಾಗಿದ್ದು, ಶ್ರೀ ಗುರುರಾಘವೇಂದ್ರ ಯತಿಗಳ ಆರಾಧನಾ ಮಹೋತ್ಸವದ ವಿಶೇಷವಾಗಿ ರಚಿಸಲಾಗಿದೆ. ಈ ಹಾಡಿಗೆ ಭೂಮಿಕ‌ ರಮೇಶ್ ಹೆಜ್ಜೆ ಹಾಕಿದ್ದಾರೆ..

ವಿ.ಮನೋಹರ್
ವಿ.ಮನೋಹರ್
author img

By

Published : Aug 5, 2020, 9:12 PM IST

ಇತ್ತೀಚೆಗಷ್ಟೆ ಸಂಯುಕ್ತ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದಿದ್ದ, ‘ಕೊರೊನಾ ನಿಜಾನಾ..’ ಅನ್ನೋ ಹಾಡನ್ನು ಸಂಗೀತ ನಿರ್ದೇಶಕ ವಿ.ಮನೋಹರ್ ಹಾಡಿದ್ದರು. ಆ ಹಾಡಿನಲ್ಲಿ ಕೊರೊನಾ ಸಂಕಷ್ಟದ ಸಮಯದಲ್ಲೂ ಹಣ ಮಾಡುವವರು, ಲೂಟಿಕೋರರ ಬಗ್ಗೆ ವ್ಯಂಗ್ಯವಾಗಿ ಸಾಹಿತ್ಯ ಬರೆದಿದ್ದರು.

ಈಗ ಮತ್ತೆ ವಿ.ಮನೋಹರ್ ಪದ್ಮರಾಗ ಎಂಟರ್​ಟೈನ್ಮೆಂಟ್ ಬ್ಯಾನರ್‌ನಡಿ ಮೂಡಿ ಬಂದಿರುವ ಮತ್ತೊಂದು ಹಾಡಿಗೆ ಸಂಗೀತ, ಸಾಹಿತ್ಯದ ಜೊತೆಗೆ ಕಂಠದಾನ ಮಾಡಿದ್ದಾರೆ. ಸದ್ಯ ಈ ಹಾಡು ಜನಪ್ರಿಯವಾಗಿದ್ದು, ಶ್ರೀ ಗುರುರಾಘವೇಂದ್ರ ಯತಿಗಳ ಆರಾಧನಾ ಮಹೋತ್ಸವದ ವಿಶೇಷವಾಗಿ ರಚಿಸಲಾಗಿದೆ. ಈ ಹಾಡಿಗೆ ಭೂಮಿಕ‌ ರಮೇಶ್ ಹೆಜ್ಜೆ ಹಾಕಿದ್ದಾರೆ.

ಈ ವಿಡಿಯೋದಲ್ಲಿ ಉಡುಪಿಯ ರಂಗಭೂಮಿ ಕಲಾವಿದರಾದ ಶ್ರೀಪಾದ ಹೆಗಡೆ, ಶಾಂಭವಿ ಆಚಾರ್ಯ, ಕಲ್ಯಾಣಿ ಪೂಜಾರಿ, ಶ್ರೀ ಶ್ರೇಯಾ ಅಲ್ಲದೆ ಮಂಡ್ಯ ರಮೇಶ್ ಅವರ ನಟನಾ ರಂಗಶಾಲೆಯ ಅನೇಕ ವಿದ್ಯಾರ್ಥಿಗಳು ನರ್ತಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.