ಲಾಕ್ಡೌನ್ ಹಿನ್ನಲೆ ಸುಪ್ರಸಿದ್ಧ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ವಿಶ್ವ ಭೂಮಿ ದಿವಸವಾದ ಏ.22 ರಂದು ತಾವು ಇರುವ ಜಾಗದಲ್ಲೇ ಒಂದು ಸಂಗೀತ ಕಾರ್ಯಕ್ರಮ ನಡೆಸಿ ಅದು ವಿಶ್ವದ ನಾನಾ ಕಡೆ ಪ್ರಸಾರ ಆಗುವಂತೆ ಪ್ಲಾನ್ ಮಾಡಿದ್ದಾರೆ. ಅವರೊಂದಿಗೆ 6 ದೇಶಗಳಿಂದ 40 ಸಂಗೀತಗಾರರು ಸೇರಿಕೊಂಡು ಸಿದ್ದಪಡಿಸಿರುವ ಹಾಡು ಪ್ರಸಾರ ಆಗಲಿದೆ.
ಕನ್ನಡ ಸಿನಿಮಾ ರಂಗದಲ್ಲೂ ಕಂಪು ಚೆಲ್ಲಿರುವವರು ರಿಕ್ಕಿ ಕೇಜ್. ಇವರು ರಮೇಶ್ ಅರವಿಂದ್ ಅಭಿನಯದ ಆಕ್ಸಿಡೆಂಟ್, ವೆಂಕಟ ಇನ್ ಸಂಕಟ ಹಾಗೂ ಕ್ರೇಜಿ ಕುಟುಂಬ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಈವರೆಗೂ ಅತ್ಯುನ್ನತ ಪ್ರಶಸ್ತಿಗಳಾದ ಗ್ಲೋಬಲ್ ಹ್ಯುಮಾನಿಟೆರಿಯನ್ ಪ್ರಶಸ್ತಿ, ಗ್ರಾಮ್ಮಿ ಪ್ರಶಸ್ತಿ ಇತ್ಯಾದಿಗಳಿಗೆ ಭಾಜನರಾಗಿರುವ ರಿಕ್ಕಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ.
ರಿಕ್ಕಿ ಕೇಜ್ ಹಿಂದೆ ವಿಧಾನ ಸೌಧಕ್ಕೆ 60 ವರ್ಷ ತುಂಬಿದ ಸಂದರ್ಭದಲ್ಲಿ ಸೌಧದ ಅದರ ಮುಂದೆ ಸಂಗೀತ ಸಂಜೆ ನಡೆಸಿದ್ದರು. ಸದ್ಯ ಏ.22 ರಂದು ತಾವು ಇರುವ ಜಾಗದಲ್ಲೇ ಒಂದು ಸಂಗೀತ ಕಾರ್ಯಕ್ರಮ ನಡೆಸಿ ಅದು ವಿಶ್ವದ ನಾನಾ ಕಡೆ ಪ್ರಸಾರ ಆಗುವಂತೆ ಪ್ಲಾನ್ ಮಾಡಿರುವ ಇವರು ಈ ಸಂಬಂಧ ಎಲ್ಲೆಲ್ಲಿ ಕಾರ್ಯಕ್ರಮ ವೀಕ್ಷಣೆ ಸಾಧ್ಯ ಎಂಬುದರ ಪಟ್ಟಿ ಬಿಡುಗಡೆ ಮಾಡಿದ್ದಾರೆ.
'ರಿಕ್ಕಿ ಕೇಜ್ ಲೈವ್ ಅಟ್ ಒನ್ ಪೇಜ್ ಸ್ಪಾಟ್ ಲೈಟ್' ಅಲ್ಲಿ ಮೊದಲನೇ ಪ್ರಸಾರ ಭಾರತದಲ್ಲಿ 8 ಗಂಟೆಗೆ, ಆಮೇಲೆ ಟೋಕ್ಯೊ, ಶಾಂಘೈ, ಸಾಒ ಪೋಲೋ, ಲಂಡನ್, ನ್ಯೂಯಾರ್ಕ್, ಬರ್ಲಿನ್, ಸಿಂಗಾಪೂರ, ಮಾಸ್ಕೋ, ರೋಮ್, ಹೆಲ್ಸಿಂಕಿ, ಲಾಸ್ ಏಂಜಲೀಸ್, ಹ್ಯೂಸ್ಟನ್, ಜಿನೆವಾ ಅಲ್ಲಿ ಪ್ರಸಾರ ಆಗುತ್ತದೆ. ರಿಕ್ಕಿ ಕೇಜ್ ವಿಶ್ವ ಭೂಮಿ ದಿವಸದ ಎರಡನೇ ಪ್ರಸಾರ ನ್ಯೂಯಾರ್ಕ್, ಲಾಸ್ ಏಜಂಲಿಸ್, ಟೋಕಿಯೋ, ಶಾಂಘೈ, ಪೌಲೊ, ಬ್ಯೂನಸ್ ಏರಿಸ್, ಇಸ್ತಾಂಬೂಲ್, ಲಂಡನ್, ಸಿಡ್ನಿ, ಸಿಂಗಾಪೂರ, ರೋಮ್ ದೇಶಗಳಲ್ಲಿ ಪ್ರಸಾರವಾಗಲಿದೆ.