ETV Bharat / sitara

ವಾರ ಪೂರ್ತಿ ಕೆಲಸ, ವಾರಂತ್ಯದಲ್ಲಿ ಸಿನಿಮಾ; ಪತಿ ಸಿನಿಮಾ ಕನಸಿಗೆ ಹಣ ಹೂಡಿದ ಸಾಫ್ಟ್‌ವೇರ್ ಎಂಜಿನಿಯರ್..! - ಶ್ರೀಧರ್ ಕಶ್ಯಪ್ ಸಂಗೀತ

‘ಸತ್ತ ನಂತರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ವೈದ್ಯೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಆಕೆ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಕೊಲೆ ಆಗಿದೆಯೋ ಎಂಬುದು ‘ಇಂಜೆಕ್ಟ್ 0.7’ ಸಿನಿಮಾದ ಮುಖ್ಯ ತಿರುಳು.

ಇಂಜೆಕ್ಟ್ 0.7
author img

By

Published : Sep 25, 2019, 2:58 PM IST

ಸಾಮಾನ್ಯವಾಗಿ ಟೆಕ್ಕಿಗಳು ಅಂದರೆ ನಮಗೆ ತಕ್ಷಣ ಹೊಳೆಯೋದು ವಾರದ 5 ದಿನ ಕೆಲ್ಸ, ಮತ್ತೆರಡು ದಿನ ಭರ್ಜರಿ ಪಾರ್ಟಿ. ಆದರೆ ಇಲ್ಲೊಂದು ಟೆಕ್ಕಿಗಳ ತಂಡ ವಾರ ಪೂರ್ತಿ ಆಫೀಸಿನಲ್ಲಿ ಕೆಲಸ, ವಾರಂತ್ಯದಲ್ಲಿ ಸಿನಿಮಾ ಅಂತ ತಲೆಕೆಡಿಸಿಕೊಂಡಿದ್ದಾರೆ. ಕೊನೆಗೂ ಎರಡು ವರ್ಷಗಳಿಂದ ಇವರು ಮಾಡುತ್ತಿದ್ದ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ.

'ಇಂಜೆಕ್ಟ್ 0.7' ಆಡಿಯೋ ಬಿಡುಗಡೆ ಕಾರ್ಯಕ್ರಮ

ನಿರಂಜನ್ ಹೆಚ್​​.ಹೆಚ್​​​​ ಎಂಬುವವರು ‘ಇಂಜೆಕ್ಟ್ 0.7’ ಎಂಬ ಸಿನಿಮಾ ತಯಾರಿಸಿದ್ದು ನಿನ್ನೆ ಚಿತ್ರದ ಆಡಿಯೋ ಲಾಂಚ್ ಮಾಡಲಾಗಿದೆ. ಈಗಾಗಲೇ ಐಟಿ ಬಿಟಿಯ ಸಾಕಷ್ಟು ಮಂದಿ ಸಿನಿಮಾ ಸೆಳೆತಕ್ಕೆ ಸಿಕ್ಕಿದ್ದು ಅಂಥವರ ಸಾಲಿಗೆ ನಿರಂಜನ್ ಸೇರಿದ್ದಾರೆ. ಕಥೆ, ಚಿತ್ರಕಥೆ, ನಿರ್ದೇಶನ ಮಾಡುವುದರ ಜೊತೆಗೆ ನಿರಂಜನ್ ನಾಯಕನಾಗಿ ಕೂಡಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಜೊತೆಗೆ ಚಿತ್ರದಲ್ಲಿ ಡಬಲ್ ರೋಲ್​​​​ನಲ್ಲಿ ನಟಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್, ಮರ್ಡರ್ ಮಿಸ್ಟರಿ ಕಥೆ ಹೊಂದಿದ್ದು ‘ಸತ್ತ ನಂತರ ಜೀವನ ಹೇಗಿರುತ್ತದೆ ಎಂಬುದನ್ನು ತಿಳಿಯಲು ವೈದ್ಯೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಆಕೆ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಅಥವಾ ಕೊಲೆ ಆಗಿದೆಯೋ ಎಂಬುದು ಕಥೆಯ ಮುಖ್ಯ ತಿರುಳು. ಸಿನಿಮಾದಲ್ಲಿ ಡಾಕ್ಟರ್ ಪಾತ್ರದಲ್ಲಿ ಪೂಜಾ ಗೌಡ ನಟಿಸಿದ್ದಾರೆ. ಚಿತ್ರದಲ್ಲಿ ನಾಯಕ-ನಾಯಕಿ ಅಂತ ಯಾರೂ ಇಲ್ಲ. ಚಿತ್ರದ ಕಥೆಯೇ ಪ್ರಮುಖವಾಗಿದ್ದು, ಸುಮಾರು ನೂರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ನಿರಂಜನ್ ಹೇಳಿದ್ದಾರೆ.

