ಮುಂಬೈ : 2004 ರಲ್ಲಿ ಬಾಲಿವುಡ್ಗೆ ಪದಾರ್ಪಣೆ ಮಾಡಿದ ನಟಿ ಸೋಹಾ ಅಲಿ ಖಾನ್ ಆಯ್ದ ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. 2018 ರಲ್ಲಿ ಬಿಡುಗಡೆಯಾದ 'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್ 3' ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ನಂತರ ಈ ವರ್ಷ ವೆಬ್ ಸರಣಿಯಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
'ಕೌನ್ ಬನೇಗಿ ಶಿಖರವತಿ' ಎಂಬ ವೆಬ್ ಸರಣಿ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿರುವ ಈ ನಟಿ, OTT ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೆಚ್ಚಿನ ಆ್ಯಕ್ಟಿಂಗ್ ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳಲು ಒಟಿಟಿ ಜಾಗವು ತುಂಬಾ ಉತ್ತೇಜನಕಾರಿಯಾಗಿದೆ. ನಾನು ನನ್ನ ನಟನಾ ವೃತ್ತಿ ಪ್ರಾರಂಭಿಸಿದಾಗ ಜನರು ಹೆಚ್ಚಾಗಿ ಮಹತ್ವಾಕಾಂಕ್ಷೆಯ ವಿಷಯವನ್ನು ಹುಡುಕುತ್ತಿದ್ದರು. ಆದರೆ ಈಗ ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆ ಕಾಣಬಹುದು. ಈಗ ಜನರು ಅವರ ನಡವಳಿಕೆಯನ್ನ( ಸಾಪೇಕ್ಷತೆ) ಹುಡುಕುತ್ತಿದ್ದಾರೆ ಎಂದಿದ್ದಾರೆ.
ಜನರು ತಮ್ಮ ಸ್ವಂತ ಕಥೆಯನ್ನು ನೋಡಲು ಬಯಸುತ್ತಾರೆ. ಅದಕ್ಕಾಗಿಯೇ OTT ನನಗೆ ಹೆಚ್ಚು ಆಸಕ್ತಿದಾಯಕ ಸ್ಥಳವಾಗಿದೆ. ಸರಣಿಯಲ್ಲಿ ಕಥೆಯನ್ನು ಹೇಳುವ ಈ ಕಲ್ಪನೆ ನಿಜಕ್ಕೂ ಅದ್ಭುತ. ಇಲ್ಲಿ ಪ್ರತಿ ಪಾತ್ರಕ್ಕೂ ಸ್ಥಳಾವಕಾಶವನ್ನು ನೀಡುವ ಜೊತೆಗೆ ಮಹತ್ವ ನೀಡಲಾಗುತ್ತದೆ ಎಂದು ನಟಿ ಸೋಹಾ ಅಲಿ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಕೌನ್ ಬನೇಗಿ ಶಿಖರವತಿ' ಕಾರ್ಯಕ್ರಮವು ನಾಸಿರುದ್ದೀನ್ ಶಾ, ಲಾರಾ ದತ್ತಾ, ಕೃತಿಕಾ ಕಮ್ರಾ ಮತ್ತು ರಘುಬೀರ್ ಯಾದವ್ ಸೇರಿದಂತೆ ಇತರರನ್ನು ಒಳಗೊಂಡಿದೆ. ಜನವರಿ 7 ರಂದು ZEE 5 ನಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ನಟಿ ಸೋಹಾ 'ರಂಗ್ ದೇ ಬಸಂತಿ', 'ಖೋಯಾ ಖೋಯಾ ಚಂದ್', 'ದಿಲ್ ಮಾಂಗೆ ಮೋರ್', 'ಮುಂಬೈ ಮೇರಿ ಜಾನ್', ಮತ್ತು 'ಮಿಡ್ನೈಟ್ ಚಿಲ್ಡ್ರನ್' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.