ETV Bharat / sitara

ಕೃಷ್ಣನೊಂದಿಗೆ 'ಶುಗರ್​​ ಫ್ಯಾಕ್ಟರಿ'ಗೆ ಹೋಗುತ್ತಿರುವ ಸೋನಾಲ್ ಮಾಂಟೆರೊ - Sonal Manteiro New movie

'ಪಂಚತಂತ್ರ' ಸಿನಿಮಾ ಖ್ಯಾತಿಯ ಸೋನಾಲ್ ಮಾಂಟೆರೊ ದೀಪಕ್ ನಿರ್ದೇಶನದ 'ಶುಗರ್ ಫ್ಯಾಕ್ಟರಿ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮೂವರು ನಾಯಕಿಯರಲ್ಲಿ ಸೋನಾಲ್ ಕೂಡಾ ಒಬ್ಬರಾಗಿದ್ದು ಜನವರಿಯಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

Sonal Manteiro New movie
ಸೋನಾಲ್ ಮಾಂಟೆರೊ
author img

By

Published : Nov 9, 2020, 7:57 AM IST

'ಲವ್​​ ಮಾಕ್​ಟೇಲ್' ಸಿನಿಮಾ ಯಶಸ್ವಿಯಾಗುತ್ತಿದ್ದಂತೆ ಕೃಷ್ಣ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಲವ್ ಮಾಕ್​ಟೇಲ್ ಸೀಕ್ವೆಲ್, ಕೃಷ್ಣ ಜಿಮೇಲ್.ಕಾಮ್ ಜೊತೆಗೆ ಶುಗರ್ ಫ್ಯಾಕ್ಟರಿ ಎಂಬ ಚಿತ್ರದಲ್ಲಿ ಕೂಡಾ ಕೃಷ್ಣ ನಟಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ಯಾರು ಎಂಬುದು ಈಗ ಫೈನಲ್ ಆಗಿದೆ.

'ಪಂಚತಂತ್ರ' ಖ್ಯಾತಿಯ ಸೋನಾಲ್ ಮಾಂಟೆರೊ 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಕೃಷ್ಣನಿಗೆ ಜೊತೆಯಾಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಥಾಹಂದರ ಇರುವ ಚಿತ್ರ. ಚಿತ್ರದಲ್ಲಿ ಕೃಷ್ಣನಿಗೆ ಮೂವರು ನಾಯಕಿಯರು ಇದ್ದಾರಂತೆ. ಈ ಪೈಕಿ ಮೊದಲ ನಾಯಕಿಯಾಗಿ ಸೋನಾಲ್ ಆಯ್ಕೆಯಾಗಿದ್ದು, ಇನ್ನಿಬ್ಬರು ನಾಯಕಿಯರ ಹುಡುಕಾಟ ನಡೆದಿದೆ. ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗುವುದರಿಂದ ಅಷ್ಟರಲ್ಲಿ ಇನ್ನಿಬ್ಬರು ನಾಯಕಿಯ ಹಾಗೂ ಉಳಿದ ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಚಿತ್ರೀಕರಣ ಆರಂಭಿಸುವುದಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಸೋನಾಲ್ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಚಿತ್ರದ ಮೂಲಕ ದೀಪಕ್ ಅರಸ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ದೀಪಕ್, ನಟಿ ಅಮೂಲ್ಯ ಅವರ ಸಹೋದರ. ಈ ಹಿಂದೆ 'ಮನಸಾಲಜಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ನಂತರ ಇತರ ಕೆಲಸಗಳಲ್ಲಿ ಬ್ಯುಸಿ ಆಗಿದ್ದ ಅವರು ಈಗ ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ಶುಗರ್ ಫ್ಯಾಕ್ಟರಿ ಚಿತ್ರವನ್ನು ನಿರ್ದೇಶ ಕೂಡಾ ಮಾಡುತ್ತಿದ್ದಾರೆ.

'ಬಹದ್ದೂರ್' ಚೇತನ್ ಈ ಚಿತ್ರಕ್ಕೆ ಸಂಭಾಷಣೆ ರಚಿಸುತ್ತಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್​​​​ನಲ್ಲಿ ಗಿರೀಶ್ ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕಬೀರ್ ರಫಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಬೆಂಗಳೂರು, ಮೈಸೂರು, ಗೋವಾ ಹಾಗೂ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.