INJECT 0.7 movie
'ಇಂಜೆಕ್ಟ್ 0.7' ಚಿತ್ರತಂಡ

ಇನ್ನು ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ ನೀಡಿದ್ದು ಆನಂದ್ ಆಡಿಯೋ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದೆ. ಬೆಂಗಳೂರು, ಶಿವಮೊಗ್ಗ ಸುತ್ತಮುತ್ತ 25 ದಿನಗಳು ಶೂಟಿಂಗ್ ಮಾಡಲಾಗಿದೆ. ಸಿನಿಮಾಗಾಗಿ 25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆರ್ಥಿಕ ಕೊರತೆಯಿಂದ ನಿರಂಜನ್ ಸಿನಿಮಾ ಆಸೆಯನ್ನು ಕೈ ಬಿಟ್ಟಿದ್ದರಂತೆ. ಅದಕ್ಕಾಗಿ ಜಪಾನಿನಲ್ಲಿ 2.5 ಲಕ್ಷ ರೂಪಾಯಿ ಸಂಬಳಕ್ಕಾಗಿ ಕೆಲಸಕ್ಕೆ ಸೇರಿದ್ದಾರೆ. ಆದರೆ ಸಿನಿಮಾ ಮೋಹದಿಂದ ಮತ್ತೆ ಅಲ್ಲಿ ಕೆಲಸ ಬಿಟ್ಟು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದಾರೆ. ಸಿನಿಮಾ ಬಿಡುಗಡೆ ಮಾಡಲು ಪತ್ನಿ ಪವಿತ್ರಾ ಗೌಡ ನಿರಂಜನ್ ಬೆನ್ನಿಗೆ ನಿಂತಿದ್ದಾರೆ. ಅಕ್ಟೋಬರ್​​​​ 11 ರಂದು ಸುಮಾರು 40 ಚಿತ್ರಮಂದಿರಗಳಲ್ಲಿ ಸಿನಿಮಾ ಮಾಡಲು ನಿರಂಜನ್ ರೆಡಿಯಾಗಿದ್ದಾರೆ.

Intro:ವಾರ ಪೂರ್ತಿ ಕೆಲಸ ವಾರಂತ್ಯದಲ್ಲಿ ಸಿನಿಮಾ..ಗಂಡನ ಕನಸ್ಸಿಗೆ ಹಣ ಹೂಡಿದ ಸಾಫ್ಟ್‌ವೇರ್ ಎಂಜಿನಿಯರ್,!!!

