ಬೆಂಗಳೂರು: 'ಯುವರತ್ನ' ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಇನ್ನು ಪವರ್ ಸ್ಟಾರ್ ಈ ಚಿತ್ರದಲ್ಲಿ ತುಂಬಾ ಲಾಂಗ್ ಗ್ಯಾಪ್ ನಂತರ ಕಾಲೇಜ್ ಸ್ಟೂಡೆಂಟ್ ಪಾತ್ರ ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಚಿತ್ರದ ಮೇಲೆ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಅಲ್ಲದೆ ಈ ಚಿತ್ರದಲ್ಲಿ ಅಪ್ಪು ಜೊತೆ ಮೊದಲ ಬಾರಿಗೆ ದೂದ್ ಪೇಡಾ ದಿಗಂತ್ ಕಾಣಿಕೊಳ್ಳುತ್ತಿದ್ದು, ಐಎಎಸ್ ಅಧಿಕಾರಿ ಪಾತ್ರವನ್ನು ಮಾಡ್ತಿದ್ದಾರೆ.
ಈಗ ಚಿತ್ರತಂಡದಿಂದ ಮತ್ತೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಅದೇನಪ್ಪ ಅಂದ್ರೆ "ಯುವರತ್ನ" ಟೀಂಗೆ ಈಗ ಮತ್ತೋರ್ವ ಸ್ಟಾರ್ ನಟಿ ಎಂಟ್ರಿ ಕೊಟ್ಟಿದ್ದಾರೆ. ಹೌದು, ಸ್ಯಾಂಡಲ್ವುಡ್ನ ಮುದ್ದು ಮುಖದ ಚೆಲುವೆ ಗುಳ್ಟು ಬೆಡಗಿ ಸೋನುಗೌಡ ಯುವರತ್ನ ಚಿತ್ರದಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಚಿತ್ರದ ಶೂಟಿಂಗ್ ಗುರುವಾರದಿಂದ ಬೆಂಗಳೂರಿನಲ್ಲಿ ಶುರುವಾಗಲಿದ್ದು, ಯುವರತ್ನ ಟೀಂ ಸೇರಿರುವುದಾಗಿ ನಟಿ ಸೋನುಗೌಡ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಅಲ್ಲದೆ ಪಾತ್ರದ ಬಗ್ಗೆ ಸಿಕ್ರೇಟ್ ಮೆಂಟೈನ್ ಮಾಡಿದ್ರು. ಇನ್ನು ಸೋನುಗೌಡ ಐ ಲವ್ ಯೂ ಚಿತ್ರದಲ್ಲೂ ನಟಿಸಿದ್ದರು. ಉಪೇಂದ್ರ ಅವರ ಈ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣ್ತಿದೆ.
ಅಲ್ಲದೆ ಈ ಹಿಂದೆ ಸೋನುಗೌಡ ಅವರು ಅಪ್ಪು ಜೊತೆ ರಾಮ್ ಚಿತ್ರದಲ್ಲಿ ನಟಿಸಿದ್ರು. ಅಲ್ಲದೆ ರಾಮ್ ಚಿತ್ರ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ಮತ್ತೆ ಸೋನುಗೌಡ ಯುವರತ್ನ ಚಿತ್ರದಲ್ಲಿ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.