ETV Bharat / sitara

ನಾಳೆ 'ಪುನೀತ್​ ನಮನ' ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ ಸೌತ್​ ಸಿನಿಮಾ ರಂಗ..

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿರುವ 'ಪುನೀತ್ ನಮನ'(puneeth Namana) ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನಿಕಾಂತ್( super star Rajanikanth),ತಮಿಳು ನಟರಾದ ವಿಜಯ್, ವಿಶಾಲ್, ಅಜಿತ್, ಆರ್ಯ, ವಿಜಯ್ ಸೇತುಪತಿ, ತೆಲುಗು ಕಲಾವಿದರಾದ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi), ಅಲ್ಲು ಅರ್ಜುನ್ ಹಾಗೂ ಮತ್ತಿತರ ದಕ್ಷಿಣ ಭಾರತದ ಸ್ಟಾರ್​ ನಟರು ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ..

South actors to attend puneeth namana programme
ಪುನೀತ್​ ನಮನ
author img

By

Published : Nov 15, 2021, 3:38 PM IST

ಕನ್ನಡ ಚಿತ್ರರಂಗದ ರಾಜರತ್ನ, ಅಭಿಮಾನಿಗಳ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್(Power star Puneeth Rajkumar) ನಿಧನರಾಗಿ 18 ದಿನಗಳು ಕಳೆಯುತ್ತಿವೆ. ಆದರೆ, ಪುನೀತ್ ರಾಜ್‍ಕುಮಾರ್ ಮಾಡಿರೋ ಸಮಾಜಮುಖಿ ಕೆಲಸಗಳು ಹಾಗೂ ಆ ಸರಳತೆ ನೆನೆದು ಇವತ್ತಿಗೂ ಕೋಟ್ಯಂತರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ‌.

ಕನ್ನಡ ಚಿತ್ರರಂಗದಲ್ಲಿ ಹೈಪ್ರೊಫೈಲ್ ಹೀರೋ ಆಗಿದ್ದ ಪುನೀತ್ ರಾಜ್‍ಕುಮಾರ್, ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರ ಹೀರೋ ಆಗಿದ್ದರು. ಪುನೀತ್ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ಅಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಲಾಸ್ ಆಗಿದೆ.

ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ನವೆಂಬರ್ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ(Puneeth Namana programme)ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿರುವ ಪುನೀತ್ ನಮನ ಕಾರ್ಯಕ್ರಮಕ್ಕೆ ಇಡೀ ದಕ್ಷಿಣ ಭಾರತದ ಚಿತ್ರರಂಗದ ತಾರೆಯರು ಸಾಕ್ಷಿಯಾಗಲಿದ್ದಾರೆ‌ ಅಂತಾ ಫಿಲ್ಮ್ ಚೇಂಬರ್(film chamber) ಮೂಲಗಳು ತಿಳಿಸಿವೆ.

ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಈ ಕಾರ್ಯಕ್ರಮಕ್ಕೆ ಡಾ. ರಾಜ್‌ಕುಮಾರ್‌ ಕುಟುಂಬದ ಸದಸ್ಯರ ಜೊತೆಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್​​ಗಳು ಈ 'ಪುನೀತ್ ನಮನ'(Puneeth Namana)ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರಂತೆ‌. ಫಿಲ್ಮ್ ಚೇಂಬರ್ ಆಪ್ತ ಮೂಲಗಳ ಪ್ರಕಾರ, ಪರಭಾಷೆಯ 40ಕ್ಕೂ ಹೆಚ್ಚು ಕಲಾವಿದರಿಗೆ ಆಹ್ವಾನ‌ ನೀಡಲಾಗಿದೆಯಂತೆ.

ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ತಮಿಳು ನಟರಾದ ವಿಜಯ್, ವಿಶಾಲ್, ಅಜಿತ್, ಆರ್ಯ, ವಿಜಯ್ ಸೇತುಪತಿ, ತೆಲುಗು ಕಲಾವಿದರಾದ ಮೆಗಾಸ್ಟಾರ್ ಚಿರಂಜೀವಿ, ಅಲ್ಲು ಅರ್ಜುನ್(Allu Arjun), ಜೂನಿಯರ್ ಎನ್‌ಟಿಆರ್, ಪ್ರಭಾಸ್(Prabhas) ರಾಮ್‌ ಚರಣ್ ತೇಜಾ, ರಾಣಾ ದಗ್ಗು ಬಾಟಿಯಾ, ಪ್ರಭುದೇವ, ಪ್ರಕಾಶ್ ರೈ(Prakash Rai) ಹಾಗೂ ಮಲಯಾಳಂ ನಟರಾದ ಮೋಹನ್‌ಲಾಲ್, ದುಲ್ಕಾರ್ ಸಲ್ಮಾನ್(Dulquer Salmaan) ಸೇರಿದಂತೆ ಪ್ರಮುಖ ಕಲಾವಿದರು ಭಾಗಿ ಆಗುವ ನಿರೀಕ್ಷೆ ಇದೆ.

ಕನ್ನಡ ಚಿತ್ರರಂಗದ 142 ಕಲಾವಿದರಿಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ರವಿಚಂದ್ರನ್, ಸುದೀಪ್, ಯಶ್, ಗಣೇಶ್, ಉಪೇಂದ್ರ,ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಧನಂಜಯ್, ವಸಿಷ್ಠ ಸಿಂಹ, ರಮೇಶ್ ಅರವಿಂದ್, ಸುಮಲತಾ ಅಂಬರೀಶ್(Sumalatha Ambarish), ಹಿರಿಯ ನಟಿ ಬಿ ಸರೋಜಾದೇವಿ ಸೇರಿದಂತೆ ಇಡೀ ಕನ್ನಡ ಚಿತ್ರರಂಗದ ನಟರು, ನಟಿಯರು ಹಾಗೂ ಪೋಷಕ ಕಲಾವಿದರು ಪುನೀತ್ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಅಂತಾ ಚಲಚಚಿತ್ರ ವಾಣಿಜ್ಯ ಮಂಡಳಿಯ ಕೆಲ ಮೂಲಗಳು ತಿಳಿಸಿವೆ.

ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(cm Basavaraja Bommai),ಸಚಿವರು, ಪ್ರಮುಖ ರಾಜಕೀಯ ಮುಖಂಡರು ಸಹ ಭಾಗಿ ಆಗುವ ಸಾಧ್ಯತೆ ಇದೆ. ನಾಳೆ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆವರೆಗೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಪಾಸ್ ಕಡ್ಡಾಯವಾಗಿ ವ್ಯವಸ್ಥೆ ಮಾಡಲಾಗಿದೆ. ನಾಳೆ ಇಡೀ ಕನ್ನಡ ಚಿತ್ರರಂಗದಲ್ಲಿ ಚಿತ್ರ ಪ್ರದರ್ಶನ ಬಿಟ್ಟು, ಉಳಿದ ಸಿನಿಮಾ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಎರಡು ಸಾವಿರ ಜನರಿಗೆ ಮಾತ್ರ ಅವಕಾಶವಿದೆ. ಪುನೀತ್ ಅಭಿಮಾನಿಗಳಿಗೆ ಮಾಧ್ಯಮಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಕಾರ್ಯಕ್ರಮ ನೋಡುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಕನ್ನಡ ಚಿತ್ರರಂಗದ ರಾಜಕುಮಾರನ ನುಡಿ ನಮಕ್ಕೆ ಸಕಲ ಸಿದ್ಧತೆಗಳು ಆಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.