ಸಾಮಾನ್ಯವಾಗಿ ಟೆಕ್ಕಿಗಳು ಅಂದರೆ ನಮಗೆ ಮೈಂಡಿಗೆ ಬರೋದು ವಾರಪೂರ್ತಿ ಕೆಲಸ ವೀಕ್ ಎಂಡ್ ನಲ್ಲಿ ಪುಲ್ ಪಾರ್ಟಿ.ಅದ್ರೆ ಇಲ್ಲೊಂದು ಟೆಕ್ಕಿಗಳ ಟೀಂ ವಾರ ಪೂರ್ತಿ ಆಫೀಸ್ ನಲ್ಲಿ ಕೆಲಸ ವಾರಂತ್ಯದಲ್ಲಿ ಸಿನಿಮಾ ಅಂತ ತಲೆಕೆಡಿಸಿಕೊಂಡು ಕೊನೆಗೂ ಬರೋಬರಿ ಎರಡು ವರ್ಷಗಳ ನಂತರ ಸಿನಿಮಾ ಮಾಡಿ ರಿಲೀಸ್ ಮಾಡಲು ರೆಡಿಯಾಗಿದ್ದು ಇಂದು ಚಿತ್ರದ ಆಡಿಯೋ ಲಾಂಚ್ ಮಾಡಿದ್ದಾರೆ. ಎಸ್ ಈಗಾಗಲೇ ಐಟಿ ಬಿಟಿಯ ಸಾಕಷ್ಟು ಮಂದಿ ಸಿನಿಮಾ ಸೆಳೆತಕ್ಕೆ ಸಿಕ್ಕಿದ್ದು . ಅಂಥವರ ನ್ಯೂ ಲಿಸ್ಟ್ ಗೆ ನಿರಂಜನ್ ಡಬ್ಬಲ್ ಎಚ್. ಎಂಟ್ರಿ ಕೊಟ್ಟಿದ್ದು‌
‘ಇಂಜೆಕ್ಟ್ 0.7’ ಎಂಬ ಡಿಫರೆಂಟ್ ಟೈಟಲ್ ಇಟ್ಟು ಸಿನಿಮಾ ಮಾಡಿದ್ದಾರೆ.ಈ ಚಿತ್ರಕ್ಕೆ ನಿರಂಜನ್ ಡಬಲ್ ಎಚ್ ಕಥೆ ಚಿತ್ರಕಥೆ ನಿರ್ದೇಶನ ಮಾಡುವುದರ ಜೊತೆಗೆ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚಿದ್ದಾರೆ.ವಿಶೇಷ ಅಂದ್ರೆ ನಿರಂಜನ್ ಈ ಚಿತ್ರದಯ ಡ್ಯುಯಲ್ ರೋಲ್ ಪ್ಲೇ ಮಾಡಿದ್ದಾರೆ.ಇನ್ನೂ ‘ಇಂಜೆಕ್ಟ್ 0.7’ ಸಸ್ಪೆನ್ಸ್- ಥ್ರಿಲ್ಲರ್, ಮರ್ಡರ್ ಮಿಸ್ಟರಿ ಕಥೆ ಹೊಂದಿದ್ದು ‘ಸತ್ತಮೇಲೆ ಜೀವನ ಹೇಗಿರುತ್ತದೆ ಎಂಬುದನ್ನು ನೋಡಲು ವೈದ್ಯೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಆಕೆ ನಿಜವಾಗಿಯೂ ಆತ್ಮಹತ್ಯೆ ಮಾಡಿದ್ದಾಳೋ ಅಥವಾ ಕೊಲೆ ಆಗಿದೆಯೋ ಎಂಬುದು ಕಥೆಯ ಮುಖ್ಯ ತಿರುಳು. ಇದರ ಸುತ್ತ ಕಥೆ ಸಾಗುತ್ತದೆ.Body:ಇನ್ನೂ ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಪೂಜಾ ಗೌಡ ನಟಿಸಿದ್ದಾರೆ.ಇನ್ನೂ ಈ ಹೀರೋ-ಹೀರೋಯಿನ್ ಅಂತ ಯಾರೂ ಇಲ್ಲ. ಕಥೆಯೇ ಪ್ರಮುಖವಾಗಿದ್ದು ,ಸುಮಾರು ನೂರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ ಎಂದು ನಿರ್ದೇಶಕ ನಿರಂಜನ್ ತಿಳಿಸಿದ್ರು‌.ಇನ್ನು ಚಿತ್ರಕ್ಕೆ ಶ್ರೀಧರ್ ಕಶ್ಯಪ್ ಸಂಗೀತ ನೀಡಿದ್ದು,‌ಆನಂದ್ ಆಡಿಯೋ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ಇನ್ನು ‘ಇಂಜೆಕ್ಟ್ 0.7’ ಚಿತ್ರವನ್ನು ವಾರಾಂತ್ಯದಲ್ಲಿ ಶೂಟಿಂಗ್ ಮಾಡಿದ್ದು ೩೫ ದಿನಗಳಲ್ಲಿ ಚಿತ್ರದ ಶೂಟಿಂಗ್ ಮುಗಿಸಿದ್ದು,ಬೆಂಗಳೂರು ಮತ್ತು ಶಿವಮೊಗ್ಗದ ಸುತ್ತ ಶೂಟಿಂಗ್ ಮಾಡಲಾಗಿದ್ದು, 25 ಲಕ್ಷ ರೂ. ಗಳಲ್ಲಿ ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ.‌
ಇನ್ನೂ ಈ ಚಿತ್ರವನ್ನು ನಿರಂಜನ್ ಆರ್ಥಿಕಕೊರತೆಯಿಂದ
ಈ ಸಿನಿಮಾ ಆಸೆಯನ್ನೇ ಕೈಬಿಟ್ಟಿದ್ದರಂತೆ .‘ಶೂಟಿಂಗ್ ಮುಗಿದಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹಣದ ಕೊರತೆ ಇಂದ ಸಾಕಪ್ಪ ಸಿನಿಮಾ ಸಹವಾಸ
ಎಂದು ಜಪಾನ್​ನಲ್ಲಿ ತಿಂಗಳಿಗೆ 2.5 ಲಕ್ಷ ರೂ. ವೇತನದ ಉದ್ಯೋಗಕ್ಕೆ ಸೇರಿದ್ರಂತೆ . ಆದರೆ ಸಿನಿಮಾ ಮೋಹ ಇವರು ಬಿಟ್ಟರು ಅದು ಬಿಡದೆ ಜಪಾನ್ ಕೆಲಸ
ಬಿಟ್ಟು ಸ್ನೇಹಿತರ ಸಹಾಯದಿಂದ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ ನಿರಂಜನ್ ಗೆ ಸಿನಿಮಾ‌ ರಿಲೀಸ್ ಮಾಡಲು ನಿರಂಜನ್ ವೈಫ್ ಪವಿತ್ರ ಗೌಡ ಬೆನ್ನಿಗೆ ನಿಂತು ತನ್ನ ಗಂಡನ‌ ಕನಸ್ಸನು ನನಸು ಮಾಡಲು ಕೈಜೋಡಿಸಿದ್ದು
ಅಕ್ಟೋಬರ್ ೧೧ ರಂದು ಸುಮಾರು ೩೦ ರಿಂದ೪೦ ಚಿತ್ರಮಂದಿರಗಳಲ್ಲಿ ಚಿತ್ರರಿಲೀಸ್ ಮಾಡಲು ನಿರಂಜನ್ ರೆಡಿಯಾಗಿದ್ದಾರೆ.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.