ETV Bharat / sitara

ಶಕ್ತ - ಅಶಕ್ತರ ನಡುವಿನ ರಣರಂಗವೇ ಸೇನಾಪುರ... ಚಿತ್ರದ ನಾಯಕಿ ಗಾಯಕಿ ಅನನ್ಯ ಭಟ್

ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಅತಿಥಿ ಪಾತ್ರಗಳಲ್ಲಿ ಗಮನ‌ ಸೆಳೆಯುತ್ತಿದ್ದ ಗಾಯಕಿ ಅನನ್ಯ ಭಟ್ ಇದೀಗ ಚಿತ್ರವೊಂದರ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ‌.

singer ananya bhat acted in senapura film
ಸೇನಾಪುರ ಚಿತ್ರತಂಡ
author img

By

Published : Sep 25, 2021, 11:58 AM IST

ಕನ್ನಡ ಚಿತ್ರರಂಗವಲ್ಲದೇ ಬೇರೆ - ಬೇರೆ ಭಾಷೆಗಳ ಹಲವು ಹಾಡುಗಳನ್ನು ಹಾಡಿರುವ ಗಾಯಕಿ ಅನನ್ಯ ಭಟ್ ಇನ್ನೂ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಅತಿಥಿ ಪಾತ್ರಗಳಲ್ಲಿ ಗಮನ‌ ಸೆಳೆಯುತ್ತಿದ್ದ ಅನನ್ಯ ಭಟ್ ಇದೀಗ ಚಿತ್ರವೊಂದರ ಪೂರ್ಣ ಪ್ರಮಾಣದ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ‌.

ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡ ಸೇನಾಪುರ ಚಿತ್ರತಂಡ

ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಈ ಬಗ್ಗೆ ಕನ್ನಡದಲ್ಲಿ ಹಲವು ಚಿತ್ರಗಳು ಬಂದಿದೆ. ಈಗ ಇಂತಹದ್ದೇ ಕಥೆ ಆಧರಿಸಿರೋ ಸೇನಾಪುರ ಸಿನಿಮಾ ಬರುತ್ತಿದೆ. ಚಿತ್ರದಲ್ಲಿ ಅನನ್ಯ ಭಟ್ ಮುಖ್ಯ ಭೂಮಿಕೆಯಲ್ಲಿದ್ದು, ಚಿತ್ರದ ಟೀಸರ್ ಅನ್ನು ಈಗಾಲೇ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ನಿರ್ದೇಶಕ ಗುರು ಸಾವನ್, ಗಾಯಕಿ/ನಟಿ ಅನನ್ಯ ಭಟ್, ಹಿರಿಯ ನಟ ದಿನೇಶ್ ಮಂಗಳೂರು, ಎಂ. ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನ, ಅಮೂಲ್ಯ, ಪರಮೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಬಿಸಿಲು ನಾಡಿನ ಒಡಲಲ್ಲಿ ನಡೆದಿದ್ದ ದಂಧೆಯ ಕಬಂಧಬಾಹುಗಳು ಕರಾವಳಿಯ ಕಿನಾರೆಗಳವರೆಗೂ ಮೈಚಾಚಿಕೊಂಡಿತ್ತು. ಇಂತಹ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು ಇಟ್ಟುಕೊಂಡು ನಿರ್ದೇಶಕ ಗುರು ಸಾವನ್, ಚಿತ್ರಕಥೆ ಬರೆದು ಸೇನಾಪುರ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

singer ananya bhat
ಗಾಯಕಿ, ನಾಯಕಿ ಅನನ್ಯ ಭಟ್

ಮೂಲತಃ ಕುಂದಾಪುರದ ನವ ಪ್ರತಿಭೆ ಗುರುಸಾವನ್ ಹೇಳುವಂತೆ ಮೊದಲು ವೆಬ್‌ ಸೀರೀಸ್‌ಗೆ ಅಂತಲೇ ಮಾಡಲು ಚಿಂತನೆ ನಡೆಸಲಾಗಿತ್ತು. ಮುಂದೆ ಅದು ಚಿತ್ರವಾಗಿ ರೂಪಾಂತರಗೊಂಡಿತು. ಸಮಾಜ ಮತ್ತು ಪ್ರಕೃತಿ ಎಲ್ಲರಿಗೂ ಎಲ್ಲವನ್ನು ಸಮನಾಗಿ ನೀಡಿರುತ್ತದೆ. ಶ್ರೀಮಂತ - ಬಡವ ಎಂದು ಬೇಧ - ಭಾವ ತೋರಿಸುವುದಿಲ್ಲ. ನಾವು ಅವುಗಳನ್ನು ವರ್ಗ ಮಾಡಿಕೊಂಡು ಬದುಕುತ್ತಿದ್ದೇವೆ. ಪ್ರಕೃತಿ, ಸಮಾಜ, ಭೂಮಿ, ನೀರು ಅಂತ ಬಂದಾಗ ನಾವು ಹೆಣ್ಣಿಗೆ ಗೌರವ ಕೊಡುತ್ತೇವೆ. ಅದಕ್ಕಾಗಿ ಆಕೆಯಿಂದಲೇ ಕಥೆಯನ್ನು ಹೇಳಿಸಲು ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ.

ಇನ್ನು ಗಾಯಕಿ ಅನನ್ಯ ಭಟ್ ಮಾತನಾಡಿ ಕೆಲ ಮಾಹಿತಿ ಹಂಚಿಕೊಂಡರು. ಮೊದಲ ಬಾರಿ ಮಹಿಳಾ ಪ್ರಧಾನ ಕಥೆಯಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿರುವುದರ ಜೊತೆಗೆ ಎರಡು ಹಾಡುಗಳಿಗೆ ಸಂಗೀತದ ಜವಾಬ್ದಾರಿ ಹೊತ್ತುಕೊಂಡಿದ್ದಾರಂತೆ. ಇದರ ಜೊತೆಗೆ ಹಿರಿಯ ನಟ ದಿನೇಶ್‌ ಮಂಗಳೂರು, ಬಿ.ಎಂ. ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಗಾನ ಗಂಧರ್ವ ಎಸ್​​ಪಿ ಬಾಲಸುಬ್ರಹ್ಮಣ್ಯಂ ಪ್ರಥಮ ಪುಣ್ಯಸ್ಮರಣೆ

ಈ ಚಿತ್ರಕ್ಕೆ ಪ್ರಶಾಂತ್ ಸಾಗರ್​ ಅವರಛಾಯಾಗ್ರಹಣವಿದ್ದು, ಅರ್ಜುನ್ ಸಂಕಲನ, ಪ್ರಮೋದ್‌ ಮರವಂತೆ ಸಾಹಿತ್ಯ, ಅರ್ಜುನ್‌ ಶ್ರೀನಿವಾಸಯ್ಯ ಸಂಕಲನವಿದೆ. ಮಂಗಳೂರು, ಸಂಪೆಕಟ್ಟೆ ತಾಣದಲ್ಲಿ ಸೇನಾಪುರ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಕೆಲವು ಭಾವನೆಗಳ ಹೋರಾಟಗಳು, ಅಸಹನೆಯ ಯುದ್ಧವು ಇದೆ. ಶಕ್ತರ ಹೊಡೆತ ಪವರ್‌ಫುಲ್ ಆಗಿರುತ್ತೆ.

ಆದರೆ ಹಸಿದವರ ಹೊಡೆತ ರೆಬೆಲ್ ಆಗಿರುತ್ತೆ. ಶಕ್ತ - ಅಶಕ್ತರ ನಡುವಿನ ರಣರಂಗವೇ ಸೇನಾಪುರ ಎನ್ನುವ ಡೈಲಾಗ್ ಟೀಸರ್‌ದಲ್ಲಿ ಸುಂದರವಾಗಿ ಮೂಡಿ ಬಂದಿದೆ. ಅಮಿತ್‌ ಕುಮಾರ್ ಮತ್ತು ರಾಹುಲ್‌ ದೇವ್ ಜಂಟಿಯಾಗಿ ವಿಮ್‌ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಅಂಸ ಕ್ರಿಯೇಶನ್ಸ್ ಮೂಲಕ ಬಂಡವಾಳ ಹೂಡಿದ್ದಾರೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ಸೇನಾಪುರ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸಿ ತೆರಗೆ ಬರಲು ಪ್ಯಾನ್​ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.